ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುವವರು ಮತ್ತು ಅವುಗಳಲ್ಲಿನ ಲೋಪದೋಷ ಸರಿಪಡಿಸಲು ಸಾರ್ವಜನಿಕರು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಕೆ.ಆರ್. ನಗರದಲ್ಲಿ ನಿರ್ಮಾಣವಾಗಿದೆ.
ಮೈಸೂರು(ಡಿ.24): ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುವವರು ಮತ್ತು ಅವುಗಳಲ್ಲಿನ ಲೋಪದೋಷ ಸರಿಪಡಿಸಲು ಸಾರ್ವಜನಿಕರು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ.
ಕೆ.ಆರ್. ನಗರದಲ್ಲಿ ಟೋಕನ್ ಪಡೆಯಲು ಒಂದು ದಿನ ಮತ್ತು ತಮ್ಮ ಕೆಲಸ ಮಾಡಿಸಿಕೊಳ್ಳಲು ಮತ್ತೊಂದು ದಿನ ಬರಬೇಕಿರುವುದರಿಂದ ನಿತ್ಯ ಜನರು ನರಕ ಯಾತನೆ ಅನುಭವಿಸುವಂತಾಗಿದ್ದು ಈ ಸಮಸ್ಯೆ ಪರಿಹರಿಸುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬೆಳಗ್ಗೆ 5 ಗಂಟೆಗೆ ಕೆ.ಆರ್. ನಗರದ ಕರ್ನಾಟಕ ಬ್ಯಾಂಕಿನ ಮುಂದೆ ವೃದ್ದರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತರು ತಮ್ಮ ಕೆಲಸ ಸರಾಗವಾಗಿ ಆಗದಿರುವುದರಿಂದ ನೊಂದ ಜನರು ಹಿಡಿಶಾಪ ಹಾಕುತ್ತಿದ್ದರು.
'ಪ್ರತ್ಯೇಕ ಕರ್ನಾಟಕ ರಾಷ್ಟ್ರ ಮಾಡಿದ್ರೆ ನೆಮ್ಮದಿಯಿಂದ ಇರ್ತೀವಿ'..!
ಈ ಬಗ್ಗೆ ಕೇಳುವವರೇ ಇಲ್ಲ. ಇದರ ಜತೆಗೆ ಬ್ಯಾಂಕಿನ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸಭ್ಯತೆಯಿಂದ ವರ್ತಿಸಿ ಅವರ ಆಧಾರ್ ಕಾರ್ಡ್ ಸಂಬಂದಿತ ಕೆಲಸ ಮಾಡಿಕೊಡದಿರುವುದನು ನೋಡಿದರೆ ವ್ಯವಸ್ಥೆಯನ್ನು ಮತ್ತಷ್ಟುಶಪಿಸುವಂತೆ ಮಾಡಿದ್ದು ಚುನಾಯಿತ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ, ಹೆಚ್ಚುವರಿ ಕೇಂದ್ರ ತೆರೆಯದಿರುವುದು ಈ ಸಮಸ್ಯೆಗೆ ಕಾರಣವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿಯ ಬಗ್ಗೆ ಸಾಕಷ್ಟುಮಾತನಾಡಿದರೂ ಕೂಡ ಆಧಾರ್ ಕಾರ್ಡ್ ಮಾಡಿಸಲು ಮತ್ತು ಲೋಪ ಸರಿಪಡಿಸಿಕೊಳ್ಳುವ ಕೆಲಸ ಮಾಡಲು ಹೀಗೆ ದಿನಗಟ್ಟಲೆ ಕಾಯಬೇಕಿರುವುದು ವಿಪರ್ಯಾಸ.
'ಕಾಂಗ್ರೆಸ್ ಸರ್ಕಾರದ ರಾಜ್ಯಗಳಲ್ಲೇಕೆ ಗಲಭೆ ಇಲ್ಲ..'?
ಚುನಾಯಿತ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈಗಲಾದರು ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.
ಪುಟ್ಟಮಕ್ಕಳನ್ನು ಕೊರೆಯುವ ಚಳಿಯಲ್ಲಿ ಕರೆದುಕೊಂಡು ಬಂದು ಬ್ಯಾಂಕುಗಳ ಮುಂದೆ ಹೀಗೆ ಕಾಯುವ ಸ್ಥಿತಿ ನೋಡಿದರೆ ಆಡಳಿತ ವ್ಯವಸ್ಥೆ ಇದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದ್ದು ಆಧಾರ್ ಕಾರ್ಡ್ ಮಾಡಿಸಬೇಕಿರುವುದು ರಾಷ್ಟ್ರೀಯ ಸಮಸ್ಯೆಯೆನೊ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಸಂಬಂಧಿತರು ಉತ್ತರಿಸಬೇಕು ಎಂದು ಕೆ.ಆರ್. ನಗರದ ಇಮ್ತಿಯಾಜ್ ಹೇಳಿದ್ದಾರೆ.
