ಚಿತ್ರದುರ್ಗ : ರೈತ ಸಮುದಾಯಕ್ಕೆ ಇಲ್ಲಿದೆ ಗುಡ್ ನ್ಯೂಸ್
ಜಿಲ್ಲಾಧಿಕಾರಿ ಇಲ್ಲಿನ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಏನದು ಜಿಲ್ಲೆಯ ರೈತರಿಗೆ ನೀಡಿದ ಸಿಹಿ ಸುದ್ದಿ..? ಇಲ್ಲಿದೆ ಮಾಹಿತಿ
ಚಿತ್ರದುರ್ಗ [ಫೆ.29]: ವಾಣಿವಿಲಾಸ ಸಾಗರ ಜಲಾಶಯದ ಅಚ್ಚುಕಟ್ಟುದಾರ ರೈತರಿಗೆ ಅಂತೂ ಸಂತಸದ ಸಂಗತಿಯೊಂದನ್ನು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ
ರವಾನಿಸಿದ್ದಾರೆ. ತೋಟಗಳ ಉಳಿಸಿಕೊಳ್ಳುವ ಸಂಬಂಧ ಕಾಲುವೆಗೆ ನೀರು ಹರಿಸಬೇಕೆಂಬ ರೈತರ ಬೇಡಿಕೆಗಳಿಗೆ ಸ್ಪಂದನೆ ದೊರೆತಿದ್ದು ಮಾರ್ಚ್ 6 ರಿಂದ ಕಾಲುವೆಗೆ ನೀರು ಹರಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮೊದಲ ಕಂತಾಗಿ 30 ದಿನಗಳವರೆಗೆ 1.21 ಟಿಎಂಸಿ ನೀರು ಪೂರೈಕೆಯಾಗಲಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾರ್ಚ 6 ರಂದು ವಿವಿ ಸಾಗಕ್ಕೆ ಬಾಗಿನ ಸಮರ್ಪಣೆ ಮಾಡಲಿದ್ದು ಅದಾದ ನಂತರವೇ ಕಾಲುವೆಗೆ ನೀರು ಬಿಡಲಾಗುತ್ತದೆ.
ಕಾಲುವೆಗೆ ನೀರು ಹರಿಸುವ ಸಂಬಂಧ ರೈತರಿಂದ ಬಂದ ಒತ್ತಡದ ಹಿನ್ನೆಲೆಯಲ್ಲಿ ಫೆಬ್ರವರಿ 26 ರಂದು ನೀರಾವರಿ ಸಲಹಾ ಸಮಿತಿ ಸಭೆ ನಡೆದಿದ್ದು ಸಭೆಯಲ್ಲಿ
ಚರ್ಚೆಯಾದ ಅಂಶಗಳನ್ನು ಆಧರಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಕಾಲುವೆಗಳ ದುರಸ್ತಿಗಾಗಿ ಒಂದುವಾರ ಸಮಯ ಬೇಕಾಗಬಹುದೆಂಬ ಜನಲಸಂಪನ್ಮೂಲ ಅಧಿಕಾರಿಗಳ ಕೋರಿಕೆ ಪರಿಗಣಿಸಿ ಮಾರ್ಚ್ 6 ರಂದು ದಿನಾಂಕ ನಿಗದಿಪಡಿಸಲಾಗಿದೆ.
ವಾಣಿ ವಿಲಾಸ ಸಾಗರ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 30 ಟಿಎಂಸಿಯಷ್ಟಿದೆ. ಜಲಾಶಯದ ಡೆಡ್ ಸ್ಟೋರೇಜ್ 1.87 ಟಿಎಂಸಿ ನೀರು ಹೊರತು ಪಡಿಸಿ 10.03 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬಹುದಾಗಿದೆ. ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಪಟ್ಟಣ ಮತ್ತು 18 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ, ಆವಿಯ ಪ್ರಮಾಣ ಹಾಗೂ ಅಚ್ಚುಕಟ್ಟುದಾರರಿಗೆ 1.21 ಟಿಎಂಸಿ ನೀರು ಒದಗಿಸಿದರೂ ಜಲಾಶಯದಲ್ಲಿ 7.84 ಟಿಎಂಸಿ ನೀರು ಉಳಿದುಕೊಳ್ಳುತ್ತದೆ. ತೋಟಗಾರಿಕೆ ಬೆಳೆಗಳಿಗೆ
ನೀರು ಬಿಟ್ಟಾಗ ಬಲ ಮತ್ತು ಎಡದಂಡೆ ನಾಲೆ ಸೇರಿ 38 ಹಳ್ಳಿಗಳಿಗೆ ಅನುಕೂಲವಾಗುತ್ತದೆ.