ಬಿಜೆಪಿ ವಿವಿಧ ಮೋರ್ಚಾಗಳಲ್ಲಿ ಆಯ್ಕೆ : ಮುಂದಿನ ಗೆಲುವಿವಾಗಿ ಮಾಸ್ಟರ್ ಪ್ಲಾನ್
ಮುಂದಿನ ಚುನಾವಣೆಗಾಗಿ ವಿವಿಧ ಪಕ್ಷಗಳಲ್ಲಿ ಈಗಾಗಲೇ ತಯಾರಿ ಆರಂಭವಾಗಿದೆ. ಚುನಾವಣೆ ಗೆಲುವಿವಾಗಿ ಪಕ್ಷದ ಮುಖಂಡರಿಂದ ಮಾಸ್ಟರ್ ಪ್ಲಾನ್ ಸಹ ಸಜ್ಜಾಗುತ್ತಿದೆ.
ಬಾಗೇಪಲ್ಲಿ (ಆ.24): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಶತಾಯಗತಾಯವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಬಿಜೆಪಿ ಮಂಡಲಾಧ್ಯಕ್ಷ ಆರ್.ಪ್ರತಾಪ್ ಕಾರ್ಯಕರ್ತರಿಗೆ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಿಸಿ ಬಳಿಕ ಅವರು ಮಾತನಾಡಿ, ಈಗಾಗಲೇ ಪಕ್ಷ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಖಾತೆ ತೆರೆದಿದ್ದು ಮುಂದಿನ ಚುನಾವಣೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕೆಂದರು.
ಕಾಂಗ್ರೆಸ್‌ನಲ್ಲಿ ಆಂತರಿಕ ಬೆಳವಣಿಗೆ: ಸೋನಿಯಾಗೆ ಪತ್ರ ಬರೆದ ಡಿಕೆಶಿ...
ಇದೇ ವೇಳೆ ಯುವ ಮೋರ್ಚಾ ಅಧ್ಯಕ್ಷರಾಗಿ ತಾಲೂಕಿನ ಕೊಲವಾರಪಲ್ಲಿ ಮಂಜುನಾಥರೆಡ್ಡಿ, ಪ್ರಧಾನ ಕಾರ್ಯದರ್ಶಿ ಪೆನಮಲೆ ಹರೀಶ್, ಪಟ್ಟಣದ 1ನೇ ವಾರ್ಡಿನ ಅಶೋಕ್, ಓಬಿಸಿ ಮೋರ್ಚಾ ಅಧ್ಯಕ್ಷರಾಗಿ ಮೂಗಚಿನ್ನೇಪಲ್ಲಿ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿಯಾಗಿ 21ನೇ ವಾರ್ಡಿನ ರವಿಕುಮಾರ್, ಚೊಕ್ಕಮ್ಮಪಲ್ಲಿ ನಾರಾಯಣಸ್ವಾಮಿ, ಎಸ್.ಟಿ ಮೋರ್ಚಾ ಅಧ್ಯಕ್ಷರಾಗಿ ಮಾಕಿರೆಡ್ಡಿಪಲ್ಲಿ ಆನಂದ್, ಪ್ರಧಾನ ಕಾರ್ಯದರ್ಶಿಗಳಾಗಿ ಯಲ್ಲಂಪಲ್ಲಿ ನರಸಿಂಹಮೂರ್ತಿ, ತೋಳ್ಳಪಲ್ಲಿ ಶ್ರೀನಿವಾಸ್, ರೈತ ಮೋರ್ಚಾ ಅಧ್ಯಕ್ಷರಾಗಿ ಪೆತ್ತುಂಕೆಪಲ್ಲಿ ರಾಜು, ಪ್ರಧಾನ ಕಾರ್ಯದರ್ಶಿಗಳಾಗಿ ನಿಂಬಕಾಯಿಲಪಲ್ಲಿ ವೆಂಕಟರವ್ಮಣಾರೆಡ್ಡಿ, ಕಾಮಸಾನಪಲ್ಲಿ ಹರಿಕೃಷ್ಣಾರೆಡ್ಡಿ. ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಯರ್ರಪೆಂಟ್ಲ ವೆಂಕಟರವಣಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ದೇವರಗುಡಿಪಲ್ಲಿ ರವಿ, ಮ್ಯಾಕಲಪಲ್ಲಿ ಶ್ರೀನಾಥ್, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ 22ನೇ ವಾರ್ಡಿನ ಬಾಬಾ ಜಾನ್, ಮಾಧ್ಯಮ ಪ್ರಮುಖ್ ಆಗಿ ಕೊಂಡಂವಾರಿಪಲ್ಲಿ ಧೀರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಊಗಲನಾಗೇಪಲ್ಲಿ ವೆಂಕಟಲಕ್ಷ್ಮಮ್ಮ, ಪ್ರಧಾನ ಕಾರ್ಯದರ್ಶಿಗಳಾಗಿ 16ನೇ ವಾರ್ಡಿನ ಮಂಜುಳಾ ಮತ್ತು 15ನೇ ವಾರ್ಡಿನ ಗಂಗುಲಮ್ಮ ಅವಿರೋಧವಾಗಿ ಆಯ್ಕೆಗೊಂಡರು.