Asianet Suvarna News Asianet Suvarna News

'ಧರ್ಮ, ಜಾತಿ ಹೆಸರಲ್ಲಿ ಕೇಂದ್ರ ಸರ್ಕಾರದ ನಾಟಕ'..!

ಇಡೀ ದೇಶದಲ್ಲೆ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು ಅದನ್ನು ಬಗೆಹರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರ ಧರ್ಮದ ಹೆಸರಲ್ಲಿ, ಜಾತಿ ಹೆಸರಲ್ಲಿ ನಾಟಕವಾಡುತ್ತಿದೆ ಎಂದು ಉರಿಲಿಂಗ ಪೆದ್ದಮಠದ ಜ್ಞಾನಪ್ರಕಾಶ ಸ್ವಾಮೀಜಿ ಕಿಡಿಕಾರಿದ್ದಾರೆ.

central govt drama in name of caste religion
Author
Bangalore, First Published Jan 15, 2020, 10:57 AM IST
  • Facebook
  • Twitter
  • Whatsapp

ಚಾಮರಾಜನಗರ(ಜ.15): ಇಡೀ ವಿಶ್ವದಲ್ಲೇ ನರೇಂದ್ರ ಮೋದಿ ದೊಡ್ಡ ಸುಳ್ಳಿನ ಸರದಾರ, ಜನಧನ, ಉದ್ಯೋಗ ಸೃಷ್ಟಿ, ಆರ್ಥಿಕ ಸ್ಥಿತಿ ಹದಗೆಟ್ಟು ದೇಶ ಕಂಗಾಲಾಗಿರುವುದಕ್ಕೆ ಪ್ರಮುಖ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಎಂದು ಉರಿಲಿಂಗ ಪೆದ್ದಮಠದ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದ್ದಾರೆ.

ಯಳಂದೂರು ತಾಲೂಕು ಪ್ರಗತಿಪರ ಸಂಘಗಳ ಒಕ್ಕೂಟದ ವತಿಯಿಂದ ನಡೆದ ಸಂವಿಧಾನ ವಿರೋಧಿ ಪೌರತ್ವ ಕಾಯಿದೆ(ಸಿಎಎ,ಎನ್‌ಆರ್‌ಸಿ,ಎನ್‌ಪಿಆರ್‌)ಯನ್ನು ಹಿಂಪಡೆಯುವಂತೆ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಡೀ ದೇಶದಲ್ಲೆ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು ಅದನ್ನು ಬಗೆಹರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರ ಧರ್ಮದ ಹೆಸರಲ್ಲಿ, ಜಾತಿ ಹೆಸರಲ್ಲಿ ನಾಟಕವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ, ಅಧ್ಬುತ ಕ್ಷಣ ಕಣ್ತುಂಬಿಕೊಂಡ ಭಕ್ತರು

ಪೌರತ್ವ ಕಾಯ್ದೆಯನ್ನು ಬಿಜೆಪಿಯಲ್ಲಿರುವ ಸಹೋದರರೇ ವಿರೋಧಿಸುತ್ತಿದ್ದಾರೆ ಆದರೆ ಅವರಿಗೆ ಅದನ್ನು ಹೇಳಲು ಭಯ ಎಂದಿದ್ದಾರೆ. ನಾವೆಲ್ಲರೂ ಮೂಲನಿವಾಸಿಗಳಾಗಿದ್ದು, ಯಾವುದೇ ದಾಖಲೆಗಳನ್ನು ಕೊಡುವುದು ಬೇಡ ಎಂದು ಹೇಳಿದ್ದಾರೆ. ಪೌರತ್ವ ಕಾಯ್ದೆಯು ಚುನಾವಣೆ ಗಿಮಿಕ್‌ ಆಗಿದ್ದು ಅದಕ್ಕೆ ಜನರು ಮರುಳಾಗಲಾರರು ಎಂದು ಹೇಳಿದ್ದಾರೆ.

ಎನ್‌ಪಿಆರ್‌, ಎನ್‌ಸಿಆರ್‌, ಸಿಎಎ ಬೇರು ಇವಿಎಮ್‌ನಲ್ಲಿದೆ ಮೊದಲು ನಾವು ಇವಿಎಮ್‌ನ್ನು ತೊಲಗಿಸಬೇಕು. ಇವಿಎಮ್‌ ರದ್ದು ಆಗದಿದ್ದಲ್ಲಿ ಊರು ಉಳಿಯುವುದಿಲ್ಲ, ಧರ್ಮಕ್ಕಿಂತ ದೇಶ ಮುಖ್ಯ ಆದ್ದರಿಂದ ಪೌರತ್ವ ಕಾಯ್ದೆ ವಿರುದ್ಧ ಎಲ್ಲರೂ ಜಾತಿ, ಧರ್ಮ ಮರೆತು ಒಗ್ಗೂಡಿ ಹೋರಾಡಬೇಕು ಎಂದು ಕರೆಕೊಟ್ಟರು.

ಮಂಗಳೂರಲ್ಲಿ 5 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ.

ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದೆ, ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಎಲ್ಲಾ ಸರ್ಕಾರಿ ಸ್ವಾಮ್ಯ ಬ್ಯಾಂಕ್‌ಗಳು ಲಾಭದಲ್ಲಿದ್ದು, ಆದರೆ ಈಗ ನಷ್ಟದಲ್ಲಿರುವುದು ಬಿಜೆಪಿ ಪಕ್ಷದ ಸಾಧನೆ ಎಂದು ವ್ಯಂಗ್ಯವಾಡಿದರು.

ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ, ವೋಟರ್‌ ಕಾರ್ಡ್‌ ಇದ್ದರೆ ಸಾಕು ನಾವೆಲ್ಲ ಭಾರತೀಯರು .ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಪ್ರವಾಹ ಉಂಟಾಗಿ ಆಸ್ತಿಪಾಸ್ತಿ ಹಾಳಾಗಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದರೂ ಹಣವನ್ನು ಬಿಡುಗಡೆ ಮಾಡದೆ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತೋರುತ್ತಿದ್ದೆ ಎಂದು ತಿಳಿಸಿದ್ದಾರೆ.

ಮುಸ್ಲಿಂ ಸಂಘಟನೆಗಳ ಪ್ರತಿಭಟನೆ: ಮಂಗಳೂರಲ್ಲಿ ಹೈ ಅಲರ್ಟ್..!

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ತಹಶೀಲ್ದಾರ್‌ರವರಿಗೆ ಮನವಿ ಪತ್ರವನ್ನು ನೀಡಲಾಯಿತು. ಜಿಪಂ ಸದಸ್ಯ ಜೆ.ಯೋಗೇಶ್‌, ತಾಪಂ ಸದಸ್ಯ ಚಂದ್ರು, ಪಟ್ಟಣ ಪಂಚಾಯಿತಿ ಸದಸ್ಯರಾದ ರವಿ, ರಂಗನಾಥ್‌, ಮಹೇಶ್‌, ಮಹದೇವನಾಯಕ, ಮಲ್ಲಯ್ಯ, ಎಸ್‌ಡಿಪಿಐ ಅಧ್ಯಕ್ಷ ಅಬ್ರಾರ್‌ ಆಹ್ಮದ್‌, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕರಾದ ಯರಿಯೂರು ರಾಜಣ್ಣ, ಕೆ.ಎಂ.ನಾಗರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಮಲ್ಲು, ಮುಸ್ಲೀಂ ಧರ್ಮಗುರುಗಳಾದ ಅಬ್ರಹಾರ್‌, ಮುಖಂಡರಾದ ಮಲ್ಲು, ದೊಡ್ಡಯ್ಯ, ಶ್ರೀನಿವಾಸ, ದೊಡ್ಡಯ್ಯ,ನಯಾಜ್‌ ಖಾನ್‌, ಇರ್ಫಾನ್‌, ಮುಜ್ಜು, ಅಪ್ಸರ್‌ ಖಾನ್‌,ಮುಜೀಬ್‌, ಸೈಫುಲ್ಲ, ಆಹಮದ್‌, ರಿಜ್ವಾನ್‌, ಶಬ್ಬೀರ್‌, ಮುನಾವರ್‌, ಬೇಗ್‌, ನದೀಮ್‌ ಸೇರಿದಂತೆ ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವೃತ್ತ ನಿರೀಕ್ಷಕ ರಾಜೇಶ್‌, ಎಸ್‌ಐ ರವಿಕುಮಾರ್‌ ಬಿಗಿ ಬಂದೋಬಸ್ತ್‌ ಮಾಡಿದ್ದರು.

Follow Us:
Download App:
  • android
  • ios