ಚಿಕ್ಕಮಗಳೂರು (ಫೆ.28):  ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಅವರು ಗುರುವಾರ ರಾಕ್‌ ಕ್ಲೈಂಬಿಂಗ್‌ ಮಾಡಿದರು.

ಜಿಲ್ಲಾ ಉತ್ಸವ ಅಂಗವಾಗಿ ಗುರುವಾರ ಜಿಲ್ಲಾ ಆಟದ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್‌ ತಿಮ್ಮಯ್ಯ ನ್ಯಾಷನಲ್‌ ಅಕಾಡೆಮಿ ಆಫ್‌ ಅಡ್ವೆಂಚರ್‌ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಕೃತಕ ಗೋಡೆಯನ್ನು ಏರುವುದನ್ನು ಏರ್ಪಡಿಸಲಾಗಿತ್ತು.

ಕೆಸರುಗದ್ದೆ ಓಟ: ಮೂರು ಬಾರಿ ಬಿದ್ದರೂ ಗುರಿ ಮುಟ್ಟಿದ ಸಚಿವ ರವಿ!..

ಈ ಸಾಹಸ ಕ್ರೀಡೆಯನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಸ್ವತಃ ಕೃತಕ ಗೋಡೆಯನ್ನು ಏರಿ ರಾಕ್‌ ಕ್ಲೈಂಬಿಂಗ್‌ ಅನುಭವ ಪಡೆದರು. ಇವರ ಜತೆಗೆ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಅವರು ಸಹ ಕೃತಕ ಗೋಡೆಯನ್ನು ಏರಿ ನೋಡುಗರ ಗಮನ ಸೆಳೆದು ಕುತೂಹಲ ಕೆರಳಿಸಿದರು.