ಸ್ವಂತ ಮಕ್ಕಳಿಂದಲೇ ನರಕಯಾತನೆ ಅನುಭವಿಸಿದ ವೃದ್ಧರಿಗೆ ಮಗನಾಗಿ ನೆರವಿಗೆ ನಿಂತ ಅಧಿಕಾರಿ!

  • ಬಡಜೀವಗಳಿಗೆ ಆಸರೆಯಾದ ದಕ್ಷ, ಪ್ರಮಾಣಿಕ ಅಧಿಕಾರಿ.
  • ಎ.ಸಿ ಡಾ.ಜಿ.ಸಂತೋಷ್ ಕುಮಾರ್ ಅವರ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
  • ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳ ಜನಪರ ಕಾಳಜಿ ಇತರರಿಗೆ ಮಾದರ
Chikkaballapura The officer stood up to help the elderly who suffered hell from their own children rav

ಬದುಕಿನ ಸಂಧ್ಯಾಕಾಲದ ಬಡಜೀವಗಳಿಗೆ ಆಸರೆಯಾದ ದಕ್ಷ, ಪ್ರಮಾಣಿಕ ಅಧಿಕಾರಿ ಎ.ಸಿ ಡಾ.ಜಿ.ಸಂತೋಷ್ ಕುಮಾರ್. ಬಡವರ ಕಷ್ಟಗಳಿಗೆ ಸದಾ ಸ್ಪಂದಿಸುವ ಅವರ ಸಾಮಾಜಿಕ ಕಳಕಳಿ, ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. 

ಅವರು ಮಕ್ಕಳನ್ನ ಚೆನ್ನಾಗಿ ಸಾಕಿ ಸಲುಹಿ ಉತ್ತಮ ಬದುಕು ರೂಪಿಸಿಕೊಟ್ಟಿದ್ದರು. "ಇಳಿ ವಯಸ್ಸಿನಲ್ಲಿ ಆಸ್ತಿ ನಮಗ್ಯಾಕೆ" ಅಂತಾ ತಮ್ಮ ಬಳಿ ಇದ್ದ ಕೋಟಿ ಬೆಲೆ ಬಾಳೋ ಆಸ್ತಿಯನ್ನೂ ಮಕ್ಕಳಿಗೆ ಹಂಚಿಕೆ ಮಾಡಿದ್ದರು. ಆದರೆ ಹೆತ್ತವರು ಅನ್ನೋದನ್ನೇ ಲೆಕ್ಕಿಸದ ಪುತ್ರಿಯರು, ಇನ್ನಿಲ್ಲದ ಟಾರ್ಚರ್ ಕೊಟ್ಟು, ನೆಮ್ಮದಿಯ ಬದುಕಿಗೆ ಭಂಗ ತಂದಿದ್ದನ್ನ ಗಂಭೀರವಾಗಿ ಪರಿಗಣಿಸಿದ ದಕ್ಷ ಅಧಿಕಾರಿಯೊಬ್ಬರು ಮಾಡಿದ ಕೆಲಸಕ್ಕೆ ಮನುಕುಲವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಆ ಅಧಿಕಾರಿ ಮಾಡಿದ ಕಾರ್ಯವಾದರೂ ಏನು? ಅಷ್ಟಕ್ಕೂ‌ಇದೆಲ್ಲಾ ನಡೆದಿದ್ದು ಎಲ್ಲಿ ಅಂತೀರಾ ಮುಂದೆ ಓದಿ.

Har Ghar Tiranga: ಏಕಾಂಗಿ ವೃದ್ಧನಿಗೆ ಮನೆ ನಿರ್ಮಿಸಿ ಕೊಟ್ಟ ANF ಸಿಬ್ಬಂದಿ

ಇತ್ತೀಚಿನ ದಿನಗಳಲ್ಲಿ ಕೆಲಸ ಕಾರ್ಯಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರೂ, ಅಧಿಕಾರಿಗಳ ಕೈಕಾಲು ಹಿಡಿದರೂ ಕೆಲಸ ಆಗೋದು ಗ್ಯಾರೆಂಟಿ ಇಲ್ಲ. ಅಂತಹದ್ರಲ್ಲಿ ಬದುಕಿನ ಸಂಧ್ಯಾಕಾಲ್ಲೂ  ನೆಮ್ಮದಿಯ ಬದುಕಿಲ್ಲದೇ ಪುತ್ರಿಯರಿಯರಿಂದಲೇ ನರಕ ಯಾತನೆ ಅನುಭವಿಸುತ್ತಿರುವುದನ್ನ ಮನಗಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ವೃದ್ಧ ದಂಪತಿಗಳ ನೆರವಿಗೆ ನಿಂತಿದ್ದಾರೆ. ಒಂದರ್ಥದಲ್ಲಿ ವೃದ್ಧರ ಬಾಳಿಗೆ ಭರವಸೆಯ ಬೆಳಕು ತುಂಬಿದ್ದಾರೆ.

ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆ ಚಿಂತಾಮಣಿ(Chintamani) ನಗರದ ಅಜಾದ್ ಚೌಕ್(Azad Chauk) ನ 87 ವರ್ಷದ ವೆಂಕಟೇಶಾಚಾರ್(Venkatesh Achar), 67 ವರ್ಷದ ಪದ್ಮಾವತಮ್ಮ(Padmavatamma) ಮೂವರು ಪುತ್ರಿಯರಿಗೆ ಸರಿ ಸುಮಾರು ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನ ದಾನವಾಗಿ ನೀಡಿದ್ದರು. ಆದರೆ ಮಕ್ಕಳು ಬದುಕಿಗೆ ಮುಳ್ಳಾಗಿದ್ದರಿಂದ ನೊಂದ ದಂಪತಿಗಳು ನ್ಯಾಯಕ್ಕಾಗಿ ಕಂದಾಯ ಅಧಿಕಾರಿಗಳ ಮೊರೆ ಹೋದ ಪರಿಣಾಮ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಚಿಕ್ಕಬಳ್ಳಾಪುರ ಎಸಿ ಡಾ.ಜಿ.ಸಂತೋಷ್ ಕುಮಾರ್ ಹಿರಿಯ ನಾಗರೀಕ ಪೋಷಣೆ ಮತ್ತು ಶ್ರೇಯೋಭಿವೃದ್ದಿ ಹಾಗೂ ಸಂರಕ್ಷಣೆ ಕಾಯ್ದೆ 2007 ರಡಿ ಜೀವನ ನಿರ್ವಹಣೆ ಕಲಂ 23 ರ ಪ್ರಕಾರ ಮಕ್ಕಳಿಗೆ ಮಾಡಿದ್ದ ದಾನ ಪತ್ರವನ್ನ ರದ್ದುಪಡಿಸಿ, ಪೋಷಕರಿಗೆ ಮಕ್ಕಳು ಮಾಸಿಕ ತಲಾ 7 ಸಾವಿರ ನೀಡುವಂತೆ ಆದೇಶಸಿದ್ದಾರೆ. ಜೊತೆಗೆ ಪೋಷಕರಿಗೆ ಕಿರುಕುಳ ನೀಡದೇ ನೆಮ್ಮದಿಯ ಬದುಕು ರೂಪಿಸುವಂತೆ ಆದೇಶಿಸಿದ್ದಾರೆ.

ಮಾನವೀಯತೆ ಮೆರೆದ ಚಂದ್ರಾಲೇಔಟ್ ಲೇಡಿ ಇನ್ಸ್‌ಪೆಕ್ಟರ್, ಇಮ್ರಾನ್‌ಗೆ ಜ್ಞಾನೋದಯವಾಗುತ್ತಾ?

ಸ್ವಾತಂತ್ರ್ಯದ ದಿನಾಚರಣೆಯಂದು ಖುದ್ದು ವೃದ್ದ ದಂಪತಿಗಳ ಮನೆಗೆ ತೆರಳಿದ ಎ.ಸಿ. ಸಂತೋಷ್ ಕುಮಾರ್(A.C.Santosh Kumar) ಹಾಗೂ ಪತ್ನಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯೂ ಆಗಿರುವ ಡಾ.ಬಿ.ಎಸ್.ಹೇಮಲತಾ(Dr.B.S.Hemalata) ಅವರು ಫಲ ತಾಂಬೂಲದೊಂದಿಗೆ ಆದೇಶ ಪತ್ರ ವೃದ್ದ ದಂಪತಿಗಳಿಗೆ ನೀಡಿದ ಬದುಕಿನ ಭರವಸೆ ತುಂಬಿದ್ದಾರೆ.

ಕಂದಾಯ ಅಧಿಕಾರಿಯ ದಕ್ಷತೆ, ಕಾಳಜಿ, ಸರಳತೆ ಹಾಗೂ ಕಾರ್ಯಕ್ಷಮತೆಗೆ ಮೂಕವಿಸ್ಮಿತರಾದ ವೃದ್ದ ದಂಪತಿಗಳು ಅಧಿಕಾರಿಗಳ ಬದ್ದತೆಗೆ ಬಾಂಧವ್ಯಕ್ಕೆ ಆನಂದ ಬಾಷ್ಪ ಸುರಿಸಿ, ನೆಮ್ಮದಿಯ ಬದುಕಿಗೆ ಆಸರೆಯಾಗಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಒಟ್ನಲ್ಲಿ ತಮ್ಮ ಬದುಕೇ ತಮಗೆ ಸಾಕು ಅನ್ನೋ ಈ ಕಾಲದಲ್ಲಿ ನೊಂದವರು. ನಮ್ಮವರು ಅನ್ನೋ ಮನೋಭಾವನೆ ಹೊಂದಿರುವ ಚಿಕ್ಕಬಳ್ಳಾಪುರ ಎ.ಸಿ. ಡಾ.ಜಿ.ಸಂತೋಷ್ ಕುಮಾರ್ ರಂತಹ ಅಧಿಕಾರಿಗಳ ಕಾರ್ಯ ಇತರರಿಗೆ ಮಾದರಿಯಾಗಲಿ ಎಂಬುದೇ ಎಲ್ಲರ ಆಶಯ.

Latest Videos
Follow Us:
Download App:
  • android
  • ios