Asianet Suvarna News Asianet Suvarna News

CET ಪರೀಕ್ಷೆಗೆ ಜುಲೈನಲ್ಲಿ ಡೇಟ್ ಫಿಕ್ಸ್‌..!

ಕರ್ನಾಟಕದಲ್ಲಿ ಕೊರೋನಾ ತಾಂಡವ ಹೆಚ್ಚಾಗುತ್ತಿದ್ದು, ಈ ನುಡವೆಯೇ ಸಿಇಟಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಈ ಬಗ್ಗೆ ಡಿಸಿಎಂ ಅಶ್ವತ್ಥ್ ನಾರಾಯಣ ಏನ್ ಹೇಳಿದ್ದಾರೆ..? ಇಲ್ಲಿ ಓದಿ

CET Exam to be held in july says dcm ashwath narayan
Author
Bangalore, First Published May 13, 2020, 12:59 PM IST

ಬೆಂಗಳೂರು(ಮೇ 13): ಕರ್ನಾಟಕದಲ್ಲಿ ಕೊರೋನಾ ತಾಂಡವ ಹೆಚ್ಚಾಗುತ್ತಿದ್ದು, ಈ ನುಡವೆಯೇ ಸಿಇಟಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಈ ಬಗ್ಗೆ ಡಿಸಿಎಂ ಅಶ್ವತ್ಥ್ ನಾರಾಯಣ ಮಾತನಾಡಿದ್ದಾರೆ.

ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಸಿಇಟಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಬೇತಿ ನೀಡಲಾಗುತ್ತಿದೆ. ಎಪ್ರಿಲ್ 25 ರಂದು ಅಧಿಕೃತವಾಗಿ ತರಬೇತಿ ಚಾಲನೆಯಾಗಿದೆ ಎಂದಿದ್ದಾರೆ.

ಯಾವಾಗಿಂದ ಕಾಲೇಜು ಆರಂಭ?: ಯುಜಿಸಿಯಿಂದ ದಿನಾಂಕ ಫಿಕ್ಸ್!

ಆನ್‌ಲೈನ್‌ನಲ್ಲೇ ಸಿಇಟಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಿದೆ.  GETCET Go  ಅನ್ನೋ ಹೆಸರಿನಲ್ಲಿ ಆನ್ ಲೈನ್ ತರಬೇತಿ ನಡೆದಿದೆ ಎಂದಿದ್ದಾರೆ.

ದೊಡ್ಡ ಸಂಖ್ಯೆಯಲ್ಲಿ ತರಬೇತಿ ಪಡೆಯಲು ವಿದ್ಯಾರ್ಥಿಗಳು ಮುಂದೆ ಬಂದಿದ್ದಾರೆ. ನಮ್ಮ ನಿರೀಕ್ಷೆ ಮೀರಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಜುಲೈ 30 ಮತ್ತು 31 ರಂದು CET ಪರೀಕ್ಷೆ ನಡೆಸಲು ತಿರ್ಮಾನ ಮಾಡಲಾಗಿದೆ ಎಂದಿದ್ದಾರೆ.

ಸಿಇಟಿ, ನೀಟ್ ಗೆ ಅನುಕೂಲವಾಗುವ ವಿಡಿಯೋ, ಟೆಸ್ಟ್,  ಪಠ್ಯಗಳ ವಿವರ ಈ ಕೋರ್ಸ್‌ನಲ್ಲಿ ನೀಡಲಾಗಿದೆ. ಈಗಾಗಲೇ ಕೋರ್ಸ್ ಪ್ರಾರಂಭ ಆಗಿದ್ದು, 160510 ಜನ ಈಗಾಗಲೇ ಈ ಪೇಜ್ ನೋಡಿದ್ದಾರೆ ಎಂದಿದ್ದಾರೆ.

ಉದ್ಯೋಗ ಕಳೆದುಕೊಳ್ಳುವ ಭಯವೇ? ಈಗಿಂದಲೇ ತಯಾರಿ ಮಾಡಿಕೊಳ್ಳಿ

ಸೆಪ್ಟೆಂಬರ್ ಮೊದಲ ವಾರದಿಂದ ಆರಂಭ ಆಗಲಿದ್ದು, ಪರೀಕ್ಷೆಗಳು, ರಿಸಲ್ಟ್ ಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಡಿಗ್ರಿ ಕಾಲೇಜ್ ಎಂಜಿನಿಯರಿಂಗ್ ಕಾಲೇಜು ಪಾಠ ಮೇ 31 ಒಳಗೆ ಮುಗಿಸಲು ಸೂಚನೆ ನೀಡಲಾಗಿದೆ. ಆನ್ ಲೈನ್ ಮೂಲಕ ಪಾಠ ಮುಗಿಸಲು ಸೂಚನೆ ನೀಡಲಾಗಿದೆ. ನಂತರ ಪರೀಕ್ಷೆ ಬಗ್ಗೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರ ಹೆಚ್ಚಳ:

ಸಿಇಟಿ‌ ಪರೀಕ್ಷೆಗೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಕಡ್ಡಾಯವಾಗಿ ಇರುತ್ತದೆ. ಕೊಠಡಿಯಲ್ಲಿ ಕಡಿಮೆ ವಿದ್ಯಾರ್ಥಿಗಳನ್ನ ಕೂರಿಸಲಾಗುತ್ತದೆ. ಈ ಬಾರಿ ಪರೀಕ್ಷಾ ಕೇಂದ್ರಗಳು ಹೆಚ್ಚಾಗುತ್ತದೆ. ಮುಂಜಾಗ್ರತಾ ಕ್ರಮದೊಂದಿಗೆ ಸಿಇಟಿ ಪರೀಕ್ಷೆ ನಡೆಯುತ್ತದೆ...

ಎಂದಿನಂತೆ  ಆಫ್ ಲೈನ್ ನಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತದೆ. 76913 ವಿದ್ಯಾರ್ಥಿಗಳು ಲಾಗಿನ್ ಆಗಿದ್ದು, 38 ಸಾವಿರ ವಿದ್ಯಾರ್ಥಿಗಳು ಅಪ್ಲಿಕೇಷನ್ ಮೂಲಕ ಲಾಗಿನ್ ಆಗಿದ್ದಾರೆ. 38 ಸಾವಿರ ವಿದ್ಯಾರ್ಥಿಗಳು ವೆಬ್ ಪೋರ್ಟಲ್ ಮೂಲಕ ಲಾಗಿನ್ ಆಗಿದ್ದಾರೆ.. 51975 ವಿದ್ಯಾರ್ಥಿಗಳು ಈಗಾಗಲೇ ಟೆಸ್ಟ್ ತೆಗೆದುಕೊಂಡಿದ್ದಾರೆ. ಸಹಾಯವಾಣಿಯನ್ನು ಕೂಡಾ ಪ್ರಾರಂಭ ಮಾಡಲಾಗಿದೆ ಎಂದಿದ್ದಾರೆ.

ಹೊಸ ಪ್ರಯೋಗಶೀಲ, ಸೃಜನಶೀಲ ಮನಸ್ಸು ಹುಟ್ಟು ಹಾಕಿದ ಲಾಕ್‌ಡೌನ್

ಮೆಡಿಕಲ್ ಸೀಟ್ ಬ್ಲಾಕಿಂಗ್ ವಿಚಾರ ಬಗ್ಗೆ ಈಗಾಗಲೇ ಕಮಿಟಿ ರಚನೆ ಮಾಡಿ ವರದಿ ನೀಡಿದೆ. ವರದಿ ಏನಿದೆ ಅಂತ ಈgiನ ಸಚಿವರು ನೋಡಿ ಕ್ರಮ ತೆಗೆದುಕೊಳ್ತಾರೆ. ಎಂಜಿನಿಯರಿಂಗ್ ಸೀಟ್ ಶುಲ್ಕ ಹೆಚ್ಚಳ ಮಾಡಬೇಕು ಅಂತ ಮನವಿ ಬಂದಿದೆ. ಈ ಬಗ್ಗೆ ಸರ್ಕಾರ ಏನು ನಿರ್ಧಾರ ಮಾಡಿಲ್ಲ. ಕೊರೊನಾ ಸಂಧರ್ಭ ಆಗಿರೋದ್ರೀಂದ ಈ ಬಾರಿ ಅಡ್ಮಿಷನ್ ಆಗೋದೇ ದೊಡ್ಡ ವಿಷಯವಾಗಲಿದೆ ಎಂದಿದ್ದಾರೆ. ಶುಲ್ಕ ಹೆಚ್ಚಳದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಚಿಂತನೆ ಮಾಡಿ ನಿರ್ಧಾರ ಮಾಡ್ತೀವಿ. ಸರ್ಕಾರ ಈ ಬಗ್ಗೆ ಚಿಂತನೆ ಮಾಡಿ ನಿರ್ಧಾರ ಮಾಡುತ್ತದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios