ಕ್ಷೇತ್ರಗಳ ಸಂಖ್ಯೆಯಲ್ಲಿ ಏರಿಕೆ : ಕ್ಷೇತ್ರ ಕಳೆದುಕೊಳ್ಳಲಿದ್ದಾರೆ ಘಟಾನುಘಟಿಗಳು

ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲಾಗಿದೆ. ಶೀಘ್ರದಲ್ಲೇ ಚುನಾವಣೆ ನಡೆಯಲಿದ್ದು  ಪುನರ್ ವಿಂಗಡಣೆಯಿಂದ ಅನೇಕ ಘಟಾನುಘಟಿ ನಾಯಕರು ತಮ್ಮ ಕ್ಷೇತ್ರ ಕಳೆದುಕೊಳ್ಳಲಿದ್ದಾರೆ. 

chikkaballapur rearrange  zp constituencies snr

ವರದಿ :  ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಏ.01):  ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟುತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್‌ ವಿಗಂಡನೆ ಅಂತಿಮ ಅಧಿಸೂಚನೆ ರಾಜ್ಯಪತ್ರದಲ್ಲಿ  ಪ್ರಕಟಗೊಳ್ಳುವ ಮೂಲಕ ರಾಜಕೀಯ ಪಕ್ಷಗಳ ಹಾಗೂ ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ನಿದ್ದೆಗೆಡಿಸಿದೆ.

ಹಲವು ತಿಂಗಳ ಹಿಂದೆಯಷ್ಟೇ ರಾಜ್ಯ ಚುನಾವಣಾ ಆಯೋಗ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್‌ ವಿಗಂಡನೆಗೆ ಆದೇಶ ಹೊರಡಿಸಿ 28 ಇದ್ದ ಜಿಪಂ ಕ್ಷೇತ್ರಗಳನ್ನು 31ಕ್ಕೆ ಏರಿಸಿ 108 ಇದ್ದ ತಾಪಂ ಕ್ಷೇತ್ರಗಳ ಪೈಕಿ 20 ಕಡಿತಗೊಳಿಸಿ 88ಕ್ಕೆ ಇಳಿಸಿ ಆದೇಶ ಹೊರಡಿಸಿತ್ತು. ಕ್ಷೇತ್ರ ಪುನರ್‌ ವಿಗಂಡನೆಯಿಂದ ಘಟಾನುಘಟಿ ನಾಯಕರು ಕ್ಷೇತ್ರ ಕಳೆದುಕೊಳ್ಳಲಿದ್ದಾರೆ.

ಇದಾದ ಬೆನ್ನಲೇ ಜಿಲ್ಲೆಯ ಜಿಲ್ಲಾಡಳಿತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿರುವ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್‌ ವಿಗಂಡನೆ ಮಾಡಿ ಪ್ರಸ್ತಾವನೆಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿತ್ತು. ಆಯೋಗ ಸಮಗ್ರ ಪರಿಶೀಲಿಸಿ ಕೊನೆಗೂ ಕ್ಷೇತ್ರ ಪುನರ್‌ ವಿಗಂಡನೆ ಆಗಿರುವ ಜಿಪಂ ಹಾಗೂ ತಾಪಂ ಕ್ಷೇತ್ರಗಳಿಗೆ ಅಧಿಕೃತ ಮುದ್ರೆ ಒತ್ತಿದ್ದು ರಾಜ್ಯ ಪತ್ರದಲ್ಲಿ ಜಿಪಂ ವ್ಯಾಪ್ತಿಗೆ ಬರುವ ಗ್ರಾಪಂಗಳು ಹಾಗೂ ತಾಪಂ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಸಮಗ್ರವಾಗಿ ಪ್ರಕಟಿಸಲಾಗಿದೆ.

ಅವಿರೋಧ ಆಯ್ಕೆಗೆ ಕಸರತ್ತು : ಕುತೂಹಲ ಕೆರಳಿಸಿದ ಚುನಾವಣೆ .

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಚಿಕ್ಕಬಳ್ಳಾಪುರ 12, ತಾಪಂ ಕ್ಷೇತ್ರ, 5 ಜಿಪಂ ಕ್ಷೇತ್ರ, ಗೌರಿಬಿದನೂರು 20 ತಾಪಂ ಕ್ಷೇತ್ರ, 7 ಜಿಪಂ ಕ್ಷೇತ್ರ, ಗುಡಿಬಂಡೆ ತಾಲೂಕಿನ 12 ತಾಪಂ ಕ್ಷೇತ್ರ, 2 ಜಿಪಂ ಕ್ಷೇತ್ರ, ಬಾಗೇಪಲ್ಲಿ 13 ತಾಪಂ ಕ್ಷೇತ್ರ, 5 ಜಿಪಂ ಕ್ಷೇತ್ರ, ಶಿಡ್ಲಘಟ್ಟ14 ತಾಪಂ ಕ್ಷೇತ್ರ, 5 ಜಿಪಂ ಕ್ಷೇತ್ರ, ಚಿಂತಾಮಣಿ 18 ತಾಪಂ ಕ್ಷೇತ್ರ ಹಾಗೂ 7 ಜಿಪಂ 7 ಜಿಪಂ ಕ್ಷೇತ್ರಗಳು ಸೇರಿ ಜಿಲ್ಲಾದ್ಯಂತ ಒಟ್ಟು 88 ತಾಪಂ ಕ್ಷೇತ್ರಗಳಿಗೆ ಸೇರುವ ಆಯಾ ತಾಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಹಾಗೂ ಜಿಲ್ಲೆಯಲ್ಲಿ 31ಕ್ಕೆ ಏರಿಕೆ ಆಗಲಿರುವ ಜಿಪಂ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಗ್ರಾಪಂಗಳ ಹೆಸರುಗಳನ್ನು ಆಯೋಗದ ಅಂತಿಮ ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಜಿಲ್ಲೆಯ 31 ಜಿಪಂ ಕ್ಷೇತ್ರಗಳು ಯಾವವು?

ಕ್ಕಬಳ್ಳಾಪುರ ತಾಲೂಕಿನಲ್ಲಿ ಪೆರೇಸಂದ್ರ, ತಿಪ್ಪೇನಹಳ್ಳಿ, ನಂದಿ, ಅಗಲಗುರ್ಕಿ, ಮಂಚನಬಲೆ, ಗೌರಿಬಿದನೂರು ತಾಲೂಕಿನಲಲಿ ನಗರಗರೆ, ಹುದುಗೂರು, ಮಂಚೇನಹಳ್ಳಿ, ತೊಂಡೇಬಾವಿ, ಅಲೀಪುರ, ಹೊಸೂರು, ಇಡಗೂರು, ಗುಡಿಬಂಡೆ ತಾಲೂಕಿನ ಎಲ್ಲೋಡು, ಸೋಮೇನಹಳ್ಳಿ, ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ, ಮಿಟ್ಟೇಮರಿ, ಚೇಳೂರು, ಪಾತಪಾಳ್ಯ, ಗೂಳೂರು, ಶಿಡ್ಲಘಟ್ಟತಾಲೂಕಿನ ಸಾದಲಿ, ಗಂಜಿಗುಂಟೆ, ಶೀಗಹಳ್ಳಿ, ಮಳ್ಳೂರು, ಜಂಗಮಕೋಟೆ, ಚಿಂತಾಮಣಿ ತಾಲೂಕಿನ ಬುರುಡುಗುಂಟೆ, ಇರಗಂಪಲ್ಲಿ, ಮುರಗಮಲ್ಲ, ಮಾಡಿಕೆರಿ, ಕೋನಪಲ್ಲಿ, ಚಿನ್ನಸಂದ್ರ, ಕೈವಾರ ಸೇರಿವೆ.

Latest Videos
Follow Us:
Download App:
  • android
  • ios