ಕೇಂದ್ರದ ಕಬ್ಬಿನ ಎಫ್‌ಆರ್‌ಪಿ ದರ ಅವೈಜ್ಞಾನಿಕ : ಕುರುಬೂರು ಸಿದ್ದೇಶ್
ಕೇಂದ್ರ ಕಬ್ಬಿನ ಎಫ್‌ಆರ್‌ಪಿ ದರ ಆವೈಜ್ಞಾನಿಕವಾಗಿದ್ದು ಹಾಗೂ ಕಳೆದ ವರ್ಷದ ಕಬ್ಬಿನ ಬಾಕಿ 150 ರು. ಕೊಡಿಸಬೇಕೆಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಸಿದ್ದೇಶ್ ಆಗ್ರಹಿಸಿದರು.
ಟಿ. ನರಸೀಪುರ : ಕೇಂದ್ರ ಕಬ್ಬಿನ ಎಫ್‌ಆರ್‌ಪಿ ದರ ಆವೈಜ್ಞಾನಿಕವಾಗಿದ್ದು ಹಾಗೂ ಕಳೆದ ವರ್ಷದ ಕಬ್ಬಿನ ಬಾಕಿ 150 ರು. ಕೊಡಿಸಬೇಕೆಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಸಿದ್ದೇಶ್ ಆಗ್ರಹಿಸಿದರು.
ಕಬಿನಿ ಅತಿಥಿಗೃಹದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ತಾಲೂಕು ಘಟಕದ ವತಿಯಿಂದ ರೈತರ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಪ್ರಸಕ್ತ ಸಾಲಿಗೆ ಕಬ್ಬಿನ ಎಫ್‌ಆರ್‌ಪಿ ದರವನ್ನು ಅವೈಜ್ಞಾನಿಕವಾಗಿ ಪ್ರತಿ ಕ್ವಿಂಟಲ… ಗೆ 10 ರು. ಹೆಚ್ಚಿಸಿ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡಿ ಸಕ್ಕರೆ ಕಾರ್ಖಾನೆಗಳ ಪರವಾಗಿ ಕೇಂದ್ರ ಸರ್ಕಾರ ನಿಂತಿದೆ ಪ್ರತಿ ವರ್ಷ ರೈತರು ಕಬ್ಬು ಬೆಳೆಯಲು ಉತ್ಪಾದನಾ ವೆಚ್ಚಗಳಾದ ಗೊಬ್ಬರ ಕೂಲಿ ಟ್ರ್ಯಾಕ್ಟರ್ ಉಳುಮೆ ಬಾಡಿಗೆ ಅಧಿಕವಾಗಿರುತ್ತದೆ ಹಾಗೂ ಬೆಳೆದ ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸುವಾಗ ಕಟಾವು ಕೂಲಿ 800-1300 ರು. ತನಕ ಇದೆ ಮತ್ತು ಸಾಗಾಣಿಕೆ ವೆಚ್ಚವನ್ನು ಪ್ರತಿ ವರ್ಷ ತಮಗಿಷ್ಟಬಂದ ಹಾಗೆ ಹೆಚ್ಚಿಗೆ ಮಾಡಿ ಹಾಗೂ ಸಕ್ಕರೆ ಇಳುವರಿಯಲ್ಲಿ ಕಾರ್ಖಾನೆಗಳು ರೈತರಿಗೆ ಅನ್ಯಾಯ ಮಾಡುತ್ತವೆ, ಆದ್ದರಿಂದ ಎಫ್‌ಆರ್‌ಪಿ ದರವನ್ನು ಪುನರ್ ಪರಿಶೀಲಿಸಿ ರೈತರಿಗೆ ವೈಜ್ಞಾನಿಕ ಬೆಲೆ ಕೊಡಿಸಬೇಕು ಎಂದು ಅವರು ತಿಳಿಸಿದರು.
ಕಬಿನಿ ಬಲದಂಡನಾಲೆಯ ವಿತರಣಾ ನಾಲೆಗಳಲ್ಲಿ ಓಳು ತುಂಬಿದ್ದು, ತಕ್ಷಣ ನೀರಾವರಿ ಇಲಾಖೆ ನಾಳೆಗಳಲ್ಲಿ ಓಳು ಮತ್ತು ಜಂಗಲ… ಕಟಿಂಗ… ಮಾಡುವ ಮೂಲಕ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿಯಲು ತಕ್ಷಣ ಕ್ರಮ ಕೈಗೊಳ್ಳಬೇಕು
ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಕೃಷಿ ಸಾಲ ಕೊಡಲು ಅನಾವಶ್ಯಕವಾಗಿ ತಿಂಗಳುಗಟ್ಟಲೆ ಬ್ಯಾಂಕಿಗೆ ಅಲೆಸುತ್ತಿದ್ದಾರೆ, ರೈತರು ಬೆಳೆ ಸಾಲ ಮರುಪಾವತಿ ಮಾಡಿದರು ರೈತರಿಗೆ ಸಾಲ ತಿರುವಳಿ ಪತ್ರ ನೀಡಲು ವಿಳಂಬ ಮಾಡುತ್ತಿದ್ದಾರೆ ಮತ್ತು ಸೆಸ್‌್ಕ ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ವಿದ್ಯುತ್ ಕೊಡುವುದು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ನೀವೆಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಂಡು ರೈತರಿಗೆ 15 ದಿನಗಳಲ್ಲಿ ನ್ಯಾಯ ಕೊಡಿಸಬೇಕು, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸಾದ್‌ನಾಯಕ್, ಪ್ರದೀಪ್, ಟೌನ್ ಅಧ್ಯಕ್ಷ ಅಪ್ಪಣ್ಣ, ರಾಜೇಶ್, ಪರಶಿವಮೂರ್ತಿ, ಕುಮಾರ್, ನಂಜುಂಡಸ್ವಾಮಿ, ಯೋಗೇಶ್, ನಿಂಗರಾಜು, ಗಿರೀಶ್, ಉಮೇಶ್, ಶಾಂತರಾಜು, ಚಂದ್ರು, ಕಾಂತರಾಜು, ಸುರೇಶ್ ಇದ್ದರು.