Chikkamagaluru ಪೊಲೀಸರಿಂದ ಗೋಮಾಂಸ ಮಾರಾಟಗಾರರಿಗೆ ವಾರ್ನಿಂಗ್ 

ಅಕ್ರಮ ಗೋಮಾಂಸ ಮಾರಾಟಗಾರರ ಪರೇಡ್ ,
30 ಜನ ಗೋಮಾಂಸ ಮಾರಾಟಗಾರರಿಗೆ ಪೊಲೀಸರಿಂದ ವಾರ್ನಿಂಗ್ 
ಚಿಕ್ಕಮಗಳೂರು ನಗರ ಠಾಣೆ ಪೊಲೀಸರಿಂದ ಪರೇಡ್ 

chikkamagaluru police Warning to beef sellers gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜೂನ್ 28): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೋ ಹತ್ಯೆ ವಿರುದ್ದ ಅಧಿಕಾರಿಗಳು, ಜನಪ್ರತನಿಧಿಗಳು ಸಮರ ಸಾರಿದ್ದಾರೆ. ನಗರಸಭೆಯ ಕ್ರಮದ ಬೆನ್ನಲ್ಲೆ ಪೊಲೀಸ್ರು ಕೂಡ ಕಾರ್ಯಚಾರಣೆಗೆ ಇಳಿದಿದ್ದಾರೆ, ಗೋ ಹತ್ಯೆ, ಮಾರಾಟಗರಿಗೆ ಪೊಲೀಸ್ರು ಖಡಕ್ ಎಚ್ಚರಿಕೆ ನೀಡಿದ್ದಾರೆ. 

 ಗೋ ಮಾಂಸ, ಮಾರಾಟಗಾರರ ಪರೇಡ್ : ಗೋಹತ್ಯೆ ನಿರ್ಬಂಧಕ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು, ಗೋಮಾಂಸ ಮಾರಾಟಗಾರರ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದ ವಿವಿಧ ಬಡಾವಣೆಗಳಲ್ಲಿ ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿರುವ ಜೊತೆಗೆ ಗೋಮಾಂಸ ಮಾರಾಟದಲ್ಲಿ ತೊಡಗಿದವರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅವರೆಲ್ಲರನ್ನೂ ಗುರುತಿಸಿ ನಗರ ಠಾಣೆ ಆವರಣದಲ್ಲಿ ಪರೇಡ್ ನಡೆಸಿ ಇನ್ನು ಮುಂದೆ ದಂಧೆಯನ್ನು ನಿಲ್ಲಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ನಗರ ಠಾಣೆ ವೃತ್ತ ನಿರೀಕ್ಷ ಗುರುಪ್ರಸಾದ್ ನೇತೃತ್ವದಲ್ಲಿ ಸುಮಾರು 30 ಮಂದಿಯನ್ನು ವಿಚಾರಣೆ ನಡೆಸಿ ಅವರ ಸಂಪೂರ್ಣ ಮಾಹಿತಿಯನ್ನು ಕಲೆಹಾಕಲಾಗಿದೆ. ಅಲ್ಲದೆ ಗೋಹತ್ಯಾ ನಿರ್ಬಂಧಕ ಕಾನೂನು ಜಾರಿಯಲ್ಲಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕಾನೂನು ಉಲ್ಲಂಘಿಸಿ ಗೋಹತ್ಯೆ, ಅಕ್ರಮ ಗೋಸಾಗಾಟ ಕಂಡುಬಂದಿಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

ದೌರ್ಜನ್ಯಕ್ಕೊಳಗಾದ SC-ST ಜನಾಂಗಕ್ಕೆ ನ್ಯಾಯ ಒದಗಿಸುವಂತೆ ಧಾರವಾಡ ಜಿಲ್ಲಾಧಿಕಾರಿ ಸೂಚನೆ

 ಹತ್ಯೆ ಕಾನೂನಿನ ಬಗ್ಗೆ ಮಾಹಿತಿ ನೀಡಿದ ಪೊಲೀಸ್ರು: ಎಚ್ಚರಿಕೆ ಜೊತೆಗೆ ನೂತನ ಕಾನೂನಿನ ಆಂಶಗಳನ್ನು ವಿವರಿಸಿ ಜಾಗೃತಿ ಮೂಡಿಸುವ ಕೆಲಸವನ್ನೂ ಪೊಲೀಸರು ಮಾಡಿದ್ದಾರೆ.ನೂತನ ಕಾನೂನು ಜಾರಿಗೆ ಬಂದ ನಂತರ ಗೋಹತ್ಯೆ ಮತ್ತು ಅಕ್ರಮ ಕಾಸಾಯಿಖಾನೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ನಗರಸಭೆ ಹಾಗೂ ಪೊಲೀಸ್ ಇಲಾಖೆ ಹೊಂದಾಣಿಕೆ ಮೇಲೆ ಕಾರ್ಯನಿರ್ವಹಿಸುತ್ತಿವೆ. ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಕಟ್ಟಡಗಳನ್ನು ಗುರುತಿಸಿ ನಗರಸಭೆ ಸಿಬ್ಬಂದಿಗಳು ನೋಟೀಸು ಜಾರಿ ಮಾಡುತ್ತಿದ್ದಾರೆ.

ಈಗಾಗಲೇ ಇಂತಹ ಎಂಟತ್ತು ಕಟ್ಟಡಗಳಿಗೆ ನೋಟೀಸು ಅಂಟಿಸಲಾಗಿದೆ. ಇನ್ನೂ ಕೆಲವರಿಗೆ ಖುದ್ದಾಗಿ ನೋಟೀಸು ನೀಡಲಾಗಿದೆ. ಗೋಹತ್ಯೆ ಹಾಗೂ ಗೋಮಾಂಸ ಮಾರಾಟವನ್ನು ಮುಂದುವರಿಸಿದಲ್ಲಿ ಕರ್ನಾಟಕ ಗೋ ಸಂರಕ್ಷಣಾ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ ಯಾವುದೇ ಮುನ್ಸೂಚನೆ ನೀಡದೆ ಕಟ್ಟಡವನ್ನು ತೆರವುಗೊಳಿಸಲಾಗುವುದು ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ.ಇಂತಹ ಕಟ್ಟಡಗಳಿಗೆ ಸಂಬಂಧಿಸಿದ ಮಾಲೀಕರು ಹಾಗೂ ಗೋಹತ್ಯೆ, ಗೋಮಾಂಸ ಮಾರಾಟ ಮತ್ತು ಸಾಗಾಣಿಕೆಯಲ್ಲಿ ತೊಡಗಿರುವವರ ಕುರಿತು ನಗರಸಭೆ ಮತ್ತು ಪೊಲೀಸ್ ಇಲಾಖೆ ಪರಸ್ಪರ ಮಾಹಿತಿ ಹಂಚಿಕೊಂಡಿವೆ. 

ರಾಯಚೂರು DC ‌ಹೆಸರಲ್ಲಿ ವಂಚನೆಗೆ ಯತ್ನ, 

ಇಂತಹ ಚಟುವಟಿಕೆಗಳ ನಿಯಂತ್ರಣಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಪೊಲಿಸ್ ಇಲಾಖೆಯನ್ನು ಕೋರಿ ಪತ್ರವನ್ನೂ ಬರೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.ಕಳೆದ ಕೆಲವು ದಿನಗಳ ಹಿಂದೆ ತಮಿಳು ಕಾಲೋನಿ ವಾರ್ಡ್ನಲ್ಲಿ ನಗರಸಭೆ ವತಿಯಿಂದ ಸಾಮೂಹಿಕ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದ ವೇಳೆ ಅಚಾನಕ್ಆಗಿ ಪತ್ತೆಯಾಗಿದ್ದ ಅಕ್ರಮ ಕಸಾಯಿಖಾನೆಯನ್ನು ನಗರಸಭೆ ಅಧ್ಯಕ್ಷರು, ಆಯುಕ್ತರು ಪೊಲೀಸರ ಸಮ್ಮುಖದಲ್ಲಿ ಕೂಡಲೇ ಜೆಸಿಬಿಯಿಂದ ನೆಲಸಮಗೊಳಿಸಲಾಗಿತ್ತು. 

ಈ ಪ್ರಕರಣದ ನಂತರ ನಗರಸಭೆ ಹಾಗೂ ಪೊಲೀಸ್ ಇಲಾಖೆ ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಗೋಹತ್ಯೆ ಕೇಂದ್ರಗಳ ಮೇಲೆ ದಾಳಿ ನಡೆಸಿ ಮಾಂಸವನ್ನೂ ವಶಪಡಿಸಿಕೊಂಡಿದೆ. ಅಲ್ಲದೆ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳುವ ಬಗ್ಗೆ ನೋಟೀಸನ್ನೂ ಜಾರಿಗೊಳಿಸಲಾಗಿತ್ತು.

ಇದೀಗ ಗೋಹಂತಕರ ಪರೇಡ್ ನಡೆಸುವ ಮೂಲಕ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಇತ್ತ ನಗರಸಭೆಯು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡು ಕಸಾಯಿಖಾನೆ ನಡೆಸುತ್ತಿರುವವರನ್ನು ಪತ್ತೆ ಹಚ್ಚಿ ಕಟ್ಟಡ ನೆಲಸಮಗೊಳಿಸಲು ಕ್ರಮ ಕೈಗೊಳ್ಳುತ್ತಿದೆ.

Latest Videos
Follow Us:
Download App:
  • android
  • ios