ಮಾನವೀಯತೆ ಮೆರೆದ ಚಂದ್ರಾಲೇಔಟ್ ಲೇಡಿ ಇನ್ಸ್‌ಪೆಕ್ಟರ್, ಇಮ್ರಾನ್‌ಗೆ ಜ್ಞಾನೋದಯವಾಗುತ್ತಾ?
ಬೆಂಗಳೂರಿನ ಚಂದ್ರಾಲೇಔಟ್ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಅವರು ವ್ಯಕ್ತಿ ಓರ್ವನಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಬೆಂಗಳೂರು, (ಜುಲೈ.05): ಸಾರ್ವಜನಿಕರಲ್ಲಿ ಪೋಲೀಸರಂದ್ರೆ ಯಾಕಪ್ಪ ಬೇಕು ಪೊಲೀಸರ ಸಹವಾಸ ಅನ್ನೊ ಸಂಸ್ಕೃತಿಬೆಳೆಸಿಕೊಂಡಿದ್ದಾರೆ.. ಆದ್ರೆ ಪೊಲೀಸರೂ ಕೂಡಾ ಮನುಷ್ಯರೇ ಭಾವನೆಗಳು ಸಂಬಂಧಗಳು ಹಾಗೂ ಮಾನವೀಯತೆಯನ್ನ ಮೆರೆದ ಸಾಕಷ್ಟು ಉದಾಹರಣೆಗಳಿವೆ ಅಂತಹದ್ದೇ ಒಂದು ಉದಾಹರಣೆ ಬೆಂಗಳೂರಿನಲ್ಲಿ ಕೂಡಾ ನಡೆದಿದೆ.
ಇಂದು(ಮಂಗಳವಾರ) ಮಧ್ಯಾಹ್ನ ಸಮಯದಲ್ಲಿ ಗಸ್ತಿನಲ್ಲಿದ್ದ ಬೆಂಗಳೂರಿನ ಚಂದ್ರಾಲೇಔಟ್ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಅವರು ವ್ಯಕ್ತಿ ಓರ್ವನಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಹೌದು... ಚಂದ್ರಾಲೇಔಟ್ ನ ಗ್ಯಾರೇಜ್ ಬಳಿ 25 ವರ್ಷದ ಇಮ್ರಾನ್ ಎಂಬ ಯುವಕನೊಬ್ಬನಿಗೆ ಏಕಾಏಕಿ ಫಿಡ್ಸ್ ಬಂದಿದ್ದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.. ಕೂಡಲೇ ಗಸ್ತಿನಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಸ್ಥಳಕ್ಕೆ ತೆರಳಿ ಅಲ್ಲಿಯೇ ಗ್ಯಾರೇಜ್ ನಲ್ಲಿ ಇದ್ದ ಕಬ್ಬಿಣವನ್ನ ತಂದು ಆತನ ಕೈಗಿಟ್ಟಿದ್ದಾರೆ. ಬಳಿಕ ಆತನನ್ನ ಸ್ಥಳೀಯರ ಸಹಾಯದಿಂದ ಆಸ್ಪತ್ರಗೆ ದಾಖಲಿಸಿದ್ದಾರೆ.
ರಸ್ತೆಯಲ್ಲಿರುವ ಕಲ್ಲುಗಳನ್ನು ಗುಡಿಸಿ ತೆಗೆದ ಟ್ರಾಫಿಕ್ ಪೊಲೀಸ್ : ವಿಡಿಯೋ ವೈರಲ್
ಸೂಕ್ತ ಸಮುಯಕ್ಕೆ ಆಸ್ಪತ್ರಗೆ ದಾಖಲಿಸಿದ್ದರಿಂದ ಚೇತರಿಕೆ ಕಂಡಿದ್ದಾನೆ.. ಇನ್ನೂ ಇಮ್ರಾನ್ ಕೆಲ ತಿಂಗಳಿಂದ ಕುಡಿಯಲು ಕಲಿತಿದ್ದ ಇದಲ್ಲದೆ ಆತನಿಗೆ ಫಿಡ್ಸ್ ಖಾಯಿಲೆಯಿದ್ದ ಹಲುವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ.. ಇಂದೂ ಕೂಡಾ ಸೂಕ್ತ ಸಮಯಕ್ಕೆ ಆಸ್ಪತ್ರಗೆ ದಾಖಲಿಸಿದರಿಂದ ದೊಡ್ಡ ಅನಾಹುತದಿಂದ ಪಾರಾಗಿದ್ದಾನೆ.
ಆತನಿಗೆ ತುಂಬಾ ವರ್ಷಗಳಿಂದ ಫಿಡ್ಸ್ ಖಾಯಿಲೆ ಇದ್ದು ಸರಿಯಾಗಿ ಚಿಕಿತ್ಸೆ ಪಡೆಯದೇ ಇದ್ದಿದ್ದರಿಂದ ಆತನಿಗೆ ಈ ರೀತಿ ಆಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಇನ್ನೂ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅನಿತಲಕ್ಷ್ಮಿ ಚಿಕಿತ್ಸಾ ವೆಚ್ಚವನ್ನ ಭರಿಸಿದ್ದು ಆತನಿಗೆ ಕುಡಿಯುವುದನ್ನ ಮೊದಲು ಬಿಡು ಎಂದು ತಾಕೀತು ಮಾಡಿದ್ದಾರೆ. ಅಲ್ಲದೇ ಮೆಡಿಸನ್ ಕೊಡಿಸಿ ಆರೋಗ್ಯದ ಮೇಲೆ ಗಮನ ಹರಿಸುವಂತೆ ಕಿವಿ ಮಾತು ಹೇಳಿದ್ದಾರೆ.
ಈಗಲಾದರೂ ಇಮ್ರಾನ್‌ಗೆ ಜ್ಞಾನೋದಯವಾಗಬೇಕಿದೆ.ಪ್ರಾಣಾಪಾಯದಿಂದ ಕಾಪಾಡಿದ ಚಂದ್ರಾಲೇಔಟ್ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಅವರ ಮಾತಿಗೆ ಬೆಲೆ ಕೊಟ್ಟು ಕುಡಿಯೋದನ್ನ ಬಿಡಬೇಕು.