ಹುಬ್ಬಳ್ಳಿ(ಮೇ.12):ನಗರದ ಹಳೇಹುಬ್ಬಳ್ಳಿ ನೇಕಾರನಗರ, ತಾಲೂಕಿನ ಕಟ್ನೂರ ಹಾಗೂ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ವಿರಕ್ತಮಠದ ಪೀಠಾಧಿಪತಿಗಳಾದ ಜ್ಞಾನಯೋಗಿ ಚನ್ನಬಸವ ದೇಶಿಕೇಂದ್ರ ಮಹಾಸ್ವಾಮೀಜಿ (44) ಮಂಗಳವಾರ ಲಿಂಗೈಕ್ಯರಾದರು.

ಸ್ವಾಮೀಜಿ ಅವರು ಮಂಗಳವಾರ ಮಧ್ಯಾಹ್ನ 1:30 ಗಂಟೆಗೆ ಹೃದಯಾಘಾತಕ್ಕೊಳಗಾಗಿ ತೀವ್ರ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದರು.

ಹಿರಿಯ ಪತ್ರಕರ್ತ ಸುರೇಂದ್ರ ಶೆಟ್ಟಿ ಇನ್ನಿಲ್ಲ!

ಅಂತ್ಯಕ್ರಿಯೆ ಇಂದು(ಬುಧವಾರ) ಬೆಳಗಿನ ಜಾವ ನೇಕಾರ ನಗರದ ಗಿರಿಯಾಲ ರಸ್ತೆಯ ಚನ್ನಬಸವೇಶ್ವರ ಪಾರ್ಕ್‌ನಲ್ಲಿ ನೆರವೇರಿದೆ ಎಂದು ಶ್ರೀಮಠದ ಭಕ್ತ ಮಂಡಳಿ ತಿಳಿಸಿದೆ.