ಬೆಂಗಳೂರು[ಮಾ.08]:  ಕೆಮಿಕಲ್ ಸ್ಫೋಟಗೊಂಡ ಪರಿಣಾಮ ಓರ್ವ ವ್ಯಕ್ತಿಯ ಎಡಗಾಲು ತುಂಡಾದ ಘಟನೆ ನಗರದ ಆಡುಗೋಡಿಯಲ್ಲಿ ಇಂದು [ಭಾನುವಾರ] ನಡೆದಿದೆ. ಸ್ಫೋಟದಲ್ಲಿ ಕಾಲು ಕಳೆದುಕೊಂಡವರನ್ನ ನರಸಿಂಹಯ್ಯ[50] ಎಂದು ಗುರುತಿಸಲಾಗಿದೆ. 

"

ಡೇರಿ ಸರ್ಕಲ್ ಬಳಿ ಚಿಂದಿ ಆಯುವಾಗ ಕೆಮಿಕಲ್ ಸ್ಫೊಟಗೊಂಡಿದೆ. ಸ್ಫೋಟದ ರಭಸಕ್ಕೆ ನರಸಿಂಹಯ್ಯ ಅವರ  ಎಡ ಗಾಲು ತುಂಡಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಶ್ರೀನಾಥ್ ಜೋಶಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾನೈಟ್ ಕತ್ತರಿಸಲು ಬಳಸುವ ಕೆಮಿಕಲ್ ಇದಾಗಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಾಯಗೊಂಡ ನರಸಿಂಹಯ್ಯ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಮಿಕಲ್ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 

ಮಾರ್ಚ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ