Asianet Suvarna News Asianet Suvarna News

ಸರ್ಕಾರ ರೈತರಿಗೆ ಸಮರ್ಪಕ ವಿದ್ಯುತ್ ನೀಡದೆ ದ್ರೋಹ : ಚಿದಾನಂದ್ ಎಂ.ಗೌಡ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ 7 ಗಂಟೆ ತ್ರೀಫೇಸ್ ವಿದ್ಯುತ್ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 3 ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತಿದ್ದು, ಅದನ್ನು ಸಮರ್ಪಕ ನೀಡುತ್ತಿಲ್ಲ.

 Chidanand M Gowda Allegation Against govt on Electricity snr
Author
First Published Oct 14, 2023, 8:40 AM IST

  ಶಿರಾ :  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ 7 ಗಂಟೆ ತ್ರೀಫೇಸ್ ವಿದ್ಯುತ್ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 3 ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತಿದ್ದು, ಅದನ್ನು ಸಮರ್ಪಕ ನೀಡುತ್ತಿಲ್ಲ.

ಮನಸೋ ಇಚ್ಚೆ ಲೋಡ್ಶೆಡ್ಡಿಂಗ್ ಮಾಡುವ ಮೂಲಕ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ಚಿದಾನಂದ್ ಎಂ.ಗೌಡ ಆರೋಪಿಸಿದರು. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿರುವ ವೇಳೆ ರಾಜ್ಯ ಸರ್ಕಾರ ಮನಸೋ ಇಚ್ಚೆ ವಿದ್ಯುತ್ ಲೋಡ್‌ಶೆಡ್ಡಿಂಗ್‌ ಮಾಡುವ ಮೂಲಕ ರೈತರಿಗೆ ದ್ರೊಹ ಮಾಡುತ್ತಿದೆ. ಮಳೆ ಇಲ್ಲದೆ ತೋಟಗಾರಿಕಾ ಬೆಳೆಗಳಿಗೆ ನೀರಿಲ್ಲ. ಕೊಳವೆ ಬಾವಿಗಳ ಮೂಲಕವಾದರೂ ನೀರನ್ನು ಹಾಯಿಸಿ ಅಡಿಕೆ, ತೆಂಗಿನ ಮರಗಳನ್ನು ಉಳಿಸಿಕೊಳ್ಳಬೇಕೆಂದು ರೈತರು ಪ್ರಯತ್ನಿಸುತ್ತಿದ್ದಾರೆ. ಸಮಪರ್ಕ ವಿದ್ಯುತ್ ನೀಡದೆ ತೋಟಗಾರಿಕಾ ಬೆಳೆಗಳೂ ಒಣಗುವ ಸ್ಥಿತಿ ಉಂಟಾಗಿದೆ.

ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಪ್ರವಾಹ ವೇಳೆ ಸರ್ಕಾರ 5000 ಕೋಟಿ ಪರಿಹಾರ ಸಂತ್ರಸ್ಥರಿಗೆ ವಿತರಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೊರೆ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಈ ಜನವಿರೋಧಿ ಸರ್ಕಾರದ ಆಡಳಿತವನ್ನು ನಾವು ಖಂಡಿಸುತ್ತೇವೆ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬರಗಾಲ ಬರುತ್ತದೆ ಎಂಬ ಜನರ ಮಾತಿನಂತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬಂದಿದೆ. ಜನರು ಗ್ಯಾರಂಟಿ ನಂಬಿ ಮತ ನೀಡಿ ಇಂದು ಮೋಸ ಹೋಗಿದ್ದಾರೆ. ರಾಜ್ಯದ ಜನರಿಗೆ ಯಾವುದೇ ಭಾಗ್ಯಗಳು ಬೇಡ. ಸಮರ್ಪಕ ವಿದ್ಯುತ್ ನೀಡಿ ಎಂದ ಅವರು ರಾಜ್ಯ ಸರ್ಕಾರದ ನೀತಿ ವಿರೋಧಿಸಿ ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಗ್ರಾಮಾಂತರ ಮಂಡಲ ಅಧ್ಯಕ್ಷರಾದ ರಂಗಸ್ವಾಮಿ, ನಗರಸಭೆ ಸದಸ್ಯರಾದ ರಂಗರಾಜು, ಮಾಜಿ ನಗರಸಭಾ ಸದಸ್ಯರಾದ ನಟರಾಜ್, ಮುಖಂಡರಾದ ವಿಜಯರಾಜ್, ಕರಿಯಣ್ಣ, ಜಗದೀಶ್, ಮುದಿಮಡು ಮಂಜುನಾಥ್, ಮಾಜಿ ಗ್ರಾ.ಪಂ. ಅಧ್ಯಕ್ಷ ಈರಣ್ಣ ಪಟೇಲ್ ಇದ್ದರು.

Follow Us:
Download App:
  • android
  • ios