ನಮ್ಮಲ್ಲಿರುವ ತಾಲಿಬಾನ್ ಬೆಂಬಲಿಗರೇ ಭಾರತದ ಪಾಲಿಗೆ ಸಮಸ್ಯೆ: ಸೂಲಿಬೆಲೆ
* ಈಗಾಗಲೇ ಭಾರತೀಯ ಸೇನೆ ಅಲ್ಲಿ ಭಯೋತ್ಪಾದಕ ಚಟುವಟಿಕೆ ಹತ್ತಿಕ್ಕಿದೆ
* ಅಮೆರಿಕ ಅಧ್ಯಕ್ಷ ಜೋಬೈಡನ್ ಅವರ ನಿರ್ಧಾರದಿದ್ದರಿಂದ ಈ ಪರಿಸ್ಥಿತಿ ಉದ್ಭವ
* ವಿಶ್ವಮಟ್ಟದಲ್ಲಿ ದೊಡ್ಡಣ್ಣನ ಸ್ಥಾನ ಕಳೆದುಕೊಂಡ ಅಮೆರಿಕ
ಶಿವಮೊಗ್ಗ(ಆ.19): ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಯಿಂದ ಭಾರತಕ್ಕೆ ಆಗುವ ಸಮಸ್ಯೆಗಿಂತ ಭಾರತದಲ್ಲಿನ ಆಫ್ಘನ್ ತಾಲಿಬಾನಿಗಳನ್ನು ಬೆಂಬಲಿಸುವ ವ್ಯಕ್ತಿಗಳ ಸಮಸ್ಯೆಯೇ ದೊಡ್ಡದು ಎಂದು ಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಎಸ್‌ಎಸ್ ಅನ್ನು ತಾಲಿಬಾನಿಗಳು ಎಂದು ವ್ಯಂಗ್ಯವಾಡುವ ಕಾಂಗ್ರೆಸಿಗರು ಈಗ ಅಫ್ಘಾನಿಸ್ತಾನದ ತಾಲಿಬಾನಿಗಳನ್ನು ಬೆಂಬಲಿಸುತ್ತಿದ್ದಾರೆ. ಇಂಥ ಬೆಂಬಲ ಭವಿಷ್ಯದಲ್ಲಿ ಭಾರತಕ್ಕೆ ಗಂಡಾಂತರ ತರಬಲ್ಲದು ಎಂದು ವಿಶ್ಲೇಷಿಸಿದ್ದಾರೆ.
ಯುದ್ಧವಿನ್ನೂ ಮುಗಿದಿಲ್ಲ: ತಾಲಿಬಾನ್ ವಿರುದ್ಧ ಸಿಡಿದೆದ್ದ ಅಫ್ಘನ್ನರು: ಉಗ್ರರಿಂದ ಹಿಂಸಾಚಾರ!
ಆರ್ಟಿಕಲ್ 370 ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ತೆಗೆದಿರುವ ಕಾರಣದಿಂದ ಭಾರತಕ್ಕೆ ದೊಡ್ಡ ಅಪಾಯ ಆಗುವುದಿಲ್ಲ. ಈಗಾಗಲೇ ಭಾರತೀಯ ಸೇನೆ ಅಲ್ಲಿ ಭಯೋತ್ಪಾದಕ ಚಟುವಟಿಕೆ ಹತ್ತಿಕ್ಕಿದೆ. ಅಫ್ಘಾನಿಸ್ತಾನದಲ್ಲಿ ನಡೆದ ಬೆಳವಣಿಗೆ ಬಳಿಕ ಭಾರತ ಅಲ್ಲಿನ ದೇಶ ತ್ಯಜಿಸುವ ಅಷ್ಘಾನಿಸ್ತಾನಿಗಳಿಗೆ ಆಶ್ರಯ ಕಲ್ಪಿಸಲು ಮುಂದಾಗಿರುವುದು ಒಳ್ಳೆಯದೇ. ಆದರೆ ಈ ಬಗ್ಗೆ ಎಚ್ಚರ ಇರಬೇಕೆಂದರು
ಅಮೆರಿಕ ಅಧ್ಯಕ್ಷ ಜೋಬೈಡನ್ ಅವರು ಅಫ್ಘಾನಿಸ್ತಾನದಿಂದ ಸೇನೆ ವಾಪಸು ಪಡೆಯುವ ನಿರ್ಧಾರ ಕೈಗೊಂಡಿದ್ದರಿಂದ ಈ ಪರಿಸ್ಥಿತಿ ಉದ್ಭವವಾಗಿದೆ. ಈ ಕಾರಣಕ್ಕಾಗಿ ಅಮೆರಿಕ ವಿಶ್ವಮಟ್ಟದಲ್ಲಿ ದೊಡ್ಡಣ್ಣನ ಸ್ಥಾನ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು. ಈ ಮಧ್ಯೆ, ತಾಲಿಬಾನ್ ಭಾರತದ ಜತೆಗೆ ಕೆಟ್ಟದಾಗಿ ವರ್ತಿಸಲು ಸಾಧ್ಯವಾಗಲಾರದು ಎಂದು ಇದೇ ವೇಳೆ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.