Asianet Suvarna News Asianet Suvarna News

ಚಿಕ್ಕಬಳ್ಳಾಪುರ ಜಿಲ್ಲಾ ಯುವ ಉತ್ಸವ ದಿಢೀರ್‌ ರದ್ದು: 5 ಸಾವಿರ ಯುವಜನರ ಆಸೆಗೆ ತಣ್ಣೀರು

ಜಿಲ್ಲಾಡಳಿತ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಯವ ಉತ್ಸವ ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ದಿಢೀರ್‌ ಮುಂದೂಡಿಕೆ ಮಾಡಿ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲೆಯ ಎಲ್ಲಾ ಕಾಲೇಜು ಮತ್ತು ಯುವ ಸಂಘಗಳ 3 ರಿಂದ 5 ಸಾವಿರ ವಿದ್ಯಾರ್ಥಿಗಳು ಹಾಗೂ ಯುವಜನರ ಆಸೆಗೆ ತಣ್ಣೀರನ್ನು ಕಾರ್ಯಕ್ರಮ ಆಯೋಜಕರು ಎರಚಿದ್ದಾರೆ.

Chikkaballapur District Youth Festival Cancelled gvd
Author
First Published Jun 17, 2023, 10:43 PM IST

ಚಿಕ್ಕಬಳ್ಳಾಪುರ (ಜೂ.17): ಜಿಲ್ಲಾಡಳಿತ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಯುವ ಉತ್ಸವ ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ದಿಢೀರ್‌ ಮುಂದೂಡಿಕೆ ಮಾಡಿ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲೆಯ ಎಲ್ಲಾ ಕಾಲೇಜು ಮತ್ತು ಯುವ ಸಂಘಗಳ 3 ರಿಂದ 5 ಸಾವಿರ ವಿದ್ಯಾರ್ಥಿಗಳು ಹಾಗೂ ಯುವಜನರ ಆಸೆಗೆ ತಣ್ಣೀರನ್ನು ಕಾರ್ಯಕ್ರಮ ಆಯೋಜಕರು ಎರಚಿದ್ದಾರೆ.

ಕಾರಣವೇನು?: ಬರಬೇಕಿದ್ದ ಅಥಿತಿಗಳಿಗೆ ಅನ್ಯ ಕಾರ್ಯಕ್ರಮಗಳಿದ್ದಿದ್ದರಿಂದ ರದ್ದು ಎಂದು ಹೇಳಿದ ಆಯೋಜಕರು ಮತ್ತೆ ತಿದ್ದುಪಡಿ ಮಾಡಿ ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಕೆ.ರಾಜೇಶ್‌ ಕಾರಂತ್‌ ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ತಾಲೂಕು ಹೋಬಳಿ ಕೇಂದ್ರಗಳಿಂದ ತಿಂಡಿಯೂ ತಿನ್ನದೆ ಬೆಳಗ್ಗಿನಿಂದಲೇ ಯುವಜನತೆ ಮತ್ತು ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಬಂದಿದ್ದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳಬೇಟೆ ಶಂಕೆ: ಜೋಸೆಫ್‌ ಹೂವರ್‌ ಆರೋಪ

ಯುವಾಕ್ರೋಶ: ಕಳೆದ ಒಂದು ವಾರದಿಂದ ಅಭ್ಯಾಸ ಮಾಡಿ ಕೊಂಡು ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಭಾಗವಹಿಸ ಬೇಕೇಂದು ಬೆಳಗ್ಗೆಯೇ ಬಂದ ನಮಗೆ ಕಾರ್ಯಕ್ರಮ ಪ್ರಾರಂಭವಾಗಲು ಕ್ಷಣಗಳು ಬಾಕಿ ಇರುವಾಗ ಅಧಿ ಕಾರಿಗಳು ಏಕಾಏಕಿ ಗೆಸ್ಟ್‌ಗಳು ಬರಲಿಲ್ಲಾ ಎಂದು ಕಾರ್ಯಕ್ರಮ ರದ್ದು ಎಂದು ತಿಳಿಸಿದ್ದು, ನಮಗೆ ನಿರುತ್ಸಾಹವಾಗಿದೆ. ಮದುವೆಗೆ ಗೆಸ್ಟ್‌ ಬರಲಿಲ್ಲ ಎಂದು ಮದುವೆ ರದ್ದು ಮಾಡುತ್ತಾರಾ? ಎಂದು ಯು ಉತ್ಸವ ದಲ್ಲಿ ಪಾಲ್ಗೋಳ್ಳಲು ಬಂದಿದ್ದ ಯುವ ವಿದ್ಯಾರ್ಥಿನಿ ಉಮಾ ಆಕ್ರೋಷ ವ್ಯಕ್ತಪಡಿಸಿದರು.

ಹೀಗೆ ಯುವ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದ ವಿದ್ಯಾರ್ಥಿಗಳು, ಯುವ ಜನರು, ಉಪನ್ಯಾಸಕರು, ಅಧಿಕಾರಿಗಳು ಕಾರ್ಯಕ್ರಮ ಆಯೋಜಕರಿಗೆ ಮತ್ತು ಬಾರದ ಅಥಿತಿಗಳಿಗೆ ಹಿಡಿಶಾಪ ಹಾಕು ತ್ತಾ ವಾಪಸ್ಸಾದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ನೆಹರು ಯುವ ಕೇಂದ್ರ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲೆಯ ಯುವ ಸಂಘ ಗಳು, ಚಿಕ್ಕಬಳ್ಳಾಪುರ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಯುವ ಉತ್ಸವವನ್ನು ಇಂದು ಬೆಳಿಗ್ಗೆ 11-00 ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌,ಅಧ್ಯಕ್ಷತೆ ಶಾಸಕ ಪ್ರದೀಪ್‌ ಈಶ್ವರ್‌, ಘನ ಉಪಸ್ಥಿತಿಯನ್ನು ಸಂಸದ ಬಿ.ಎನ್‌.ಬಚ್ಚೇಗೌಡ, ಪ್ರಧಾನ ವಿಷಯ ಮಂಡನೆಯನ್ನು ದಕ್ಷಿಣ ವಲಯ ರಾಜ್ಯಗಳ ನೆಹರು ಯುವ ಕೇಂದ್ರಗಳ ಸಂಘಟನೆಯ ಪ್ರಾದೇಶಿಕ ನಿರ್ದೇಶಕ ಎಂ.ಎನ್‌.ನಟರಾಜ್‌, ಮುಖ್ಯ ಅಥಿತಿಗಳಾಗಿ ಕೋಲಾರ ಸಂಸದ ಮುನಿಸ್ವಾಮಿ, ಜಿಲ್ಲೆಯ ಶಾಸಕರು ಸೇರಿ, ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಆಹ್ವಾನಿಸಲಾಗಿತ್ತು.

ಯುವ ಬರಹಗಾರರ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮೊಬೈಲ್‌ ಛಾಯಾಚಿತ್ರ ಸ್ಪರ್ಧೆ, ಭಾಷಣ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಉತ್ಸವದ ಅಂಗವಾಗಿ ಏರ್ಪಡಿಸಿ ವಿಜೇತರಿಗೆ ಗೌರವ ಸಲ್ಲಿಸಲಾಗುತ್ತದೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಯುವ ಜನರಿಗೆ ತಲುಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ಆರೋಗ್ಯ,ಆಯುಷ್‌,ಕೆನರಾ ಬ್ಯಾಂಕ್‌,ಯುವಸ್ಪಂದನ ಇಲಾಖೆಗಳು ಸೇರಿದಂತೆ ಹಲವಾರು ಇಲಾಖೆಗಳು ಮತ್ತು ಯುವ ಸಂಘಟನೆಗಳ ವತಿಯಿಂದ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಮಂಜುನಾಥ್‌ ಎನ್‌, ಜಿಲ್ಲಾ ಆರೋಗ್ಯಾ​ಧಿಕಾರಿ ಡಾ.ಮಹೇಶ್‌ ಕುಮಾರ್‌ ಅವರು ಸೇರಿದಂತೆ ವಿವಿಧ ಇಲಾಖೆಯ ಅ​ಧಿಕಾರಿಗಳು ಉಪಸ್ಥಿತರಿದ್ದರು.

ಯೋಜನೆಗಳ ಅನುಷ್ಠಾನ ನಿರ್ಲಕ್ಷಿಸಿದರೆ ಕ್ರಮ: ಸಚಿವ ಮುನಿಯಪ್ಪ ಎಚ್ಚರಿಕೆ

ಪಾಠವೂ ಇಲ್ಲಾ, ಉತ್ಸವವೂ ಇಲ್ಲ!: ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿ ಎಂದು ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳನ್ನು ನಿಲ್ಲಿಸಿ ಒಂದು ವಾರದಿಂದ ತಯಾರಿ ಮಾಡಿ ಕರೆ ತಂದಿದ್ದೆವು. ಆದರೆ, ಕಾರ್ಯಕ್ರಮ ಮುಂದೂಡಿದ್ದರಿಂದ ಅವರ ಉತ್ಸಾಹ ಬತ್ತಿದೆ. ಅತ್ತ ಪಾಠವೂ ಇಲ್ಲಾ, ಇತ್ತ ಉತ್ಸವವೂ ಇಲ್ಲಾ ದಂತಾಯಿತು ಎಂದು ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆ ತಂದಿದ್ದ ಚಿಕ್ಕಬಳ್ಳಾಪುರ ನಗರದ ಜ.ಚ.ನಿ. ಕಾನೂನು ಕಾಲೇಜಿನ ಉಪನ್ಯಾಸಕ ಉಮಾಶಂಕರ್‌ ನಿರುತ್ಸಾಹಗೊಂಡರು.

Follow Us:
Download App:
  • android
  • ios