ಕಲಬುರಗಿ:(ಸೆ.25) ರಾಜ್ಯದಲ್ಲಿ ಹೆಸರು, ಉದ್ದು ಖರೀದಿಗೆ ಕೊನೆಗೂ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ರಾಜ್ಯದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ನಾಗಂಬಿಕಾ ದೇವಿಯವರಿಗೆ ಪತ್ರ ಬರೆದಿದೆ. 


2019-20 ನೇ ಸಾಲಿನ ಹೆಸರು, ಉದ್ದು ಖರೀದಿಗೆ ಬೆಂಬಲ ಬೆಲೆ ಯೋಜನೆಯಲ್ಲಿ ರೈತರ ನೆರವಿಗೆ ಧಾವಿಸುವಂತೆ ಆದೇಶದಲ್ಲಿ ಹೇಳಲಾಗಿದೆ. ನಫೆಡ್ ಹಾಗೂ ಫುಡ್ ಕಾರ್ಪೊರೇಷನ್ ಅಧ್ಯಕ್ಷರಿಗೆ, ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ
ನಿರ್ದೇಶನ ನೀಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಕ್ವಿಂಟಲ್ ಹೆಸರಿಗೆ 7,050 ಉದ್ದಿಗೆ 5700 ಬೆಂಬಲ ಬೆಲೆ ನಿಗದಿಯಾಗಿದ್ದು, ರೈತರಿಂದ ಇದೇ ಬೆಲೆಯಲ್ಲಿ ಖರೀದಿ ನಡೆಯಲಿದೆ.