ಬೆಳಗಾವಿ(ಮೇ.10): ವಾರ್ನಿಸ್‌ ಬಣ್ಣಕ್ಕೆ ಮಿಶ್ರಣ ಮಾಡುವ ಟರ್ಪಂಟೈನ್‌ ಸೇವಿಸಿದ ಮಗುವೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಾಳೆಕುಂದ್ರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಒಂದೂವರೆ ವರ್ಷದ ರಿಧಾ ಇಮ್ರಾನ್‌ ಜಮಾದಾರ ಎಂಬ ಮಗುವೇ ಟರ್ಪಂಟೈನ್‌ ಸೇವಿಸಿ ಸಾವನ್ನಪ್ಪಿದೆ. 

ಅನ್ನ ಸಾಂಬಾರ್‌ ಬೇಡ ನಮಗೆ ಬಿರಿಯಾನಿ ಕೊಡಿ: ಕ್ವಾರಂಟೈನ್‌ನಲ್ಲಿದ್ದವರ ಬೇಡಿಕೆ..!

ಬಾಲಕಿಯ ತಂದೆ ಇಮ್ರಾನ್‌ ತಮ್ಮ ಮನೆ ಮುಂದೆ ಮೇ 4ರಂದು ಚಕ್ಕಡಿ ಗಾಡಿಗೆ ಆಯಿಲ್‌ ಪೇಂಟ್‌ ಮಾಡಲುತ್ತಿದ್ದಾಗ ಪೇಂಟ್‌ನಲ್ಲಿ ಮಿಶ್ರಣ ಮಾಡಲು ತಂದಿದ್ದ ಟರ್ಪಂಟೈನ್‌ನ್ನು ಬಾಲಕಿ ನೀರೆಂದು ಭಾವಿಸಿ ಸೇವಿಸಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಬಾಲಕಿ ಸಾವನ್ನಪ್ಪಿದೆ.