ಶಿವಮೊಗ್ಗ: ಎಣ್ಣೆ ಪಾರ್ಟಿ ಹಿನ್ನೆಲೆ ಗಾಂಧಿ ಪಾರ್ಕ್‌ನಲ್ಲಿ ತಪಾಸಣೆ
ಶಿವಮೊಗ್ಗದ ಗಾಂಧಿ ಪಾರ್ಕ್‌ನಲ್ಲಿ ಯುವತಿಯರು ಎಣ್ಣೆ ಪಾರ್ಟಿ ಮಾಡಿದ್ದ ದೃಶ್ಯಾವಳಿ ವೈರಲ್ ಆದ ನಂತರ ತಪಾಸಣೆಯನ್ನು ನಡೆಸಲಾಗುತ್ತಿದೆ. ಯುವತಿಯರು ಹಾಡಹಗಲೇ ಪಾರ್ಕ್‌ನಲ್ಲಿ ಬಿಯರ್ ಕುಡಿದ ವಿರಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಶಿವಮೊಗ್ಗ(ಸೆ.07): ನಗರದ ಗಾಂಧಿ ಪಾರ್ಕ್ನಲ್ಲಿ ಹುಡುಗಿಯರ ಎಣ್ಣೆ ಪಾರ್ಟಿಯ ವಿಡಿಯೋ ವೈರಲ್ ಬೆನ್ನಲ್ಲೆ ಪಾರ್ಕ್ನಲ್ಲಿ ತಪಾಸಣೆ ಆರಂಭಗೊಂಡಿದೆ.
ಕಳೆದೆರಡು ದಿನಗಳ ಹಿಂದೆ ನಗರದ ಗಾಂಧಿ ಪಾರ್ಕ್‌ನಲ್ಲಿ ವಿದ್ಯಾರ್ಥಿನಿಯರು ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ವೈರೆಲ್ ಆಗಿತ್ತು, ಇದಕ್ಕೆ ಸಾರ್ವಜನಿಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದರು.
ಶಿವಮೊಗ್ಗ: ಗಾಂಧಿ ಪಾರ್ಕ್‌ನಲ್ಲಿ ಹೆಣ್ಮಕ್ಳ 'ಎಣ್ಣೆ ಪಾರ್ಟಿ'
ಅಲ್ಲದೆ ಪಾರ್ಕ್ನ ಉಸ್ತುವಾರಿಗಳು ಮತ್ತು ಪಾಲಿಕೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸೆಕ್ಯೂರಿಟಿಗಳು ಇಲ್ಲದ ಕಾರಣ ಈ ರೀತಿಯ ಘಟನೆಗಳು ನಡೆಯಲು ಕಾರಣ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ನಗರದ ಗಾಂಧಿ ಪಾರ್ಕ್ನ ಮುಂಭಾಗದ ಗೇಟ್‌ನಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪಾರ್ಕ್ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಬ್ಯಾಗ್‌ಗಳನ್ನು ಪರಿಶೀಲಿಸಿ ಪಾರ್ಕ್ನೊಳಗೆ ಬಿಡಲಾಗುತ್ತಿದೆ.
ಶಿವಮೊಗ್ಗ: ಆರ್ಥಿಕ ಹಿಂಜರಿತಕ್ಕೆ ಗಾರ್ಮೆಂಟ್ ಉದ್ಯಮ ಕಂಪನ