ಸಖರಾಯ ಪಟ್ಟಣದ ಹಲಸಿನ ಹಣ್ಣಿಗೆ ಹೊರ ರಾಜ್ಯಗಳಲ್ಲಿಯೂ ಬಲು ಬೇಡಿಕೆ

ಚಿಕ್ಕಮಗಳೂರು ಜಿಲ್ಲೆಯ ಸಖರಾಯ ಪಟ್ಟಣದ  ಹಲಸಿನ ಹಣ್ಣಿಗೆ  ಎಲ್ಲಿಲ್ಲದ ಬೇಡಿಕೆ. ಮುಖ್ಯವಾಗಿ ಚಂದ್ರ  ಬೊಕ್ಕೆ, ರುದ್ರಾಕ್ಷಿ ಬೊಕ್ಕೆ, ಇಂಬ ಹಲಸು, ಹಾಗೂ ನಾಟಿ ಹಲಸು ಎಂಬ ಸಾಕಷ್ಟು ವಿಧಗಳಿವೆ.

chikkamagaluru sakarayapattana famous for jackfruit kannada news gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.13): ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು ಎಂಬ ಗಾದೆ ಮಾತು ರೂಢಿಯಲ್ಲಿದೆ. ಇತರ ಹಣ್ಣುಗಳಿಂತ ಹಲಸು ಕೊಂಚ ಭಿನ್ನವಾಗಿದೆ. ಎಲ್ಲಾ ವರ್ಗದ ಜನರಿಗೆ ಇಷ್ಷವಾಗಿವ ಈ ಹಲಸಿನ ಹಣ್ಣನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಬೆಳೆಯಲಾಗುತ್ತಿದೆ, ಆದ್ರೆ ಚಿಕ್ಕಮಗಳೂರು ಜಿಲ್ಲೆಯ ಸಖರಾಯ ಪಟ್ಟಣದ  ಹಲಸಿನ ಹಣ್ಣಿಗೆ ಮಾತ್ರ ಎಲ್ಲಿಲ್ಲದ ಬೇಡಿಕೆ, ಅಂತೆಯೇ ಸಖರಾಯ ಪಟ್ಟಣದಲ್ಲೀಗ ಹಲಸಿನ ಸುಗ್ಗಿ ಆರಂಭಗೊಂಡಿದೆ, ರಸ್ತೆ ಉದ್ದಗಲಕ್ಕೂ ಹಲಸಿನ ಹಣ್ಣುಗಳು ಗ್ರಾಹಕರನ್ನು ಕೈ ಬಿಸಿ ಕರೆಯುತ್ತಿದೆ. 

ಸಖರಾಯ ಪಟ್ಟಣದ ಹಲಸಿನ ಹಣ್ಣಿಗೆ ಬಲು ಬೇಡಿಕೆ
ಹಣ್ಣುಗಳಲ್ಲಿ ಹಲಸಿನ ಹಣ್ಣು ಹೆಚ್ಚು ಜನಪ್ರಿಯವಾದದ್ದು . ಇಂತಹ  ಹಲಸನ್ನು ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ, ಮುಖ್ಯವಾಗಿ ಚಿಕ್ಕಮಗಳೂರು ಜಿಲ್ಲೆಯ ಸಖರಾಯ ಪಟ್ಟಣದಲ್ಲಿ ಬೆಳೆಯಲಾಗುವ ಹಲಸಿನ ಹಣ್ಣಿಗೆ ಇತರ ರಾಜ್ಯಗಳಲ್ಲಿಯೂ ಬೇಡಿಕೆ ಇದೆ. ಹಲಸು ಸಾಮಾನ್ಯವಾಗಿ ಸಂಡಿಗೆ , ಹಪ್ಪಳ , ಪಲ್ಯ, ಪಾಯಸಗಳಲ್ಲಿ ಬಳಕೆಯಾಗುತ್ತಿದೆ, ಹಲಸಿನ ಮರವನ್ನು ಹೆಚ್ಚಾಗಿ ಪೀಠೋಪಕರಣಗಳ ತಯಾರಿಕೆಗೆ ಬಳಕೆಯಾಗುವುದರಿಂದ ಇತ್ತೀಚಿನ ವರ್ಷಗಳಲ್ಲಿ ಹಲಸಿನ ಗಿಡಿಗಳನ್ನು ಕಡೆಯಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಚಿಕ್ಕಬಳ್ಳಾಪುರ: ಮಾವು ಬೆಲೆ ದಿಢೀರ್‌ ಕುಸಿತ, ಕಂಗಾಲಾದ ಮಾವು ಬೆಳೆಗಾರರು!

ಆದ್ರೆ ಸಖರಾಯ ಪಟ್ಟಣದಲ್ಲಿರುವ ಸಾವಿರಾರು ಎಕ್ರೆರೆಯಲ್ಲಿರುವ ಅಡಿಕೆ ತೋಟದ ಬದಿಗಳಲ್ಲಿ ಹಲಸನ್ನು ಬೆಳೆಯಲಾಗುತ್ತಿದೆ, ಸಖರಾಯ ಪಟ್ಟಣದಲ್ಲಿ ಬೆಳೆಯಲಾಗುವ ಹಲಸು ಹೆಸರುವಾಸಿಯಾಗಿದೆ. ಇಲ್ಲಿನ ಬೆಳೆಗಾರರು ವರ್ಷದಲ್ಲಿ ಮೂರು ತಿಂಗಳ ಕಾಲ ಈ ಬೆಳೆಯನ್ನು ಉಪಬೆಳೆಯಾಗಿ ಬೆಳೆಯುತ್ತಿದ್ದಾರೆ, 

ರಾಜ್ಯದಲ್ಲಿಯೇ ಹೆಚ್ಚು ಪ್ರಖ್ಯಾತಿ : 
ಹಲಸಿನಲ್ಲಿ ಸಾಕಷ್ಷು ವಿಧಗಳಿವೆ, ಅವುಗಳಲ್ಲಿ ಮುಖ್ಯವಾಗಿ ಚಂದ್ರ  ಬೊಕ್ಕೆ, ರುದ್ರಾಕ್ಷಿ ಬೊಕ್ಕೆ, ಇಂಬ ಹಲಸು, ಹಾಗೂ ನಾಟಿ ಹಲಸು ಎಂದು ಸಖರಾಯ ಪಟ್ಟಣದಲ್ಲಿ ಚಂದ್ರ ಬೊಕ್ಕೆ ಹಾಗೂ ರುದ್ರಾಕ್ಷಿ ಬೊಕ್ಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇಲ್ಲಿನ ಹಲಸು ಸಕ್ಕರೆಯಷ್ಷು ಸಿಹಿಯಾಗಿದ್ದು ತಿನ್ನಲು ರುಚಿಯಾಗಿರುತ್ತದೆ.

ಮುರುಡೇಶ್ವರ ತೀರದ ಅಲೆಗೆ ಸಿಲುಕಿ Bengaluru ವಿದ್ಯಾರ್ಥಿ ಸಾವು, ಲೈಫ್ ಗಾರ್ಡ್‌ ಎಚ್ಚರಕ್ಕೆ

ಸಖರಾಯ ಪಟ್ಟಣದಲ್ಲಿ ಕಡೂರಿನಿಂದ ಚಿಕ್ಕಮಗಳೂರಿಗೆ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿಯೂ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ, ಇಲ್ಲಿ ಕೆಲವು ಕಡೆಗಳಲ್ಲಿ ಹಲಸಿನ ಹಣ್ಣನ್ನು ಹಿಡಡಿಯಾಗಿ ಮಾರಾಟಮಾಡುತ್ತಾರೆ, ಇನ್ನೂ ಕೆಲವೆಡೆ ತೊಳೆ ತೆಗೆದು ಮಾರಾಟ ಮಾಡುತ್ತಾರೆ.ಇಲ್ಲಿ ಬೆಳೆಯಲಾಗುವ ಹಲಸು ಹೆಚ್ಚು ರುಚಿಯಾಗಿರುವುದರಿಂದ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ, ಅದಕ್ಕಾಗಿಯೇ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರು ಹಲಸಿನ ಹಣ್ಣಿನ ರುಚಿಯನ್ನು ಸವಿದೇ ಮುಂದೆ ಸಾಗುತ್ತಾರೆ. ಮಹಾನಗರಗಳಿಗೆ ಹೋಲಿಸಿದರೆ ಇಲಲಿನ ಹಣ್ಣು ಹೆಚ್ಚು ರುಚಿಯಿಂದ ಕುಡಿದೆ, ಇನ್ನು ಇಲ್ಲಿನ ಹಣ್ಣು ಹೆಚ್ಚು ರುಚಿಯಿಂದ ಕೂಡಿದ್ದು ಇಲ್ಲಿನ ಹಣ್ಣಿನ ಸವಿನ್ನಿ ಸವಿಯಲು ಇಲ್ಲಿಗೆ ಬಂದು ಹಣ್ಣಿನ್ನು ಸವಿದು ಮನೆಗಳಿಗೆ ಕೊಂಡೋಯುತ್ತಾರೆ.

ಸಖರಾಯ ಪಟ್ಟಣದ ಹಲಸು ಸಿಹಿ ಹಾಗೂ ರುಚಿಯಿಂದ ಕೂಡಿದ್ದು ರಾಜ್ಯದಲ್ಲಿಯೇ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದೆ.ಆದ್ರೆ ಇದರ ಬೇಡಿಕೆ  ಹೀಗೆ ಇರಬೇಕಾದರೆ ಹಲಸಿನ ಮಾರಾಟಕ್ಕೆ ಸೂಕ್ತವಾದ ಮಾರುಕಟ್ಟೆ ಹೊದಗಿಸಿಕೊಟ್ಟೆ ಹೊರರಾಜ್ಯಗಳಲಿಯ ಸಖರಾಯ ಪಟ್ಟಣದ ಹಣ್ಣು ಪ್ರಖ್ಯಾತಿ ಪಡೆಯುತ್ತದೆ ಎಂಬುದು ಇಲ್ಲಿ ರೈತರ ಒತ್ತಾಸೆಯಾಗಿದೆ.

Latest Videos
Follow Us:
Download App:
  • android
  • ios