ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ 75 ಕಿ.ಲೋ ಮೀಟರ್ ಪಾದಯಾತ್ರೆ ಹೊರಟ ಸಿದ್ದು ಅಭಿಮಾನಿಗಳು
ಚಿತ್ರದುರ್ಗ ತಾಲ್ಲೂಕಿನ ಪಾಲ್ಲವ್ವನಹಳ್ಳಿ ಗ್ರಾಮದ ಸಿದ್ದರಾಮಯ್ಯನವರ ಅಭಿಮಾನಿಗಳು ದಾವಣಗೆರೆಗೆ ಪಾದಾಯಾತ್ರೆ ಕೈಗೊಂಡಿದ್ದಾರೆ. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ 75 ಕಿ.ಲೋ ಮೀಟರ್ ಪಾದಯಾತ್ರೆ ಹೊರಟ್ಟಿದ್ದಾರೆ.
ಚಿತ್ರದುರ್ಗ, (ಜುಲೈ.30): ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನವನ್ನು ಕೈ ಕಾರ್ಯಕರ್ತರು ಹಾಗೂ ಸಿದ್ದು ಅಭಿಮಾನಿಗಳು ಸಿದ್ದರಾಮೋತ್ಸವ ಕಾರ್ಯಕ್ರಮ ಮಾಡಲು ರೆಡಿ ಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕೋಟೆನಾಡಿನ ಸಿದ್ದು ಫ್ಯಾನ್ಸ್ ಸುಮಾರು 75 ಕಿಲೋ ಮೀಟರ್ ಪಾದಯಾತ್ರೆ ಹೊರಟ್ಟಿದ್ದಾರೆ.
ಜಿಟಿ ಜಿಟಿ ಮಳೆ ಲೆಕ್ಕಿಸದೇ ಸಿದ್ದರಾಮಯ್ಯನವರ ಅಭಿಮಾನಿಗಳು ಚಿತ್ರದುರ್ಗ ತಾಲ್ಲೂಕಿನ ಪಾಲವ್ವನಹಳ್ಳಿಯಿಂದ ದಾಣಗೆರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಪಾಲವ್ವನಹಳ್ಳಿಯಿಂದ ಹೊರಟ ಪಾದಯಾತ್ರೆ ಸುಮಾರು 75ಕಿ.ಲೋ ದಾವಣಗೆರೆಯ ಕುಂದವಾಡದಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮ ತಲುಪಲಿದೆ.
ಕೊಪ್ಪಳ: ಸಿದ್ದರಾಮೋತ್ಸವ ಅಂಗವಾಗಿ ಪಾದಯಾತ್ರೆ, ಕಾರ್ಯ್ರಮದಲ್ಲಿ 1 ಲಕ್ಷ ಕುರಿಗಾರರು ಭಾಗಿ
ಪಾಲವ್ವನಹಳ್ಳಿ ಗ್ರಾಮದಲ್ಲಿ ಅನೇಕ ಕೈ ನಾಯಕರು ಉದ್ಘಾಟನೆ ಮಾಡುವ ಮೂಲಕ ಪಾದಯಾತ್ರಗೆ ಚಾಲನೆ ದೊರಕಿತು. ಅದ್ರಲ್ಲಿ ಮಾಜಿ ಸಚಿವ ಆರ್. ಬಿ ತಿಮ್ಮಾಪುರ ಅವರೂ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಸಿದ್ದರಾಮಯ್ಯ ಅವರ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡರು. ನಂತರ ಸ್ವತಃ ತಾವು ಕೂಡ ಪಾದಯಾತ್ರೆಯಲ್ಲಿ ಸುಮಾರು 10 ಕಿ.ಲೋ ಮೀಟರ್ ನಷ್ಟು ಪಾದಯಾತ್ರೆ ಮಾಡುವ ಮೂಲಕ ಸಿದ್ದು ಅಭಿಮಾನಿಗಳು ಹುಮ್ಮಸ್ಸು ತಿಂಬಿದರು.
ಪಾಲವ್ವನಹಳ್ಳಿಯಿಂದ ಯುವಕರು ಸಿದ್ದರಾಮಯ್ಯ ಅವರ ಜನ್ಮ ದಿನದ ಪ್ರಯುಕ್ತ, ಇಡೀ ರಾಜ್ಯಕ್ಕೆ ಅವರ ಸಾಧನೆಯನ್ನು ತಿಳಿಸುವ ಸಲಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಒಬ್ಬ ನಾಯಕನಿಗೆ ಅವರ ಅಭಿಮಾನಿಗಳು ಪಾದಯಾತ್ರೆ ಮೂಲಕ ಗೌರವ ಸಲ್ಲಿಸ್ತಿರೋದಕ್ಕೆ ಅಭಿನಂದನೆಗಳು ಎಂದರು.
ಈ ಪಾದಯಾತ್ರೆಯ ಉದ್ದೇಶ ನಮ್ಮ ಜನನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಂಗವಾಗಿ, ಸುಮಾರು 75 ಕಿ.ಲೋ ಮೀಟರ್ ಪಾದಯಾತ್ರೆಯನ್ನು ಅವರ ಅಭಿಮಾನಿಗಳು ಹಾಗೂ ಕೈ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ. ಇದ್ರಲ್ಲಿ ಸುಮಾರು 100 ಕ್ಕೂ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಲಿದ್ದಾರೆ. ಅನ್ನ ಕೊಟ್ಟಂತಹ ನಮ್ಮ ದಣಿಗೆ ನಾವು ಯಾಕೆ ಶರಣಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡ್ತಿದ್ದೇವೆ. ಇದರೊಟ್ಟಿಗೆ ಪಾದಯಾತ್ರೆ ಮಾಡುವ ಮೂಲಕವೇ ದಾರಿಯುದ್ದಕ್ಕೂ ಸುಮಾರು 75 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜ್ಯಕ್ಕೆ ಬಡವರಿಗೆ ಅನ್ನ ಕೊಟ್ಟಂತಹ ನಾಯಕ ನಮ್ಮ ಸಿದ್ದರಾಮಯ್ಯ ನಮಗೆ ದೇವರಿದ್ದಂತೆ, ಅಂತಹ ದೇವರಿಗೆ ನಾವು ಯಾಕೆ ಪಾದಯಾತ್ರೆ ಮೂಲಕ ಮುಡಿಪಿಡಬಾರದು ಎಂದು ಈ ಪಾದಯಾತ್ರೆ ಹಮ್ಮಿಕೊಂಡಿದ್ದೀವಿ ಅಂತಾರೆ ಆಯೋಜಕರು.
ಪಕ್ಕದ ಜಿಲ್ಲೆಯಾದ ದಾವಣಗೆರೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಸಿದ್ದು ಅಭಿಮಾನಿಗಳು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಗೌರವ ಸಲ್ಲಿಸ್ತಿದ್ದಾರೆ. ಅದೇ ರೀತಿ ಕೋಟೆನಾಡಿನ ಸಿದ್ದು ಫ್ಯಾನ್ಸ್ ಕೂಡ ವಿಶೇಷವಾಗಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಂಗವಾಗಿ ಸುಮಾರು 75 ಕಿಲೋ ಮೀಟರ್ ಪಾದಯಾತ್ರೆ ಮಾಡಿ ಗೌರವ ನೀಡಲು ಮುಂದಾಗಿದ್ದಾರೆ.