ಶ್ರೀರಂಗಪಟ್ಟಣ: ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆಯಲ್ಲಿ ಇಲ್ಲಿನ ಚಾಮುಂಡೇಶ್ವರಿ ದೇವಿಗೆ ತಿಂಡಿ-ತಿನಿಸುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. 

ಪಟ್ಟಣದ ಚಾಮುಂಡೇಶ್ವರಿ ರಸ್ತೆಯಲ್ಲಿರುವ ದೇವಾಲಯದಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ತಿಂಡಿ, ತಿನಿಸುಗಳನ್ನು ಬಳಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಕಜ್ಜಾಯ, ಪುರಿ ಉಂಡೆ, ಹೋಳಿಗೆ, ಬಾದಾಮ್ ಪುರಿ ಸೇರಿದಂತೆ ವಿವಿಧ ತಿಂಡಿಗಳನ್ನು ಅಲಂಕಾರಿಸಲು ಬಳಸಲಾಗಿತ್ತು.

ಈ ವಿಶೇಷ ಅಲಂಕಾರಕ್ಕೆ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದರು. ಪ್ರತಿವರ್ಷ ಒಂದಲ್ಲ, ಒಂದು ವಿಶೇಷ ಅಲಂಕಾರದಿಂದ ದೇವಿಯನ್ನು ಈ ಅರ್ಚಕರು ಪೂಜಿಸುತ್ತಿದ್ದಾರೆ. ಕಳೆದ ವರ್ಷ ಲಕ್ಷಾಂತರ ರೂ. ಮೌಲ್ಯದ ನೋಟು ಬಳಸಿ, ದೇವಿಯನ್ನು ಅಲಂಕರಿಸಲಾಗಿತ್ತು.