ಚಿಕ್ಕಬಳ್ಳಾಪುರ: ಮಾವು ಬೆಲೆ ದಿಢೀರ್‌ ಕುಸಿತ, ಕಂಗಾಲಾದ ಮಾವು ಬೆಳೆಗಾರರು!

ಹಣ್ಣುಗಳ ರಾಜ ಮಾವು. ಅದರ ಸವಿ ಸವಿಯುವದಕ್ಕೆ ಜನ ಕಾತುರಾಗಿರುತ್ತಾರೆ. ವರ್ಷಕೊಮ್ಮೆ ಬರುವ ಮಾವಿನ ಬೆಳೆಗಾಗಿ ಬೆಳೆಗಾರ ಎದರು ನೋಡುತ್ತಿರುತ್ತಾನೆ. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಮಾವಿಗೆ ಬೆಲೆ ಇಲ್ಲದೆ ರಾಶಿಯಲ್ಲೇ ಕೊಳೆಯುತ್ತಿವೆ.

Fall in mango prices: Farmers worried at chikkaballapur rav

ಚಿಕ್ಕಬಳ್ಳಾಪುರ (ಜೂ.13) ಹಣ್ಣುಗಳ ರಾಜ ಮಾವು. ಅದರ ಸವಿ ಸವಿಯುವದಕ್ಕೆ ಜನ ಕಾತುರಾಗಿರುತ್ತಾರೆ. ವರ್ಷಕೊಮ್ಮೆ ಬರುವ ಮಾವಿನ ಬೆಳೆಗಾಗಿ ಬೆಳೆಗಾರ ಎದರು ನೋಡುತ್ತಿರುತ್ತಾನೆ. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಮಾವಿಗೆ ಬೆಲೆ ಇಲ್ಲದೆ ರಾಶಿಯಲ್ಲೇ ಕೊಳೆಯುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ಬೆಲೆ ಏರಿಕೆಯತ್ತ ಮುಖ ಮಾಡಿದ್ದ ಮಾವು ಬೆಳಗಾರನಲ್ಲಿ ಸಂತಸ ಮೂಡಿಸಿತ್ತು. ಆದರೆ 10-15 ದಿನಗಳಿಂದ ಏಕಾಏಕಿ ಬೆಲೆ ಕುಸಿತ ಗೊಂಡ ಮಾವು ಬೆಳಗಾರರಿಗೆ ದಿಕ್ಕುತೋಚದಂತಾಗಿದೆ.

ಮಾರುಕಟ್ಟೆಗೆ ರೈತರು ತರುವ ಮಾವಿನ ಹಣ್ಣುಗಳನ್ನು ವ್ಯಾಪಾರಸ್ಥರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮಾವಿನ ಅವಕ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಮಾವು ಮಂಡಿಯಲ್ಲಿ ಬಾಕ್ಸ್‌ ಗಳಲ್ಲೂ ಮತ್ತು ನೆಲದ ಮೇಲೂ ರಾಶಿ ರಾಶಿಯಾಗಿ ಹಣ್ಣುಗಳೇ ರಾರಾಜಿಸುತ್ತಿವೆ. ಜಿಲ್ಲೆಯಲ್ಲಿ ಈ ಬಾರಿ ಮಾವಿನ ಹಣ್ಣುಗಳ ಬೆಳೆ ನೂರಕ್ಕೆ ಶೇಕಡಾ ತೊಂಬತ್ತರಷ್ಟುಚೆನ್ನಾಗಿಯೇ ಬೆಳೆದು ಉತ್ತಮ ಫಸಲು ರೈತನ ಕೈ ಸೇರಿದೆ.

 

ರೇಷ್ಮೆ ಗೂಡು ಬೆಲೆ ಕುಸಿತ: ಸಾಲದ ಸುಳಿಗೆ ಸಿಲುಕಿದ ರೈತ

ಮಾರುಕಟ್ಟೆಯಲ್ಲಿ ಕೊಳೆಯುತ್ತಿರುವ ಮಾವು

ಉತ್ತಮ ಬೆಲೆ ಸಿಗುತ್ತೆ ಎಂಬ ಆಸೆಯಿಂದ ಮಾರುಕಟ್ಟೆಗೆ ತಂದರೆ ಕಡಿಮೆ ಬೆಲೆಗೆ ಮಾರಾಟವಾಗುತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಬೆಲೆಗೆ ಮಾವು ಮಾರಾಟವಾಗುತ್ತಿದೆæ. ಹಾಕಿದ ಬಂಡವಾಳ ವಾಪಸ್‌ ಬಾರದೆ ಮಾವು ಬೆಳೆಗಾರ ಕಂಗಾಲಾಗಿದ್ದಾನೆ. ಒಂದು ವರ್ಷದಿಂದ ರೈತ ,ಮಾವಿನ ಹಣ್ಣುಗಳನ್ನು ಊಜಿ ನೊಣಗಳು, ತಿಗಣೆಗಳಿಂದ ಮತ್ತು ಮಳೆ,ಗಾಳಿಗೆ ಸಿಲುಕದೆ ಜೋಪಾನವಾಗಿ ಕಾಪಾಡಿಕೊಂಡು ಬೆಳೆದು ಮಾರುಕಟ್ಟೆಗೆ ತಂದರೆ ಬೆಲೆ ಇಲ್ಲ, ಕೆಜಿಗೆ ಹತ್ತು ಇಪ್ಪತ್ತು ರುಪಾಯಂತೆ ಅಗ್ಗದ ಬೆಲೆಗೆ ಮಾರಾಟ ಆಗುತ್ತಿದೆ. ಅತ್ತ ಬಿಸಾಡಲು ಮನಸ್ಸಿಲ್ಲದೆ ಇತ್ತ ಉತ್ತಮ ಬೆಲೆಯೂ ಇಲ್ಲದೆ ಮಾರುಕಟ್ಟೆಯಲ್ಲಿಯೇ ಕೊಳೆಯುವಂತಾಗಿದೆ.

ಧಿಡೀರ್‌ ಬೆಲೆ ಕುಸಿತ

ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಚಿಕ್ಕಬಳ್ಳಾಪುರದ ಮಾವಿನ ಹಣ್ಣು ಹೊರ ದೇಶಗಳಿಗೆ ಉತ್ತಮ ದರಕ್ಕೆ ರಫ್ತಾಗುತಿತ್ತು. ಕಳೆದ ಬಾರಿಗೆ ಹೋಲಿಸಿಕೊಂಡರೇ ಮಾವಿನ ಹಣ್ಣಿನ ಬೆಲೆಯಲ್ಲಿ ಬಾರಿ ಕುಸಿತ ಕಂಡಿದೆ. ಇಮಾಯತ್‌ ಮಾವಿನ ಹಣ್ಣಿನ ಬೆಲೆ 70 ರೂಪಾಯಿದ ರಿಂದ 50 ರೂಪಾಯಿಗೆ ಕುಸಿದಿದೆ. ಮಲ್ಲಿಕಾ 50 ರಿಂದ 30ರೂಗಳಿಗೆ, ಸಿಂದೂರ 20 ರಿಂದ 12 ರೂಗಳಿಗೆ, ರಸಪೂರಿ 40ರಿಂದ 20ರೂಗಳಿಗೆ ,ಬೆನಿಷಾ 20 ರಿಂದ 15ರೂ ,ತೋತಾಪೂರಿ 20 ರಿಂದ 10ರೂಗಳಿಗೆ ಕುಸಿದಿದೆ.

ಮಾರುಕಟ್ಟೆಯಲ್ಲಿ ತುಂಬಿದ ಮಾವು

ಬೆಲೆ ಕುಸಿತಕ್ಕೆ ಕಾರಣ ಏನು ಅಂತ ಮಾರುಕಟ್ಟೆಯ ಏಜೆಂಟರುಗಳನ್ನು ಕೇಳಿದಾಗ ಅವರು ಈಬಾರಿ ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳು ಸೇರಿದಂತೆ ನೆರಯ ಆಂಧ್ರ ಪ್ರದೇಶ ಮತ್ತು ತಮಿಳು ನಾಡುಗಳಲ್ಲಿಯೂ ಎಥೇಚ್ಚವಾಗಿ ಮಾವಿನ ಫಸಲು ಬಂದಿದ್ದು, ಎಲ್ಲವೂ ಎಕ ಕಾಲಕ್ಕೆ ಮಾರುಕಟ್ಟೆಗೆ ಬಂದಿದ್ದರಿಂದ ಕೊಳ್ಳುವವರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎನ್ನುತ್ತಿದ್ದಾರೆ.

ಟೊಮೆಟೊ ಬೆಲೆ ಕುಸಿತದಿಂದ ಕಂಗಾಲಾದ ಬೆಳೆಗಾರರು

ಕಳೆದ ವರ್ಷ ಮಾವು ಇಳುವರಿ ಕಡಿಮೆಯಾಗಿ ವ್ಯಾಪಾರಿಗಳು ದಳ್ಳಾಳಿಗಳಿಗೆ ಲಾಭವಾಗಿ ರೈತನಿಗೆ ನಷ್ಟವಾದರೆ, ಈ ಬಾರಿ ಉತ್ತಮ ಫಸಲು ಬಂದರೂ ಬೆಲೆ ಇಲ್ಲದೆ ರೈತನಿಗೆ ನಷ್ಟಉಂಟಾಗಿದೆ. ಸರ್ಕಾರ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರಿಗೆ ಆಗಿರುವ ನಷ್ಟತುಂಬಿಸುವಂತೆ ಮಾವು ಬೆಳೆಗಾರರು ಮತ್ತು ರೈತ ಹೋರಾಟಗಾರರು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios