ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ, ದಂಡ
ಚಿಕ್ಕಮಗಳೂರು ನಗರದ ಹಲವೆಡೆ ತಂಬಾಕು ನಿಯಂತ್ರಣ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೊಲೀಸ್ ಇಲಾಖೆ ಜೊತೆ ತಂಬಾಕು ನಿಯಂತ್ರಣ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, 54 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.
ಚಿಕ್ಕಮಗಳೂರು(ಜು.28): ನಗರದ ಹಲವೆಡೆ ತಂಬಾಕು ನಿಯಂತ್ರಣ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೊಲೀಸ್ ಇಲಾಖೆ ಜೊತೆ ತಂಬಾಕು ನಿಯಂತ್ರಣ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, 54 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.
ನಗರದ ಮೂಡಿಗೆರೆ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ತೊಗರಿಹಂಕಲ್ ಸರ್ಕಲ್, ಎಐಟಿ ಸರ್ಕಲ್, ಐಡಿಎಸ್‌ಜಿ ಕಾಲೇಜು ಆವರಣ, ಎಐಟಿ ಕಾಲೇಜು ಆವರಣದ ಕೆಲವು ಅಂಗಡಿಗಳ ಮೇಲೆ ತಂಬಾಕು ನಿಯಂತ್ರಣ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ ಸುಮಾರು 54 ಪ್ರಕರಣಗಳ ಪತ್ತೆ ಹಚ್ಚಿ 6,200 ರು.ಗಳನ್ನು ದಂಡ ವಿಧಿಸಿದ್ದಾರೆ.
ನಾಮಫಲಕ ಕಡ್ಡಾಯ:
ಸಾರ್ವಜನಿಕ ಸ್ಥಳಗಳಲ್ಲಿ 18 ವರ್ಷದೊಳಗಿನ ಮಕ್ಕಳು ತಂಬಾಕು ಸೇವನೆ ಮಾಡದಂತೆ ಸೂಚಿಸುವ 60*30ರ ಅಳತೆಯ ನಾಮಫಲಕ ಅಂಗಡಿಗಳಲ್ಲಿ ಪ್ರದರ್ಶನ ಮಾಡುವಂತೆ ಸೂಚಿಸಿದರು. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಆರ್.ದಿನೇಶ್, ಸಮಾಜ ಕಾರ್ಯಕರ್ತ ಎಂ.ರಾಘವೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಎಂ.ಕೆ. ಪತ್ತರ್, ಅಬಕಾರಿ ಇಲಾಖೆಯ ಆರ್.ಉಮೇಶ್, ತಾಲ್ಲೂಕು ಆರೋಗ್ಯ ಇಲಾಖೆಯ ಬಿ.ಎಚ್.ಇ.ಓ ಜೆ.ಎನ್.ಬೇಬಿ, ನಗರ ಠಾಣೆಯ ಸಿಬ್ಬಂದಿ ಕೆ.ಆರ್.ಕುಮಾರ್, ಎಲ್.ಡಿ.ಶಶಿಧರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.