ಉಪಚುನಾವಣೆ ಎಷ್ಟು ಚೆನ್ನ : ಮಹಿಳೆಯರಿಗೆ ಸಿಕ್ತು ಕೈ ತುಂಬಾ ಚಿನ್ನ!

ಇತ್ತ ಉಪ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಮಹಿಳೆಯರು ಚಿನ್ನದ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ. ಇಲ್ಲಿನ ಎಲ್ಲಾ ಚಿನ್ನದ ಅಂಗಡಿಗಳಲ್ಲಿಯೂ ಭರ್ಜರಿ ವ್ಯಾಪಾರವಾಗುತ್ತಿದೆ. 

Chikkaballapur Women throng Jewellery Shops After By Election

ಚಿಕ್ಕಬಳ್ಳಾಪುರ [ಡಿ.07]: ಈಗಷ್ಟೇ ರಾಜ್ಯದಲ್ಲಿ ಚುನಾವಣೆ ಮುಕ್ತಾಯವಾಗಿದೆ. ಉಪ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಇತ್ತ ಚಿಕ್ಕಬಳ್ಳಾಪುರದಲ್ಲಿ ಚಿನ್ನದ ವ್ಯಾಪಾರ ಜೋರಾಗಿದೆ. 

"

ಚಿನ್ನ ಹಾಗೂ ಬೆಳ್ಳಿ ಭಾರೀ ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತಿದ್ದು, ಮಹಿಳೆಯರು ಚಿನ್ನದ ಅಂಗಡಿಗಳಲ್ಲಿ ಮುಗಿ ಬೀಳುತ್ತಿದ್ದಾರೆ.

ಇಲ್ಲಿನ ಪ್ರಸಿದ್ಧ ಚಿನ್ನದ ಅಂಗಡಿಗಳಲ್ಲಿ ಒಂದೇ ಬಾರಿ ಎಲ್ಲಾ ಮಹಿಳೆಯರು ಆಗಮಿಸಿ ಚಿನ್ನ ಕೊಳ್ಳುತ್ತಿದ್ದಾರೆ.  ಪ್ರಸಿದ್ಧ ಚಿನ್ನದ ಅಂಗಡಿಗಳಿರುವ ಗಂಗಮ್ಮನ ಗುಡಿ ರಸ್ತೆಯ ಚಿನ್ನದ ಮಳಿಗೆಗಳಲ್ಲಿ ವ್ಯಾಪಾರ ಹೆಚ್ಚಳವಾಗಿದೆ. 

ಚುನಾವಣೆ ಮುಗಿದು ಎರಡು ದಿನಗಳಲ್ಲಿ ಚಿನ್ನದ ವ್ಯಾಪಾರ ಜೋರಾಗಿದ್ದು, ಪಕ್ಷಗಳಿಂದ ಹಂಚಿದ ಹಣದಲ್ಲಿ ಚಿನ್ನಕೊಳ್ಳಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. 

ಬಿಜೆಪಿ ಗೆಲ್ಲುವ ಪಕ್ಕಾ ಸ್ಥಾನಗಳ ಲೆಕ್ಕಕ್ಕೆ ಸಾಕ್ಷ್ಯ ಕೊಟ್ಟ ಸುಧಾಕರ್!...

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸುಧಾಕರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂಜಿನಪ್ಪ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ರಾಧಾಕೃಷ್ಣ ಸ್ಪರ್ಧೆ ಮಾಡಿದ್ದು ಸೋಲು ಗೆಲುವಿನ ಲೆಕ್ಕಾಚಾರಗಳು ಜೋರಾಗಿವೆ. 

ಸುಧಾಕರ್ ರಾಜೀನಾಮೆ ನೀಡಿ ಅನರ್ಹರಾದ ಕಾರಣ ಇಲ್ಲಿ ಉಪ ಚುನಾವಣೆ ನಡೆದಿದ್ದು, ಇಲ್ಲಿನ ಮೂವರು ಅಭ್ಯರ್ಥಿಗಳು ತಮ್ಮದೇ ಗೆಲುವಿನ ಭರವಸೆಯಲ್ಲಿದ್ದಾರೆ. 

ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆದಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.

Latest Videos
Follow Us:
Download App:
  • android
  • ios