Asianet Suvarna News

ಅನ್ಯಜಾತಿ ಯುವಕನ ಪ್ರೀತಿಸಿದ ಪುತ್ರಿ ಕೊಲೆ: ಮೈಸೂರಿನಲ್ಲಿ ಮರ್ಯಾದಾ ಹತ್ಯೆ?

* ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದ ಘಟನೆ
* ಮಗಳನ್ನು ಕೊಂದ ಬಳಿಕ ಪೊಲೀಸರಿಗೆ ಶರಣಾದ ತಂದೆ
* ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಪುತ್ರಿ 

Father Killed Daughter at Piriyapatna in Mysuru grg
Author
Bengaluru, First Published Jun 19, 2021, 7:30 AM IST
  • Facebook
  • Twitter
  • Whatsapp

ಪಿರಿಯಾಪಟ್ಟಣ(ಜೂ.19): ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಇದು ಮರ್ಯಾದಾ ಹತ್ಯೆ ಎಂಬ ಸಂಶಯ ವ್ಯಕ್ತವಾಗಿದೆ. 

ಪಟ್ಟಣದ ಗೊಲ್ಲರಬೀದಿಯ ನಿವಾಸಿ ಗಾಯತ್ರಿ (19) ಕೊಲೆಯಾದ ಯುವತಿ. ಈಕೆ ತಂದೆ ಜಯರಾಂ ಪೊಲೀಸರಿಗೆ ಶರಣಾಗಿದ್ದಾನೆ. 

ತಿಪಟೂರು;  7 ಗುಂಟೆ ಜಮೀನಿಗಾಗಿ ಬಡಿದಾಟ, ಯುವಕ ಹತ್ಯೆ

ಶುಕ್ರವಾರ ಮಧ್ಯಾಹ್ನ 12.30ರ ಸಮಯದಲ್ಲಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ತಂದೆಗೆ ಪುತ್ರಿ ಊಟ ತೆಗೆದುಕೊಂಡು ಬಂದಿದ್ದಾಳೆ. ಆಗ ಜಯರಾಂ ಮಗಳಿಗೆ ಬುದ್ಧಿಮಾತು ಹೇಳಿದರೂ ಗಾಯತ್ರಿ ಒಪ್ಪಲಿಲ್ಲ. ಆಗ ಜಯರಾಂ ಸ್ಥಳದಲ್ಲಿ ಸಿಕ್ಕ ಮಚ್ಚಿನಿಂದ ಮಗಳ ಮೇಲೆ ಬೀಸಿದ್ದಾನೆ. ಇದನ್ನು ತಡೆಯಲು ಕೈ ಅಡ್ಡ ಇಟ್ಟಾಗ ಕೈಗೆ ಏಟು ಬಿದ್ದಿದೆ. ಮತ್ತೊಮ್ಮೆ ಮಚ್ಚನ್ನು ಬೀಸಿದಾಗ ಕುತ್ತಿಗೆ ಭಾಗಕ್ಕೆ ತೀವ್ರವಾಗಿ ಗಾಯವಾಗಿ ಗಾಯತ್ರಿ ಸಾವನ್ನಪ್ಪಿದ್ದಾಳೆ.
 

Follow Us:
Download App:
  • android
  • ios