*  ಮೈಸೂರು ಜಿಲ್ಲೆಯ ಹಣಸೂರು ತಾಲೂಕಿನ ತರೀಕಲ್‌ ಗ್ರಾಮದಲ್ಲಿ ನಡೆದ ಘಟನೆ* ಆಟ ಆಡುವಾಗ ನೀರು ತುಂಬಿದ್ದ ಬಕೆಟ್‌ಗೆ ಬಿದ್ದ ಮಗು * ಹುಡುಕಾಟ ನಡೆಸಿದ ವೇಳೆ ಮಗುವಿನ ದೇಹ ಬಕೆಟ್‌ನಲ್ಲಿ ಪತ್ತೆ 

ಹುಣಸೂರು(ಜೂ.19): ಆಟ ಆಡುವಾಗ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ತರೀಕಲ್‌ ಗ್ರಾಮದಲ್ಲಿ ನಡೆದಿದೆ. 

ಧರ್ಮಾಪುರ ಗ್ರಾಪಂ ಮಾಜಿ ಅಧ್ಯಕ್ಷ ಸುಂದರ ರಾಜ್‌ ಎಂಬುವರ ಪುತ್ರ ಸಮರ್ಥ್‌ ಮೃತಪಟ್ಟ ಕಂದಮ್ಮ. ಗುರುವಾರ ಸಂಜೆ ಸಮರ್ಥ್‌ ತನ್ನ ಇಬ್ಬರು ಅಕ್ಕಂದಿರ ಜೊತೆ ಆಟವಾಡುತ್ತಾ, ಬಚ್ಚಲು ಮನೆಯಲ್ಲಿದ್ದ ಬಕೆಟ್‌ನಲ್ಲಿ ನೀರು ತರಲು ಹೋದವನು ಮಗುಚಿ ನೀರೊಳಗೆ ಬಿದ್ದಿದ್ದಾನೆ. 

ಅನ್ಯಜಾತಿ ಯುವಕನ ಪ್ರೀತಿಸಿದ ಪುತ್ರಿ ಕೊಲೆ: ಮೈಸೂರಿನಲ್ಲಿ ಮರ್ಯಾದಾ ಹತ್ಯೆ?

ಸಾಕಷ್ಟು ಸಮಯವಾದರೂ ತಮ್ಮ ಬಾರದಿದ್ದಾಗ ಅಕ್ಕಂದಿರು ಪೋಷಕರೊಂದಿಗೆ ಹುಡುಕಾಟ ನಡೆಸಿದ ವೇಳೆ ಮಗುವಿನ ದೇಹ ಬಕೆಟ್‌ನಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.