ಇಂದು ಶೂನ್ಯ ನೆರಳು ದಿನ : ಸೂರ್ಯನ ಕಿರಣಗಳು 90 ಡಿಗ್ರಿಯಲ್ಲಿ ಬಿದ್ದಾಗ ಸಾಧ್ಯ
ಯಾರು ನಮ್ಮನ್ನು ಬಿಟ್ಟು ಹೋದರು ನಮ್ಮ ನೆರಳು ನಮ್ಮನ್ನು ಬಿಡುವುದಿಲ್ಲ ಎಂಬ ಹಿರಿಯರ ಮಾತನ್ನು ನಾವು ಕೇಳಿದ್ದೇವೆ. ಆದರೆ ನೆರಳು ನಮ್ಮನ್ನು ವರ್ಷದಲ್ಲಿ ಎರಡು ಬಾರಿ ನಮ್ಮನ್ನು ಬಿಟ್ಟು ಹೋಗುತ್ತದೆ ಎಂಬುದು ನಿಮಗೆ ಗೊತ್ತೇ?. ಪರೀಕ್ಷಿಸಬೇಕೆ ಹಾಗಾದರೆ ಏ.22ರ ಮಧ್ಯಾಹ್ನ 12.21ಕ್ಕೆ ಮನೆಯಿಂದ ಹೊರಗೆ ಬಂದು ನಿಂತಲ್ಲಿ ನಿಮ್ಮ ನೆರಳು ಮಾಯ
ಮೈಸೂರು : ಯಾರು ನಮ್ಮನ್ನು ಬಿಟ್ಟು ಹೋದರು ನಮ್ಮ ನೆರಳು ನಮ್ಮನ್ನು ಬಿಡುವುದಿಲ್ಲ ಎಂಬ ಹಿರಿಯರ ಮಾತನ್ನು ನಾವು ಕೇಳಿದ್ದೇವೆ. ಆದರೆ ನೆರಳು ನಮ್ಮನ್ನು ವರ್ಷದಲ್ಲಿ ಎರಡು ಬಾರಿ ನಮ್ಮನ್ನು ಬಿಟ್ಟು ಹೋಗುತ್ತದೆ ಎಂಬುದು ನಿಮಗೆ ಗೊತ್ತೇ?. ಪರೀಕ್ಷಿಸಬೇಕೆ ಹಾಗಾದರೆ ಏ.22ರ ಮಧ್ಯಾಹ್ನ 12.21ಕ್ಕೆ ಮನೆಯಿಂದ ಹೊರಗೆ ಬಂದು ನಿಂತಲ್ಲಿ ನಿಮ್ಮ ನೆರಳು ಮಾಯ
ಸೂರ್ಯ ಸರಿಯಾಗಿ ನಮ್ಮ ನೆತ್ತಿಯ ಮೇಲೆ ಹಾದು ಹೋದಾಗ ಅಂದರೆ ಸೂರ್ಯನ ಕಿರಣಗಳು 90 ಡಿಗ್ರಿಯಲ್ಲಿ ಬಿದ್ದಾಗ ನಮ್ಮ ನೆರಳು ನಮ್ಮ ಕಾಲಿನ ಅಡಿಯಲ್ಲಿ ಇರುತ್ತದೆ. ಅಂದರೆ ನೆರಳು ಅಕ್ಕ ಪಕ್ಕದಲ್ಲಿ ಉಂಟಾಗುವುದಿಲ್ಲ, ಇದನ್ನೇ ಶೂನ್ಯ ನೆರಳು ಎನ್ನುತ್ತಾರೆ. ಮೈಸೂರಿನಲ್ಲಿ ಏ.22 ಮತ್ತು ಆಗಸ್ಟ್ 20 ರಂದು ಶೂನ್ಯ ನೆರಳು ನೋಡಬಹುದಾಗಿದೆ.
ಎಲ್ಲರೂ ಶೂನ್ಯ ನೆರಳನ್ನು ಸುಲಭವಾಗಿ ವೀಕ್ಷಿಸಬಹುದು. ನೇರವಾಗಿ (ಲಂಬವಾಗಿ) ನಿಂತ ಯಾವುದೇ ಕಂಬ ಶೂನ್ಯ ನೆರಳು ದಿನದಂದು ನೆರಳನ್ನು ಉಂಟು ಮಾಡುವುದಿಲ್ಲ ಅಥವಾ ಸಮ ತಟ್ಟ ಮೇಲ್ಮೈ ಮೇಲೆ ನೆಲಕ್ಕಿಂತ ಸ್ಪಲ್ಪ ಮೇಲೆ ಪಾರದರ್ಶಕ ಗಾಜು ಇರಿಸಿ ಅದರ ಮೇಲೆ ಇಟ್ಟ ಲೋಟದ ನೆರಳು ಅದರ ಕೆಳಗೆ ಉಂಟಾಗುತ್ತದೆ ಎಂದು ಮೈಸೂರ್ ಸೈನ್ಸ್ ಫೌಂಡೇಷನ್ ಕಾರ್ಯದರ್ಶಿ ಜಿ.ಬಿ. ಸಂತೋಷ್ ಕುಮಾರ್ ತಿಳಿಸಿದ್ದಾರೆ.