ಅವಿರೋಧ ಆಯ್ಕೆಗೆ ಕಸರತ್ತು : ಕುತೂಹಲ ಕೆರಳಿಸಿದ ಚುನಾವಣೆ
ಚುನಾವಣೆಗೆ ಇಲ್ಲಿ ಮಾಸ್ಟರ್ ಪ್ಲಾನ್‌ಗಳು ನಡೆಯುತ್ತಿವೆ. ಅವಿರೋಧ ಆಯ್ಕೆಯ ಕಸರತ್ತುಗಳು ನಡೆಯುತ್ತಿದ್ದು, ನಾಯಕರು ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಈ ಚುನಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ (ಮಾ.28): ಬರುವ ಮೇ 9 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಮಾ.29 ರಿಂದ ಆರಂಭವಾಗಲಿದೆ. ಆದರೆ ಹಾಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮತ್ತೆ ಚುನಾವಣೆ ಸ್ಪರ್ಧೆ ಬಗ್ಗೆ ತಮ್ಮ ಗುಟ್ಟು ಬಿಟ್ಟು ಕೊಡದ ಕಾರಣ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆ ಜಿಲ್ಲೆಯಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಆಯಾ ಜಿಲ್ಲಾ ಕೇಂದ್ರದಲ್ಲಿರುವ ತಹಶೀಲ್ದಾರ್ ಚುನಾವಣಾ ಅಧಿಕಾರಿಗಳಾಗಿದ್ದು ಮಾ.29 ರಿಂದ ಆರಂಭಗೊಳ್ಳಲಿರುವ ನಾಮಪತ್ರ ಸಲ್ಲಿಕೆ ಕಾರ್ಯ ಏಪ್ರಿಲ್ 7 ರ ವರೆಗೂ ನಡೆಯಲಿದೆ. ಏ.8 ರಂದು ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು ಏ.12ರ ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಕೆಯಾದ ನಾಮಪತ್ರಗಳ ವಾಪಸ್ಸಿಗೆ ಅವಕಾಶ ಕಲ್ಪಿಸಲಾಗಿದೆ. ಅಂದೇ ಅಮತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಪ್ರಕಟಗೊಳ್ಳಲಿದೆ.
ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಯತ್ನ ವಿಫಲ
ಜಿಲ್ಲೆಯಲ್ಲಿ ಬರೋಬ್ಬರಿ 6,400 ಕ್ಕೂ ಹೆಚ್ಚು ಕಸಾಪ ಅಜೀವ ಸದಸ್ಯರಿದ್ದು ಎಲ್ಲರೂ ಮತದಾನದ ಹಕ್ಕು ಹೊಂದಿದ್ದಾರೆ. ಆದರೆ ಈ ಬಾರಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟುಮಂದಿಯ ಹೆಸರುಗಳು ಕೇಳಿ ಬಂದರೂ ಕೆಲ ಸಮಾನ ಮನಸ್ಕರು ಸೇರಿ ಚಿಂತಕ ಕೋಡಿರಂಗಪ್ಪ ಅಧ್ಯಕ್ಷತೆಯಲ್ಲಿ ಕಸಾಪ ಚುನಾವಣೆಗೆ ಒಮ್ಮತ ಅಭ್ಯರ್ಥಿ ಆಯ್ಕೆಗೆ 12 ಮಂದಿ ಸದಸ್ಯರ ನೇಮಕ ಮಾಡಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಕಸಾಪ ಸಾರಥಿಯಾಗಲು ಸಾಕಷ್ಟುಮಂದಿ ಆಕಾಂಕ್ಷಿಗಳಿದ್ದ ಕಾರಣಕ್ಕೆ ಅಭ್ಯರ್ಥಿ ಆಯ್ಕೆಗೆ ಅಧ್ಯಕ್ಷರಾಗಿದ್ದ ಕೋಡಿರಂಗಪ್ಪರನ್ನೆ ಅಭ್ಯರ್ಥಿಯಾಗಿ ಘೋಷಿಸಲಾಯಿತು.
ಚಿಕ್ಕಬಳ್ಳಾಪುರಕ್ಕೆ ತಹಸೀಲ್ದಾರ್ ನೇಮಕವೇ ಆಗಿಲ್ಲ : ಕಡತ ವಿಲೇವಾರಿಯಾಗದೆ ಜನರು ಹೈರಾಣ ..
ಈಗಾಗಿ ಸದ್ಯಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚಿತ್ರಾವತಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರಾಧ್ಯಾಪಕಾರಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಹಾಲಿ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಕೋಡಿರಂಗಪ್ಪ ಚುನಾವಣೆ ಅಖಾಡಕ್ಕೆ ಇಳಿದು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರಚಾರದ ಭರಾಟೆ ಶುರು ಮಾಡಿದ್ದಾರೆ. ಜೊತೆಗೆ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೋಡಿರಂಗಪ್ಪರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಾಕಷ್ಟುಕರಸತ್ತು ನಡೆಸಲಾಗುತ್ತಿದೆ.
ಗುಟ್ಟು ಬಿಡದ ಕೈವಾರ ಶ್ರೀನಿವಾಸ್
ಈಗಿರುವ ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುತ್ತಾರೋ ಅಥವ ಇಲ್ಲವೋ ಎನ್ನುವ ಗುಟ್ಟು ಬಿಟ್ಟಿಲ್ಲ. ಈಗಾಗಿ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆ ಈ ಬಾರಿ ಅವಿರೋಧವಾಗಿ ಆಯ್ಕೆಗೊಳ್ಳುತ್ತಾ ಇಲ್ಲ ಕೈವಾರ ಶ್ರೀನಿವಾಸ್ ಬಿಟ್ಟು ಬೇರೆ ಯಾರಾದರೂ ಸ್ಪರ್ಧಿಸುತ್ತಾರಾ ಎಂಬುದರ ಬಗ್ಗೆ ನಿಗೂಢವಾಗಿದೆ.