Chikkamagaluru: ಕಳಸ ತಾಲೂಕು ಕೇಂದ್ರವಾಗಿ ಮೂರು ವರ್ಷವಾಗಿದ್ದು, ಬಸ್ ನಿಲ್ದಾಣ ಇಲ್ಲ: ಸಾಧನೆಯೇ ಶೂನ್ಯ!
ದಕ್ಷಿಣ ಕಾಶಿ ಅಂತಾನೇ ಗುರುತಿಸಿಕೊಂಡಿರೋ ಕಳಸೇಶ್ವರ ಕ್ಷೇತ್ರ ಕಳಸ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 100 ಕಿಲೋ ಮೀಟರ್ ದೂರದಲ್ಲಿದೆ. ಕಳಸ ಅಂದ್ರೆ ಅರಣ್ಯ ಕುಗ್ರಾಮ. ದೂರದಲ್ಲಿ ಒಂದೊಂದು ಮನೆಗಳು ಇರುವ ತಾಲೂಕು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.21): ದಕ್ಷಿಣ ಕಾಶಿ ಅಂತಾನೇ ಗುರುತಿಸಿಕೊಂಡಿರೋ ಕಳಸೇಶ್ವರ ಕ್ಷೇತ್ರ ಕಳಸ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 100 ಕಿಲೋ ಮೀಟರ್ ದೂರದಲ್ಲಿದೆ. ಕಳಸ ಅಂದ್ರೆ ಅರಣ್ಯ ಕುಗ್ರಾಮ. ದೂರದಲ್ಲಿ ಒಂದೊಂದು ಮನೆಗಳು ಇರುವ ತಾಲೂಕು. ಮೊದಲು ಕಳಸ ತಾಲೂಕು ಮೂಡಿಗೆರೆ ತಾಲೂಕಿನಲ್ಲಿತ್ತು. ಕಳಸದಿಂದ ಜಿಲ್ಲಾಕೇಂದ್ರಕ್ಕೆ ಬರಬೇಕಾಂದ್ರೆ ಬರೊಬ್ಬರಿ 100ಕಿಲೋ ಮೀಟರ್ ಹೋದ್ರಷ್ಟೆ ಜಿಲ್ಲಾ ಕೇಂದ್ರವನ್ನ ನೋಡಬೇಕಿತ್ತು. ಅಲ್ಲದೆ ತಾಲೂಕು ಕೇಂದ್ರಕ್ಕೆ 70 ಕಿಲೋ ಮೀಟರ್ ವರೆಗೂ ಪ್ರಯಾಣ ಮಾಡಬೇಕಾಗಿತ್ತು.
ಈ ಹಿನ್ನೆಲೆಯಲ್ಲಿ ಕಳಸದ ಸಾವಿರಾರು ಜನರು ದಶಕದ ಹಿಂದೆ ಹೋರಾಟ ಆರಂಭಿಸಿ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಒತ್ತಾಯ ಮಾಡಿದರು. ಇದರ ಫಲವಾಗಿ ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಕಳಸ ತಾಲೂಕ ಅಂತಾ ಘೋಷಣೆಯಾದ್ರೆ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಕಳಸ ತಾಲೂಕು ಅಧಿಕೃತವೆಂದಾಯ್ತು. ಅಗಿ ಮೂರು ವರ್ಷವೇ ಕಳೆದು ಹೋಗಿದೆ. ಅದ್ರೆ ತಾಲೂಕು ಅಡಳಿತ ಮಂದಗತಿಯಲ್ಲಿದೆ. ಮೂರು ವರ್ಷದ ಸಾಧನೆಯೇ ಶೂನ್ಯ ಎನ್ನುವಂತಾಗಿರೋದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದು ಮತ್ತೊಮ್ಮೆ ಹೋರಾಟದತ್ತ ಮುಖ ಮಾಡ್ತಿದ್ದಾರೆ.
ತಾಲೂಕು ಕೇಂದ್ರದಲ್ಲಿ ಇಲ್ಲ ಬಸ್ ನಿಲ್ದಾಣ: ಇನ್ನೂ ಎರಡನೇ ಭಾರಿ ಹೋರಾಟಕ್ಕೆ ದುಮ್ಮುಕ್ಕುವಂತಾಗಿರೋದು ನಿಜಕ್ಕೂ ಬೇಸರ ಅಂತಿದ್ದಾರೆ ಇಲ್ಲಿನ ಜನರು. ತಾಲೂಕು ಕಚೇರಿಯಿದೇ..ಇನ್ನೂ ನಾಡಕಚೇರಿಯಂತೆ ಜನರು ಕರೆಯುತ್ತಿದ್ದಾರೆ..ತಹಸೀಲ್ದಾರ್ ಇದ್ದಾರೆ ಸರಿಯಾದ ಸಮಯದಲ್ಲಿ ಕೆಲಸ ಅಗ್ತಿಲ್ಲ ಅನ್ನೋ ಅರೋಪವೂ ಕೇಳಿಬಂದಿದೆ..ಉಳಿದ ಕಚೇರಿಗಳು ಇದ್ಯಾ ಇಲ್ವಾ? ಅನ್ನೋ ರೀತಿಯಲ್ಲಿದೆ.ಮೂರು ವರ್ಷ ಕಳೆದ್ರು ತಾಲೂಕು ನಲ್ಲಿ ಒಂದು ಬಸ್ ನಿಲ್ದಾಣವಿಲ್ಲ, ಅಲ್ಲದೆ ಆಡಳಿತಯಂತ್ರವನ್ನು ಚುರುಕುಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಜನರು ಆರೋಪಿಸಿದ್ದಾರೆ.
ದುರಹಂಕಾರ, ಸ್ವಾರ್ಥ ರಾಜಕಾರಣ ಶಾಶ್ವತವಲ್ಲ: ಶಾಸಕ ರಮೇಶ ಜಾರಕಿಹೊಳಿ
ಮತ್ತೆ ಹೋರಾಟದ ಮಾಡುವ ಎಚ್ಚರಿಕೆ ನೀಡಿರುವ ಕಳಸ ಗ್ರಾಮಸ್ಥರು: ತಹಸೀಲ್ದಾರ್ ಕಛೇರಿ ಬಿಟ್ಟರೆ ಉಳಿದ ಕಛೇರಿಗಳಾದ ಸರ್ವೇ ಇಲಾಖೆ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ, ಇದರಿಂದ ಆಕ್ರೋಶಗೊಂಡಿರುವ ಜನರು ಸರ್ವ ಪಕ್ಷ,ಸರ್ವ ಸಂಘಟನೆಗಳು ಹೋರಾಟದ ಚಿಂತನೆ ನಡೆಸಿದ್ದಾರೆ. ಕಾನೂನು ಸಲಹೆ ಪಡೆದು ಕಾನೂನು ಹೋರಾಟ ಜೊತೆಗೆ ಸರ್ಕಾರ ವಿರುದ್ದ ಪ್ರತಿಭಟನೆ ನಡೆಸುವ ನಿಟ್ಟಿನಲ್ಲಿ ಪ್ಲಾನ್ ರೂಪಿಸುತ್ತಿದ್ದಾರೆ. ಇದೇ ಭಾನುವಾರ ಅಂದ್ರೆ ಜೂನ್ 23 ರಂದು ಸಭೆ ನಡೆಸಿ ಹೇಗೆಲ್ಲ ಹೋರಾಟ ನಡೆಸಿ ಸರ್ಕಾರ ಛಾಟಿ ಬಿಸಬಹುದು ಅಂತಾ ತಿರ್ಮಾನಿಸೋಕೆ ಮುಂದಾಗಿದ್ದಾರೆ.ಒಟ್ಟಾರೆ ಘೋಷಣೆ,ಅಧಿಕೃತ ನೋಟಿಫಿಕೇಷನ್ ಹೊರಡಿಸಿರೋ ಸರ್ಕಾರ ತಾಲೂಕು ಅಡಳಿತ ಚುರುಕು ಮಾಡೋಕೆ ಮುಂದಾಗಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಕನಿಷ್ಠ ಮೂಲಭೂತ ಸೌಲಭ್ಯಕ್ಕಾಗಿ ಜನರು ಮತ್ತೆ ಹೋರಾಟ ನಡೆಸುವ ಹಾದಿ ಹಿಡಿದ್ದಾರೆ.