Chikkaballapura Milk Union : ಚಿಮುಲ್‌ ಸ್ಥಾಪನೆಗೆ ಆದೇಶ : 6 ತಿಂಗಳಲ್ಲಿ ಆಸ್ತಿ ವಿಭಜನೆ

 

  • ಚಿಮುಲ್‌ ಸ್ಥಾಪನೆಗೆ ಆದೇಶ : 6 ತಿಂಗಳಲ್ಲಿ ಆಸ್ತಿ ವಿಭಜನೆ
  •  3 ತಿಂಗಳಲ್ಲಿ ಮೂಲ ಸೌಕರ್ಯ, ಮಾರುಕಟ್ಟೆಅಭಿವೃದ್ದಿ
  • ಸದ್ಯಕ್ಕೆ ಕೋಲಾರದಲ್ಲೇ ಪ್ಯಾಕಿಂಗ್‌
Chikkaballapura Milk  Union Will Starts in 6 Month snr

 ಚಿಕ್ಕಬಳ್ಳಾಪುರ (ಡಿ.19):  ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಸ್ಥಾಪನೆಗೊಳ್ಳಲು ಈಗಾಗಲೇ ಕಳೆದ ನವೆಂಬರ್‌ 8 ರಂದು ರಾಜ್ಯ ಸಚಿವ ಸಂಪುಟ ಅನುಮೋದನೆಗೊಳಿಸಿರುವ ಮಹತ್ವಕಾಂಕ್ಷಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾ ಹಾಲು ಒಕ್ಕೂಟ (Milk Union) ರಚನೆಗೆ ಸಹಕಾರ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ವಿಭಜನೆಗೊಳ್ಳಲಿರುವ ಜಿಲ್ಲೆಯ ಹಾಲು ಒಕ್ಕೂಟಕ್ಕೆ ಮಾರುಕಟ್ಟೆ ಮೂಲ ಸೌಕರ್ಯ ಹೊಂದಲು 3 ತಿಂಗಳು ಹಾಗೂ ಎರಡು ಒಕ್ಕೂಟಗಳ ನಡುವೆ ಆಸ್ತಿ ಹಾಗೂ ಜವಾಬ್ದಾರಿ ವಿಭಜನೆ ಪ್ರಕ್ರಿಯೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ.

ಕೋಲಾರ (Kolar) ಚಿಕ್ಕಬಳ್ಳಾಪುರ (Chikkaballapura) ಹಾಲು ಒಕ್ಕೂಟವನ್ನು ವಿಭಜಿಸಿ ಹೊಸದಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಸಹಕಾರಿ ಒಕ್ಕೂಟ ಸ್ಥಾಪಿಸಲು ಅಗತ್ಯ ಇರುವ ಎಲ್ಲಾ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸಹಕಾರ (Karnataka Govt) ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಎಂ.ವೆಂಕಟಸ್ವಾಮಿ ಆದೇಶ ಹೊರಡಿಸಿದ್ದು ಜಿಲ್ಲೆಯ ಬಹುದಿನಗಳ ಕನಸು ಕೆಲವೇ ತಿಂಗಳಲ್ಲಿ ಈಡೇರಲಿದೆ.

ವಿಭಜನೆಗೆ ಷರತ್ತುಗಳೇನು?

ಕೋಚಿಮುಲ್‌ (KOCHIMUL) ಆಸ್ತಿ ವಿಭಜಿಸಲು ಮತ್ತ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ವಿಭಜಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ (Milk Union) ರಚಿಸಲು ಸಹಕಾರ ಸಂಘಗಳ ನಿಬಂಧಕರು ನಿಯಗಳು, ಉಪ ನಿಯಮಗಳನ್ವಯ ಕ್ರಮ ವಹಿಸಬೇಕು. ಒಕ್ಕೂಟಗಳ ನಡುವೆ ಆಸ್ತಿ ಹಾಗೂ ಜವಾಬ್ದಾರಿಯನ್ನು (ಮೂಲ ಸೌಕರ್ಯ, ಮಾರುಕಟ್ಟೆಸೌಕರ್ಯ ) ವಿಭಜಿಸುವ ಕುರಿತು ಕೂಡಲೇ 3 ತಿಂಗಳೊಳಗೆ ಸಮಿತಿ ರಸಬೇಕು, ಮದರ್‌ ಡೇರಿಯ ಕೆಎಂಎಫ್‌ನಿಂದ (KMF) ಅನುಮೋದಿತದ ದರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಹಾಲನ್ನು ಸಂಗ್ರಹಿಸುವ ಸರ್ಕಾರದ ಕ್ಷಿರಭಾಗ್ಯ ಯೋಜನೆಗೆ ಅಗತ್ಯ ಹಾಲಿನ ಪುಡಿಯನ್ನು ಉತ್ಪಾದಿಸಲು 3 ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು.

ಅಲ್ಲದೆ ಕೆಎಂಎಫ್‌ ಮದರ್‌ ಡೇರಿ ಯಲಹಂಕದ ಮೂಲಕ ಹೊಸ ಒಕ್ಕೂಟ ಆರಂಭಿಕ ವರ್ಷಗಳಲ್ಲಿ 2019-20ಕ್ಕೂ ಹಿಂದಿನ ವರ್ಷಗಳಳಗಿಂತ ಹೆಚ್ಚಿನ ಮಟ್ಟದಲ್ಲಿ ಅಂತರ ಡೇರಿ ಹಾಲನ್ನು ಖರೀದಿಸಿ ಪ್ರೋತ್ಸಾಹಿಸಲು 3 ತಿಂಗಳೊಳಗೆ ಕ್ರಮ ವಹಿಸಬೇಕು. ಚಿಕ್ಕಬಳ್ಳಾಪುರ ಹಾಲಿನ ಪ್ಯಾಕಿಂಗ್‌ ಘಟಕ ಸ್ಥಾಪನೆಯಾಗುವವರೆಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಹಕರಿಗೆ ಹಾಲು ಹಾಗೂ ಮೊಸರನ್ನು ವಿತರಕರ ದರದಲ್ಲಿ ಕೋಮುಲ್‌ ಸರಬರಾಜು ಮಾಡಲು 3 ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿದೆ.

ಸದ್ಯಕ್ಕೆ ಕೋಲಾರದಲ್ಲಿ ಪ್ಯಾಕಿಂಗ್‌

ಚಿಕ್ಕಬಳ್ಳಾಪುರದ ನಂದಿ ಕ್ರಾಸ್‌ನಲ್ಲಿರುವ ಮೇಗಾ ಡೇರಿಯಲ್ಲಿ ಪ್ಯಾಕಿಂಗ್‌ ಘಟಕ ಸ್ಥಾಪನೆಯಾದ ನಂತರ ಕೋಲಾರಕ್ಕೆ ಬೆಂಗಳೂರು ಮಹಾ ನಗರದಲ್ಲಿ ಹಂಚಿಕೆಯಾಗಿರುವ ಮಾರುಕಟ್ಟೆಪ್ರದೇಶವನ್ನು ಚಿಕ್ಕಬಳ್ಳಾಪುರ ಒಕ್ಕೂಟಕ್ಕೂ ಸಹ ಹಂಚಿಕೆ ಮಾಡಲು 6 ತಿಂಗಳ ಒಳಗೆ ಕ್ರಮ ವಹಿಸಬೇಖು, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ಪೂರ್ಣ ಪ್ರಮಾಣದಲ್ಲಿ ಸುಜ್ಜುಗೊಳ್ಳುವವರೆಗೂ ಕೋಲಾರ ಜಿಲ್ಲಾ ಹಾಲು ಒಕ್ಕೂಟವು ಚಿಕ್ಕಬಳ್ಳಾಪುರ ಒಕ್ಕೂಟದ ನೇರ ಹಾಲು ಸಂಸ್ಕರಣೆ ಹಾಗೂ ಪ್ಯಾಕಿಂಗ್‌ (Packing) ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.

ಜಿಲ್ಲೆಯಲ್ಲಿ 977 ಸಹಕಾರ ಸಂಘಗಳು

ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಸಹಕಾರ ಒಕ್ಕೂಟದ ವ್ಯಾಪ್ತಿಗೆ ಒಟ್ಟು ಜಿಲ್ಲಾದ್ಯಂತ 977 ಹಾಲು ಉತ್ಪಾದಕರ ಸಹಕಾರ ಸಂಘಗಳು ಬರಲಿದ್ದು ಸದ್ಯ ನಿತ್ಯ 6 ತಾಲೂಕುಗಳಿಂದ 4.28 ಲಕ್ಷ ಲೀ, ಹಾಲು ಉತ್ಪಾದನೆ ಆಗುತ್ತಿದೆ. ಈಗಾಗಲೇ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ಕೂಡ ತನ್ನ ಒಪ್ಪಿಗೆ ಸೂಚಿಸಿದೆ.
 

Latest Videos
Follow Us:
Download App:
  • android
  • ios