Indian Railways: 2027ರ ಜನವರಿ 1ರಿಂದ ಮಂಗಳೂರಿನಿಂದ ಸಂಚರಿಸುವ ಹಲವು ಪ್ರಮುಖ ರೈಲುಗಳ ಸಂಖ್ಯೆಗಳು ಬದಲಾಗಲಿವೆ. ಕರಾವಳಿ ಮತ್ತು ಮಲೆನಾಡು ಭಾಗದ ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಬೇಕಾಗಿದೆ.
ಮಂಗಳೂರು: 2027ರ ಜ.1ರಿಂದ ಹೊಸ ಆದೇಶದ ಪ್ರಕಾರ ಮಲಬಾರ್, ಮಾವೇಲಿ, ಪರಶುರಾಮ್, ವಂದೇ ಭಾರತ್ ಸೇರಿ ಹಲವು ರೈಲುಗಳ ಸಂಖ್ಯೆಗಳು ಪರಿಷ್ಕರಣೆಯಾಗಲಿದ್ದು, ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲುಗಳ ಸಂಖ್ಯೆಯೂ ಬದಲಾಗಲಿದೆ.ನೈಋತ್ಯ ರೈಲ್ವೆಯ ಅಧಿಸೂಚನೆಯಂತೆ ಮಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ಕೇರಳ, ತಮಿಳುನಾಡು, ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲುಗಳ ಸಂಖ್ಯೆಗಳು ಬದಲಾಗಲಿವೆ.
ಯಾವೆಲ್ಲಾ ರೈಲುಗಳ ಸಂಖ್ಯೆ ಬದಲಾವಣೆ?
ತಿರುವನಂತಪುರಂ-ಮಂಗಳೂರು ನಡುವಿನ ಮಲಬಾರ್ ಎಕ್ಸ್ಪ್ರೆಸ್ನ ಪ್ರಸ್ತುತ ಸಂಖ್ಯೆ 16629ಯನ್ನು 16230ಕ್ಕೆ, ಮಂಗಳೂರು-ತಿರುವನಂತಪುರಂ ರೈಲು ಸಂಖ್ಯೆ 16630ಯನ್ನು 16229ಕ್ಕೆ ಬದಲಾಯಿಸಲಾಗಿದೆ. ಮಾವೇಲಿ ಎಕ್ಸ್ಪ್ರೆಸ್ನ 16603 ಮತ್ತು 16604 ಸಂಖ್ಯೆಗಳು ಕ್ರಮವಾಗಿ 16233 ಹಾಗೂ 16234 ಆಗಲಿವೆ.
ಪರಶುರಾಮ್ ಎಕ್ಸ್ಪ್ರೆಸ್ನ 16649 ಮತ್ತು 16650 ಸಂಖ್ಯೆಗಳು ಕ್ರಮವಾಗಿ 16249 ಮತ್ತು 16250ಕ್ಕೆ ಬದಲಾಗಲಿವೆ. ಎರ್ನಾಡ್ ಎಕ್ಸ್ಪ್ರೆಸ್ನ 16605 ಮತ್ತು 16606 ಸಂಖ್ಯೆಗಳು 16237 ಹಾಗೂ 16238 ಆಗಲಿವೆ. ಮಂಗಳೂರು-ರಾಮೇಶ್ವರಂ ಎಕ್ಸ್ಪ್ರೆಸ್ನ 16622 ಮತ್ತು 16621 ಸಂಖ್ಯೆಗಳು ಕ್ರಮವಾಗಿ 16241 ಮತ್ತು 16242ಕ್ಕೆ ಪರಿಷ್ಕರಣೆಯಾಗಲಿವೆ.
ಮಂಗಳೂರು-ಕೊಯಮತ್ತೂರು ರೈಲುಗಳ 16324 ಮತ್ತು 16323 ಸಂಖ್ಯೆಗಳು 16243 ಹಾಗೂ 16244 ಆಗಲಿವೆ. ಮಂಗಳೂರು-ಪಾಲಕ್ಕಾಡ್ ರೈಲು ಸಂಖ್ಯೆ 16610 ಯನ್ನು 16245ಕ್ಕೆ ಮತ್ತು ಪಾಲಕ್ಕಾಡ್-ಕಣ್ಣೂರು ರೈಲು ಸಂಖ್ಯೆ 16611 ಯನ್ನು 16246ಕ್ಕೆ ಬದಲಾಯಿಸಲಾಗಿದೆ.
ತಿರುವನಂತಪುರಂ-ಮಂಗಳೂರು ವಂದೇ ಭಾರತ್ ರೈಲು ಸಂಖ್ಯೆ 20631 ಯನ್ನು 26659 ಆಗಿ, ಮಂಗಳೂರು-ತಿರುವನಂತಪುರಂ ರೈಲು ಸಂಖ್ಯೆ 20632 ಅನ್ನು 26660ಕ್ಕೆ ಬದಲಾಯಿಸಲಾಗಿದೆ.
ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಸಂಖ್ಯೆ 20646 ಯನ್ನು 26657ಕ್ಕೆ, ಮಡಗಾಂವ್-ಮಂಗಳೂರು ರೈಲು ಸಂಖ್ಯೆ 20645 ಯನ್ನು 26658ಕ್ಕೆ ಪರಿಷ್ಕರಿಸಲಾಗಿದೆ.
ಕರಾವಳಿ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೆ ಪ್ರಮುಖ ಸಂಪರ್ಕ ಕಲ್ಪಿಸುವ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ನಡುವಿನ ಆರು ಪ್ರಯಾಣಿಕ ರೈಲು ಸೇವೆಗಳ ಸಂಖ್ಯೆಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಮಂಗಳೂರಿನಿಂದ ಸುಬ್ರಹ್ಮಣ್ಯ ರಸ್ತೆಗೆ ಸಂಚರಿಸುವ 56625, 56627 ಮತ್ತು 56629 ಸಂಖ್ಯೆಯ ರೈಲುಗಳು ಇನ್ನು ಮುಂದೆ ಕ್ರಮವಾಗಿ 56225, 56227 ಹಾಗೂ 56233 ಆಗಲಿದೆ. ಸುಬ್ರಹ್ಮಣ್ಯ ರಸ್ತೆಯಿಂದ ಮಂಗಳೂರಿಗೆ ಸಂಚರಿಸುವ 56626, 56628 ಮತ್ತು 56630 ಸಂಖ್ಯೆಯ ರೈಲುಗಳು ಕ್ರಮವಾಗಿ 56226, 56228 ಹಾಗೂ 56234 ಆಗಲಿದೆ.
ಇತರ ಪ್ರಯಾಣಿಕ ರೈಲುಗಳ ಸಂಖ್ಯೆ ಪರಿಷ್ಕರಣೆ
ಕಣ್ಣೂರು-ಕೋಯಿಕ್ಕೋಡ್ ರೈಲು ಸಂಖ್ಯೆ 56632 ಯನ್ನು 56211ಕ್ಕೆ, ಕೋಯಿಕ್ಕೋಡ್-ಕಣ್ಣೂರು ರೈಲು ಸಂಖ್ಯೆ 56617 ಯನ್ನು 56212ಕ್ಕೆ, ಕಣ್ಣೂರು-ಚರ್ವತ್ತೂರು ರೈಲು ಸಂಖ್ಯೆ 56619 ಯನ್ನು 56213, ಚರ್ವತ್ತೂರು-ಮಂಗಳೂರು ರೈಲು ಸಂಖ್ಯೆ 56621ಯನ್ನು 56214ಕ್ಕೆ, ಮಂಗಳೂರು–ಮಡಗಾಂವ್ ಪ್ರಯಾಣಿಕ ರೈಲು ಸಂಖ್ಯೆ 56615 ಯನ್ನು 56216ಕ್ಕೆ, ಮಡಗಾಂವ್-ಮಂಗಳೂರು ರೈಲು ಸಂಖ್ಯೆ 56616 ಯನ್ನು 56215ಕ್ಕೆ ಬದಲಾಯಿಸಲಾಗಿದೆ.
ಪರಿಷ್ಕೃತ ರೈಲು ಸಂಖ್ಯೆಗಳು 2027ರ ಜ.1ರಿಂದ ಜಾರಿಗೆ ಬರಲಿದೆ.





