ತುಮಕೂರು(ಡಿ.24): ಮಧುಗಿರಿ ಪಟ್ಟಣದ ಚೇತನ ಆಂಗ್ಲ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಡಿಟಿ ಲಸಿಕೆ ನೀಡಿದ ಪರಿಣಾಮ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಬಾಲಕನ ಪೋಷಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇಲ್ಲಿನ ಜನರಲ್‌ ಆಸ್ಪತ್ರೆ ಎದುರು ಶವದೊಂದಿಗೆ ಪ್ರತಿಭಟಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಪಟ್ಟಣದ ಚೇತನ ಆಂಗ್ಲ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನವೀನ್‌(11) ಮೃತಪಟ್ಟಬಾಲಕ. ಈತ ತಾಲೂಕಿನ ಪುರವರ ಹೋಬಳಿ ವ್ಯಾಪ್ತಿಗೆ ಸೇರಿದ ಗೋವಿಂದನಹಳ್ಳಿ ಗ್ರಾಮದ ನರೇಂದ್ರ ಎಂಬುವವರ ಪುತ್ರ. ಸೋಮವಾರ ಚೇತನ ಆಂಗ್ಲ ಶಾಲೆಯಲ್ಲಿ 5ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಡಿಟಿ ಲಸಿಕೆ ನೀಡಲಾಗಿದೆ.

ಸಾಲುಗಟ್ಟಿನಿಂತರೂ ಸಿಗದ ಆಧಾರ್‌ ಕಾರ್ಡ್‌!

ವೀನ್‌ಗು ಕೂಡ ಲಸಿಕೆ ಹಾಕಲಾಗಿದ್ದು, ಶಾಲೆ ಬಿಟ್ಟ ನಂತರ ಮನೆಗೆ ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ತಲೆ ಸುತ್ತಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಇದಕ್ಕೆಲ್ಲಾ ಕಾರಣ ಡಿಟಿ ಇಂಜೆಕ್ಷನ್‌ನಿಂದಲೇ ನಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಮಗುವಿನ ಪೋಷಕರು ಆರೋಪಿಸಿ ಪ್ರತಿಭಟಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವಿನ ಬಗ್ಗೆ ಅನುಮಾನ:

ಪಟ್ಟಣದ ಚೇತನ ಶಾಲೆಯಲ್ಲಿ 5ನೇ ತರಗತಿಯ 72 ಮಕ್ಕಳಿಗೆ ಸೋಮವಾರ ಬೆಳಗ್ಗೆ 12 ಗಂಟೆಗೆ ಲಸಿಕೆ ನೀಡಿದ್ದು ಯಾವುದೇ ಮಗುವಿಗೂ ತೊಂದರೆ ಕಂಡು ಬಂದಿಲ್ಲ. ಒಂದು ವೇಳೆ ತೊಂದರೆ ಆಗಿದ್ದಲ್ಲಿ ಒಂದು ಗಂಟೆಯೊಳಗೆ ತೊಂದರೆ ಲಕ್ಷಣಗಳು ಕಂಡು ಬರುತ್ತಿತ್ತು. ಆದರೆ, ಸಂಜೆ 4 ಗಂಟೆವರೆಗೂ ಮಗು ಶಾಲೆಯಲ್ಲಿ ಆರೋಗ್ಯವಾಗಿದ್ದು, ಮನಗೆ ತೆರಳಿದ ನಂತರ ಏನಾದರೂ ಸಂಭವಿಸಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ರಮೇಶ್‌ಬಾಬು ತಿಳಿಸಿದ್ದಾರೆ.

ಮೈಸೂರು: JDS ಮುಖಂಡ BJPಗೆ ಸೇರ್ಪಡೆ

ಶಾಲೆಯಲ್ಲಿ ಲಸಿಕೆ ಪಡೆದ ಎಲ್ಲ ಮಕ್ಕಳೂ ಆರೋಗ್ಯವಾಗಿದ್ದು ವಿದ್ಯಾರ್ಥಿ ನವೀನ್‌ ಡಿಟಿ ಲಸಿಕೆ ಪಡೆದ ನಂತರವೂ ಶಾಲೆಯಲ್ಲಿ ಮಕ್ಕಳೊಂದಿಗೆ ಚಟುವಟಿಕೆಯಿಂದ ಕೂಡಿದ್ದ. ಆದರೆ, ಮನೆಗೆ ತೆರಳಿದ ಬಳಿಕ ಮನೆಯಲ್ಲಿ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ ಎಂದು ಡಿಡಿಪಿಐ ರೇವಣ್ಣಸಿದ್ದಯ್ಯ ತಿಳಿಸಿದ್ದು ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದ್ದಾರೆ.