ಟೆರರ್ ಅಲರ್ಟ್: ರಾಯಚೂರಿನ ಹಟ್ಟಿ ಚಿನ್ನದ ಗಣಿ, RTPSಗೆ ಬಿಗಿ ಭದ್ರತೆ

ರಾಜ್ಯದಲ್ಲಿ ಉಗ್ರರು ನುಸುಳಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಅಲರ್ಟ್ ಘೋಷಣೆ|ಆರ್ ಟಿ ಪಿಎಸ್,ವೈಟಿಪಿಎಸ್, ಹಟ್ಟಿ ಚಿನ್ನದ ಗಣಿ, ನಾರಾಯಣಪುರ ಜಲಾಶಯ, ರಾಜೋಳ್ಳಿ ಬಂಡಾ ಸೇರಿದಂತೆ ಹಲವು ಕಡೆ ಭದ್ರತೆ|ಶ್ವಾನ ದಳ, ಪೊಲೀಸರಿಂದ ತೀವ್ರ ನಿಗಾ.

Central intelligence report high alert in Raichur

ರಾಯಚೂರು, [ಆ.17]: ಕೇಂದ್ರ ಗುಪ್ತಚರ ದಳದ ಮಾಹಿತಿ ಹಿನ್ನೆಲೆಯಲ್ಲಿ ದೇಶದ ಹಲವು ನಗರಗಳಲ್ಲಿ ಟೆರರ್ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ಕರ್ನಾಟಕದೊಳಗೆ ಉಗ್ರರು ನುಸುಳಿರುವ ಶಂಕೆ ಇದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು ರಾಯಚೂರು ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. 

ಟೆರರ್ ಅಲರ್ಟ್: ಶಂಕಿತರನ್ನು ಮಂಗಳೂರು ಪೊಲೀಸರು ಖೆಡ್ಡಾಗೆ ಬೀಳಿಸಿದ್ದು ಹೀಗೆ...

ಜಿಲ್ಲೆಯ RTPS, YTPS, ಹಟ್ಟಿ ಚಿನ್ನದ ಗಣಿ, ನಾರಾಯಣಪುರ ಜಲಾಶಯ, ರಾಜೋಳ್ಳಿ ಬಂಡಾ ಸೇರಿದಂತೆ ಹಲವು ಕಡೆ ಶ್ವಾನ ದಳ, ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ .ಸಿ. ಬಿ. ವೇದಮೂರ್ತಿ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಟೆರರ್ ಅಲರ್ಟ್: ಬೆಂಗಳೂರು ನಗರದಲ್ಲಿ ಕಟ್ಟೆಚ್ಚರ

 ಮಂಗಳೂರಿನಲ್ಲಿ ಕಾರಿಗೆ ನ್ಯಾಶನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೋ ಹೆಸರಿನ ಬೋರ್ಡ್ ಹಾಕಿಕೊಂಡು ಸಂಶಯಾಸ್ಪದವಾಗಿ ಓಡಾಡುತ್ತಿದ್ದ  8 ಮಂದಿ ಶಂಕಿತರನ್ನು  ಪೊಲೀಸರು ಬಂಧಿಸಿರುವುದು ಇಲ್ಲಿ ಸ್ಮರಿಸಬಹುದು.

Latest Videos
Follow Us:
Download App:
  • android
  • ios