ಚಾಮುಂಡಿಬೆಟ್ಟ ದೇವಸ್ಥಾನದ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು: ಸಂಸದ ಯದುವೀರ್ ಒಡೆಯರ್
ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ದೇವಸ್ಥಾನಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದೆ ಮುಕ್ತವಾಗಿ ಇರುವಂತೆ ಬಿಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರು (ಆ.15): ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ದೇವಸ್ಥಾನಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದೆ ಮುಕ್ತವಾಗಿ ಇರುವಂತೆ ಬಿಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಸರ್ಕಾರ ಪ್ರಾಧಿಕಾರ ರಚನೆ ಮಾಡಿರುವುದಕ್ಕೆ ನ್ಯಾಯಾಲಯ ತಡೆ ನೀಡಿರುವುದರಿಂದ ಮತ್ತೆ ಮಾತನಾಡುವುದು ಬೇಡ, ಪ್ರಾಧಿಕಾರ ರಚನೆಗೆ ವಿರೋಧ ಇದೆ ಎಂದು ಅವರು ಹೇಳಿದರು. ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಆಗಿರುವ ತೀರ್ಮಾನದಂತೆ ದಸರಾ ನಡೆಯಲಿದೆ.
ಅರಮನೆಯಲ್ಲಿ ಎಂದಿನಂತೆ ಶಾಸ್ರೋಕ್ತವಾಗಿ ನಡೆಯುವ ಕಾರ್ಯಕ್ರಮ ಜರುಗಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದರು. ಎಂಡಿಎ ನಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಸುವಂತೆ ನಡೆಸಿದ ಪಾದಯಾತ್ರೆ ಸಫಲವಾಗಿದೆ. ಬಿಜೆಪಿಯಲ್ಲಿನ ಭಿನ್ನಮತೀಯ ಚಟುವಟಿಕೆ ನನಗೆ ಗೊತ್ತಿಲ್ಲ. ಸಭೆಗೆ ಯಾರು ಹೋಗಿದ್ದಾರೋ ಅವರನ್ನೇ ಕೇಳಬೇಕು. ಪಕ್ಷದಲ್ಲಿ ಒಡಕು ಇಲ್ಲದೆ ಒಗ್ಗಟ್ಟು ಕಾಪಾಡಿಕೊಂಡು ಹೋಗಬೇಕು ಎಂದು ಅವರು ಸಲಹೆ ನೀಡಿದರು. ಪಕ್ಷದಲ್ಲಿ ಎಲ್ಲರೂ ಒಂದೇ ಎನ್ನುವಂತೆ ನೋಡಲಾಗುತಿದೆ ನಾಮ ಕೂಡಹಾಗೆಯೇ ನೋಡುತ್ತೇವೆ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಪರಿಷ್ಕರಿಸುವುದಾಗಿ ಹೇಳುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಬಾರದು. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಗೆದ್ದಿರುವ ಕಾಂಗ್ರೆಸ್ ಯೋಜನೆ ಮುಂದುವರಿಸಬೇಕು. ಜನರು ಗ್ಯಾರಂಟಿ ಯೋಜನೆಗಳಿಗಾಗಿ ಅಧಿಕಾರ ನೀಡಿರುವಾಗ ಯೋಜನೆ ನಿಲ್ಲಬಾರದು ಎಂದರು. ರಾಜ್ಯದಲ್ಲಿ ಕಾಲ ಕಾಲಕ್ಕೆ ಜಲಾಶಯಗಳ ಪರಿಶೀಲನೆ ಆಗಬೇಕು. ಇದು ಸರ್ಕಾರಗಳ ಜವಾಬ್ದಾರಿ. ಪರಿಶೀಲನೆ ನಡೆಸಿ ಆಗಾಗ ದುರಸ್ತಿ ಕೆಲಸ ಮಾಡಬೇಕು. ನೂರಾರು ವರ್ಷಗಳ ಹಳೆಯ ಡ್ಯಾಮ್ ಗಳನ್ನು ಪರಿಶೀಲಿಸಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು.
ಐತಿಹಾಸಿಕ ಹಿನ್ನೆಲೆಯ ಕುಣಿಗಲ್ ಅಮ್ಮನ ದೇವಾಲಯಕ್ಕೆ ಯಾರು ದಿಕ್ಕು?: ಪಾಳು ಸ್ಥಿತಿಗೆ ಬಿದ್ದ ದೇವಾಲಯ
ಹಾಗೆಯೇ ಕೆರ್ಆಎಸ್ ಜಲಾಶಯ ಕೂಡ ಪರಿಶೀಲಿಸಬೇಕು, ನಾಳೆ ಕೆ ಆರ್‌ಎಸ್ ಡ್ಯಾಮ್ ಪರಿಶೀಲಿಸಲು ತೆರಳುತ್ತಿದ್ದೇನೆ. ಪರಿಶೀಲನೆ ಬಳಿಕ ಮಾಹಿತಿ ತಿಳಿಯುತ್ತದೆ. ನೂರಾರು ವರ್ಷದ ಹಳೆಯ ಡ್ಯಾಮ್ ಆಗಿರುವ ಪರಿಶೀಲಿಸಬೇಕು ಎಂದರು. ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವೀಸಾ ತಪ್ಪಿರುವ ವಿಷಯ ತಿಳಿಯಿತು. ಯಾವ ಕಾರಣಕ್ಕಾಗಿ ವೀಸಾ ಕೈ ತಪ್ಪಿದೆ ಎನ್ನುವುದರ ಬಗ್ಗೆ ಮಾಹಿತಿ ಪಡೆಯುತ್ತೇನೆ. ನಂತರ ಕೇಂದ್ರ ವಿದೇಶಾಂಗ ಸಚಿವರು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆಗೆ ಸಮಾಲೋಚಿಸಸುವುದಾಗಿ ಅವರು ಹೇಳಿದರು.