Chamrajpet ಈದ್ಗಾ ಮೈದಾನ ಅಲ್ಲ, ಬಿಬಿಎಂಪಿ ಆಟದ ಮೈದಾನ!

ಚಾಮರಾಜಪೇಟೆಯಲ್ಲಿ ಈದ್ಗಾ ಮೈದಾನ ಎಂದೇ ಎಲ್ಲರಿಂದ ಕರೆಯಿಸಿಕೊಳ್ಳುವ ಜಾಗ ಇನ್ಮುಂದೆ ಬಿಬಿಎಂಪಿ ಆಟದ ಮೈದಾನ. ಮುಸ್ಲಿಮರು ಮಾತ್ರವಲ್ಲದೆ ಹಿಂದೂಗಳ ಚಟುವಟಿಕೆಗೂ ಈ ಮೈದಾನವಿನ್ನು ಮುಕ್ತವಾಗಲಿದೆ.  

Chamrajpet Eidgah Ground Is BBMP Property  gow

ವರದಿ: ರಕ್ಷಾ ಕಟ್ಟೆಬೆಳಗುಳಿ , ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜೂ.7) : ಚಾಮರಾಜಪೇಟೆಯಲ್ಲಿ (Chamrajpet) ಈದ್ಗಾ ಮೈದಾನ (Eidgah Ground) ಎಂದೇ ಎಲ್ಲರಿಂದ ಕರೆಯಿಸಿಕೊಳ್ಳುವ ಜಾಗ ಇನ್ಮುಂದೆ ಬಿಬಿಎಂಪಿ (BBMP) ಆಟದ ಮೈದಾನ. ಮುಸ್ಲಿಮರು ಮಾತ್ರವಲ್ಲದೆ ಹಿಂದೂಗಳ ಚಟುವಟಿಕೆಗೂ ಈ ಮೈದಾನವಿನ್ನು ಮುಕ್ತವಾಗಲಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿ ಬಿತ್ತರಿಸಿದ 24 ಗಂಟೆಯಲ್ಲಿ ಆಗಿರೋ ಪರಿಣಾಮ ಇದು.

ಚಾಮರಾಜಪೇಟೆಯ ಈದ್ಗಾ ಮೈದಾನವು ದಾಖಲೆಗಳ ಪ್ರಕಾರ ಬಿಬಿಎಂಪಿ ಆಟದ ಮೈದಾನ. ಆದರೆ, ಮುಸ್ಲಿಮರ ಬಕ್ರೀದ್, ರಂಜಾನ್ ಹಬ್ಬಗಳಂದು ಸಮೂಹಿಕ ನಮಾಜ್ ಮಾಡಲು‌ ಮಾತ್ರ ಈ ಮೈದಾನ ಬಳಕೆ ಆಗುತಿತ್ತು. ಮೈದಾನದ ಒಂದು ಬದಿ ಮಾತ್ರ ಕಾಯಂ ಅಘೋಷಿತ ಕುರಿ ಸಂತೆಯಾಗಿದೆ.

ದಾಖಲೆಗಳಲ್ಲಿ ಬಿಬಿಎಂಪಿ ಮೈದಾನ ಎಂದು ಇದ್ದರೂ ಹಿಂದೂಗಳ‌ ಚಟುವಟಿಕೆಗೆ ಈ ಮೈದಾನದಲ್ಲಿ ಅನುಮತಿ ಇರಲಿಲ್ಲ. ರಾಷ್ಟ್ರೀಯ ಹಬ್ಬಗಳ ಆಚರಣೆಗೂ ಇಲ್ಲಿ ಅವಕಾಶ ಇರಲಿಲ್ಲ. ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್, ಜೂನ್ 5 ರ ಬೆಳಗ್ಗೆ 8 ರಿಂದ ನಿರಂತರ ಸುದ್ದಿ ಪ್ರಸಾರ ಮಾಡಿತ್ತು.

CHITRADURGAದಲ್ಲಿ ವರುಣನ ಆರ್ಭಟ, ರಾತ್ರಿ ಸುರಿದ ಮಳೆಗೆ ಜನ ಹೈರಾಣ

ದರ್ಗಾ ಎಂದರೆ ಮುಸ್ಲಿಮರ ಧರ್ಮ ಗುರುಗಳ ಸಮಾಧಿ ಆಗಿರಬೇಕು. ಆದರೆ ಇಲ್ಲಿ ಅಂತಹ ಯಾವ ಸಮಾಧಿಯೂ ಇಲ್ಲ. ಇದು ದರ್ಗಾ ಜಾಗ ಆಗುವುದಿಲ್ಲ. 30 ದಿನಗಳ ಒಳಗೆ ಎಲ್ಲ ಚಟುವಟಿಕೆಗೆ ಈ ಮೈದಾನ ನೀಡಬೇಕು. ಇಲ್ಲದಿದ್ದರೆ, ಮೈದಾನದಲ್ಲಿ ಕಟ್ಟಿರುವ‌ ನಮಾಜ್ ಟವರ್ ಒಡೆಯುತ್ತೇವೆ ಎಂದು ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷ ಎಸ್ ಭಾಸ್ಕರನ್ ಹಾಗೂ ಹಿಂದೂ ಜನಜಾಗೃತಿಯ ಮೋಹನ್‌ ಎಚ್ಚರಿಸಿದ್ದರು.

Srirangapatna Jamia Masjid Row; ದಶಕಗಳ ಹಿಂದಿನ ಪುಸ್ತಕದಲ್ಲಿ ಟಿಪ್ಪು ಕೆಡವಿರುವ ಉಲ್ಲೇಖ

ಜೂನ್ 6 ರ ಬೆಳಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಸುದ್ದಿಗೋಷ್ಟಿ ನಡೆಸಿ, ಇದು ಬಿಬಿಎಂಪಿ ಜಾಗ ಎಂದು ಘೋಷಿಸಿದರು. ವರ್ಷದಲ್ಲಿ ಎರಡು ದಿನ ಹೊರತು ಪಡಿಸಿ ಇತರರಿಗೂ ಸಭೆ, ಸಮಾರಂಭಕ್ಕೆ ಅವಕಾಶ ನೀಡೋದಾಗಿ ತಿಳಿಸಿದರು. ಈ ಮೈದಾನ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರ ಸುಪರ್ದಿಯಲ್ಲಿದೆ. ಅವರ ಅನುಮತಿ ಮೂಲಕ ಸಮಾರಂಭಕ್ಕೆ ಅವಕಾಶ ಪಡೆಯಬಹುದು ಎಂದು ಬಿಬಿಎಂಪಿ‌ ವಿಶೇಷ ಆಯುಕ್ತ ಹರೀಶ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios