ಧಾರವಾಡ(ಮೇ.22): ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನರ ಮೇಲೆ ಸಿಬಿಐ ಅಧಿಕಾರಿಗಳು ಗುರುವಾರ ಸಂಜೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಸಂತೋಷ ಸವದತ್ತಿ, ದಿನೇಶ, ಸುನೀಲ್‌, ಹರ್ಷಿತ್‌, ಅಶ್ವತ್ಥ, ನಜೀರ್‌ ಅಹ್ಮದ್‌, ಶಾ ನವಾಜ್‌, ನೂತನ್‌ ಹಾಗೂ ಹಿಂದಿನ ಆರೋಪಿಗಳಾದ ಬಸವರಾಜ ಮುತ್ತಗಿ, ಸಂದೀಪ್‌, ವಿಕ್ರಮ್‌ ಬಳ್ಳಾರಿ, ಕೀರ್ತಿ, ವಿನಾಯಕ ಕಟಗಿ, ಮುದಕಪ್ಪ ಸೇರಿ ಒಟ್ಟು 14 ಜನರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

ಬಿಜೆಪಿ ಮುಖಂಡ ಯೋಗೀಶಗೌಡ ಹಂತಕರು ಸಿಬಿಐ ಬಲೆಗೆ

ಜೂನ್‌ 15, 2016ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಉದಯ ಜಿಮ್‌ನಲ್ಲಿ ಯೋಗೀಶಗೌಡ ಗೌಡರ ಕೊಲೆ ಮಾಡಲಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದರು.