ಬೆಂಗಳೂರು ಏರ್ಪೋರ್ಟ್ನಲ್ಲಿ 'ವಾಯುಯಾನ ಭದ್ರತಾ ಸಂಸ್ಕೃತಿ ಸಪ್ತಾಹ' ಆಚರಣೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAB) ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಸಹಯೋಗದೊಂದಿಗೆ ಆಗಸ್ಟ್ 5 ರವರೆಗೆ ಏರ್‌ಪೋರ್ಟ್‌ನ ಆವರಣದಲ್ಲಿ 'ವಾಯುಯಾನ ಭದ್ರತಾ ಸಂಸ್ಕೃತಿ ಸಪ್ತಾಹ'ವನ್ನು ಆಚರಿಸಲಾಗುತ್ತಿದೆ.
ಬೆಂಗಳೂರು (ಆ.03): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAB) ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಸಹಯೋಗದೊಂದಿಗೆ ಆಗಸ್ಟ್ 5 ರವರೆಗೆ ಏರ್‌ಪೋರ್ಟ್‌ನ ಆವರಣದಲ್ಲಿ 'ವಾಯುಯಾನ ಭದ್ರತಾ ಸಂಸ್ಕೃತಿ ಸಪ್ತಾಹ'ವನ್ನು ಆಚರಿಸಲಾಗುತ್ತಿದೆ. ಬಿಐಎಎಲ್‌ನ ಸಿಇಒ ಹರಿ ಮರಾರ್‌ಹಾಗೂ ಬಿಸಿಎಎಸ್‌ನ ಪ್ರಾದೇಶಿಕ ನಿರ್ದೇಶಕರಾದ ರಾಜೀವ್ ಕುಮಾರ್ ರೈ ಸಪ್ತಾಹವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ರಾಜೀವ್‌ಕುಮಾರ್, ವಿಮಾನ ನಿಲ್ದಾಣದಲ್ಲಿ ತೆಗೆದುಕೊಳ್ಳುವ ಸುರಕ್ಷತೆ ಅತ್ಯಂತ ಕಠಿಣವಾಗಿರುತ್ತದೆ. ಆದರೆ, ಸುರಕ್ಷತೆಗೆ ಬಳಸುವ ಸಲಕರಣೆಗಳ ಬಗ್ಗೆ ಸಾರ್ವಜನಿಕರಿಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರಿಗೂ ಸಹ ಸುರಕ್ಷತಾ ಉಪಕರಣಗಳ ಬಗ್ಗೆ ಮಾಹಿತಿ ನೀಡಲು ಈ ಏಳು ದಿನಗಳ ಪ್ರದರ್ಶನದಲ್ಲಿ ಸಾರ್ವಜನಿಕರಿಗೂ ಮುಕ್ತ ಅವಕಾಶ ನೀಡಲಾಗಿದೆ.
ತಿರುಪತಿ, ಗೋವಾ, ಹೈದರಾಬಾದ್‌ಗೂ ವಿಮಾನ ಹಾರಾಟಕ್ಕೆ ಅನುಮತಿ: ಸಂಸದ ರಾಘವೇಂದ್ರ
ಹಲವಾರು ಮೂಲ ಉಪಕರಣ ತಯಾರಕರು (OEMs) ವಿಮಾನ ನಿಲ್ದಾಣಗಳ ಸುರಕ್ಷತೆಯನ್ನು ಹೆಚ್ಚಿಸುವ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ಪ್ರದರ್ಶನ ಮತ್ತು ಸಂಸ್ಕೃತಿ ಸಪ್ತಾಹದ ಉದ್ದೇಶವು ವಿಮಾನಯಾನ ಭದ್ರತಾ ಅಭ್ಯಾಸಗಳು, ತಂತ್ರಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ, ವಿಮಾನಗಳಲ್ಲಿನ ಭದ್ರತಾ ಪ್ರಕ್ರಿಯೆಗಳ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದು ವಿವರಿಸಿದರು.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಸಿಕ್ತು 4 ಕೋಟಿಯ ಚಿನ್ನದ ಬಿಸ್ಕತ್: ವ್ಯಕ್ತಿ ಸೆರೆ
ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ಹಲವಾರು ಉನ್ನತ ಅಧಿಕಾರಿಗಳು, ಕೆಐಎಬಿ ನಿರ್ವಾಹಕರು ಮತ್ತು ಬಿಸಿಎಎಸ್‌ನ ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಾಯುಯಾನ ಭದ್ರತಾ ಸಂಸ್ಕೃತಿ ಸಪ್ತಾಹ ಅನ್ನು ಭಾರತದ ವಿಮಾನ ನಿಲ್ದಾಣಗಳಲ್ಲಿ ನಡೆಸಲಾಗುತ್ತಿದೆ ಮತ್ತು KIAB ಸಹ ಇದರ ಭಾಗವಾಗಿದೆ.