ಅರ್ಚಕನಿಗೆ ಕೊರೋನಾ: ನಂದಿ ದೇವಾಲಯ ಬಂದ್
ಅರ್ಚಕನಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ದೇಗುಲವನ್ನು ಮುಚ್ಚಲಾಗಿದೆ. ಪೂಜಾ ಕಾರ್ಯಗಳನ್ನು ನಿಲ್ಲಿಸಲಾಗಿದೆ.
ಚಿಕ್ಕಬಳ್ಳಾಪುರ (ಸೆ.04) : ತಾಲೂಕಿನ ಇತಿಹಾಸ ಪ್ರಸಿದ್ಧ ನಂದಿಯ ಬೋಗನಂದೀಶ್ವರ ದೇಗುಲದ ಅರ್ಚಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗುರುವಾರ ದೇವಾಲಯವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಸೋಂಕು ಹರಡಿದ ಮೂಲದ ಬಗ್ಗೆ ಆರೋಗ್ಯ ಇಲಾಖೆ ಪತ್ತೆಗೆ ಮುಂದಾಗಿದ್ದು, ಕಳೆದ ಎರಡು ದಿನಗಳಿಂದ ಅರ್ಚಕನ ಸಂಪರ್ಕಕ್ಕೆ ಬಂದಿದ್ದ ಭಕ್ತರಲ್ಲಿ ತಲ್ಲಣ ಮೂಡಿಸಿದೆ.
ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ವಿಡಿಯೋ ಮಾಡಿದ್ದ ಸೋಂಕಿತ ಸಾವು ...
ದೇವಾಲಯದ ಅರ್ಚಕ ಹಾಗೂ ಆತನ ಕುಟುಂಬದ ಇತರೇ ಸದಸ್ಯರಿಗೆ ಕೊರೊನಾ ಪಾಸಿಟಿವ್ ದೃಢವಾಗುತ್ತಿದ್ದಂತೆ ಮುಜರಾಯಿ ಇಲಾಖೆ ಅಧಿಕಾರಿಗಳು ದೇಗುಲಕ್ಕೆ ದೌಡಾಯಿಸಿ ಬಂದು ಇಡೀ ದೇವಾಲಯದ ಪ್ರವೇಶ ದ್ವಾರಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ಸೂಚನಾ ಫಲಕಗಳನ್ನು ಅಳವಡಿಸಿದರು.
ಸೋಂಕು ಹರಡಿದ ಮೂಲದ ಬಗ್ಗೆ ಆರೋಗ್ಯ ಇಲಾಖೆ ಪತ್ತೆಗೆ ಮುಂದಾಗಿದ್ದು, ಕಳೆದ ಎರಡು ದಿನಗಳಿಂದ ಅರ್ಚಕನ ಸಂಪರ್ಕಕ್ಕೆ ಬಂದಿದ್ದ ಭಕ್ತರಲ್ಲಿ ತಲ್ಲಣ ಮೂಡಿಸಿದೆ.