ಕೋಲಾರ(ಜು.27): ಯುವಕನೊಬ್ಬ ತನ್ನ ತಾಯಿಗೆ ಬೆಂಕಿಯಿಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ. ಜಯರಾಮ (55) ಎಂಬವರು ತಮ್ಮ ತಾಯಿ ವೆಂಕಟಮ್ಮ (85) ಅವರಿಗೆ ಬೆಂಕಿಯಿಟ್ಟು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಟೈಲರ್ ವೃತ್ತಿ ಮಾಡುತ್ತಿದ್ದ ಜಯರಾಮ ಅವರು ತಾಯಿ ವೆಂಕಟಮ್ಮ ಪತ್ನಿ ರಾಮ ದೇವಿ ಜೊತೆ ವಾಸವಿದ್ದರು. ಜಯರಾಮ ಪತ್ನಿ ಕೃಷಿ ಕೆಲಸ ಮಾಡಿ ದಿನಗೂಲಿಗೆ ದುಡಿಯುತ್ತಿದ್ದರು.

ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ತಾಯಿಗೆ ಬೆಂಕಿ ಹಚ್ಚಿದ ಜಯರಾಮ ಸೀಲಿಂಗ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಪತ್ನಿ ರಾಮದೇವಿ ಮನೆಯಲ್ಲಿರಲಿಲ್ಲ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಯರಾಮ ಅವರು ವೆಂಕಟಮ್ಮ ಅವರ 5ನೇ ಮಗನಾಗಿದ್ದು, ಇಬ್ಬರು ಪುತ್ರರು ಸ್ವಲ್ಪ ಸಮಯದ ಹಿಂದೆ ಮೃತಪಟ್ಟಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ಕೆ. ಎಂ. ಶ್ರೀನಿವಾಸ್ ಹೇಳಿದ್ದಾರೆ.