ಕವಿ ಕಣವಿ, ಕಾದಂಬಕರಿಕಾರ ಭೈರಪ್ಪ, ಶಿವನ್, ಪರಿಸರವಾದಿ ತಿಮ್ಮಕ್ಕ, ಸಾಹಿತಿ ಬಿರಾದಾರ್‍ಗೆ ಕರ್ನಾಟಕ ಕೇಂದ್ರೀಯ ವಿವಿ ಗೌರವ ಡಾಕ್ಟರೇಟ್ ಘೋಷಣೆ| ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಐವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ರವಾನಿಸಿದ್ದ ಪ್ರಸ್ತಾವನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ| 

ಕಲಬುರಗಿ(ಮಾ.19): ರಾಜ್ಯದ ಪ್ರತಿಷ್ಠಿತ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಂಶೋಧಕ, ಕಾದಬರಿಕಾರ ಡಾ. ಎಸ್‌. ಎಲ್. ಭೈರಪ್ಪ, ಚೆಂಬೆಳಕಿನ ಕವಿ ಚೆನ್ನವೀರ ಕಣವಿ, ಬಾಹ್ಯಾಕಾಶ ವಿಜ್ಞಾನಿ ಕೆ. ಶಿವನ್, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಸಾಹಿತಿ ಮಗು ಬಿರಾದಾರ್ ಅವರಿಗೆ ತಮ್ಮ ವಾರ್ಷಿಕ ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಸಾಮಾನ್ಯ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ಸಲ್ಲಿಸಿದ ಪ್ರಸ್ತಾವನೆಯನ್ನು ಭಾರತದ ಘನವೆತ್ತ ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಅನುಮೋದನಾ ಪತ್ರವು ಮಾರ್ಚ್ 18 ರಂದು ವಿಶ್ವವಿದ್ಯಾನಿಲಯ ತಲುಪಿದೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್. ಎಂ. ಮಹೇಶ್ವರಯ್ಯಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ತನ್ನ ಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿ ತನ್ನ ಮುಂಬರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲು ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ವಿಶ್ವವಿದ್ಯಾಲಯವು ಶಿಫಾರಸ್ಸು ಮಾಡಿದ ಹೆಸರುಗಳಲ್ಲಿ ಸಾಧಕರಾದ ಡಾ.ಎಂ.ಜಿ.ಬಿರಾದಾರ, ಡಾ.ಎಸ್.ಎಲ್.ಭೈರಪ್ಪ, ಡಾ.ಚೆನ್ನವೀರಕಣವಿ, ಸಾಲುಮರದತಿಮ್ಮಕ್ಕ, ಕೆ.ಶಿವನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅನುಮೋದನೆ ನೀಡಿದ್ದಾರೆ.