ವಿಜಯಪುರ(ಏ.01): ನನ್ನ ಸಹೋದರಿ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಡ ಇದೆ ಎಂದು ಸಿಡಿ ಯುವತಿಯ ಸಹೋದರ ಸ್ಫೋಟಕ ಹೇಳಿಕೆಯೊಂದನ್ನ ನೀಡುವ ಮೂಲಕ ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿಸಿದ್ದಾನೆ. 

ಇಂದು(ಗುರುವಾರ) ನಗರದಲ್ಲಿ ಮಾತನಾಡಿದ ಅವರು, ನಾನು ಪ್ರೂಫ್‌ ಸಮೇತ ಹೇಳುತ್ತಿದ್ದೇನೆ. ಸಿಡಿ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಲಿ ಎಲ್ಲವೂ ಹೊರ ಬರುತ್ತದೆ. ಸತ್ಯವನ್ನ ಮುಚ್ಚಿಡಲು ಆಗುವುದಿಲ್ಲ. ಇಂದಲ್ಲ ನಾಳೆ ಡಿಕೆಶಿ ಹೆಸರು ಹೊರಗೆ ಬಂದೇ ಬರುತ್ತದೆ. ನಾವು ಎಲ್ಲ ಸಾಕ್ಷಿಗಳನ್ನ ಎಸ್‌ಐಟಿಗೆ ನೀಡಿದ್ದೇವೆ. ನಮ್ಮ ಬಳಿ ಇನ್ನು 9 ಸಾಕ್ಷಿಗಳಿವೆ. 11 ರಲ್ಲಿ ಬರೀ ಎರಡು ಸಾಕ್ಷಿಗಳನ್ನ ಮಾತ್ರ ಹೊರ ಬಿಟ್ಟಿದ್ದೇವೆ. ಸಂದರ್ಭ ಬಂದಾಗ ಆ ಸಾಕ್ಷಿಗಳನ್ನ ಸ್ಫೋಟ ಮಾಡುತ್ತೇನೆ. ಆ ಸಾಕ್ಷಿಗಳು ಡಿಕೆಶಿಗೆ ಮುಳುವಾಗುತ್ತವೆ. ನಾನು ಸೇಫ್ ಆಗಿದ್ದೀನಿ, ಇಂಥಲ್ಲೇ ಹೊರಟಿದ್ದೀನಿ ಎನ್ನುವ ಸಾಕ್ಷ್ಯಗಳಿವೆ. ಇನ್ನೂ ಆಡಿಯೋ ಸಾಕ್ಷಿಗಳು ಇರುವ ಬಗ್ಗೆ ಸಿಡಿ ಲೇಡಿ ಸಹೋದರ ಮಹತ್ವದ ಸುಳಿವು ಕೊಟ್ಟಿದ್ದಾನೆ.

ಸಿಡಿ ಲೇಡಿ ಮೆಡಿಕಲ್‌ ಟೆಸ್ಟ್‌ ಸೀಕ್ರೆಟ್‌: ಯಾರಿಗೆ ಕಾದಿದೆ ಗಂಡಾಂತರ, ಯಾರಿಗೆ ಗ್ರಹಚಾರ..?

ನನ್ನ ಸಹೋದರಿ ಮಾತನಾಡುತ್ತೇನೆ ಅಂತಿದ್ದಾಳೆ. ಆದ್ರೆ ಯಾಕೆ ಮಾತನಾಡಲು ಬಿಡ್ತಿಲ್ಲ ಅನ್ನೋದೆ ಗೊತ್ತಾಗುತ್ತಿಲ್ಲ. ಎಸ್‌ಐಟಿ ವಿಚಾರಣೆ ವೇಳೆ ನನ್ನ ಸಹೋದರಿ ಕಣ್ಣೀರು ಹಾಕಿದ್ದು ನನಗೆ ಬೇಜಾರ್ ಆಗಿದೆ. ನನ್ನ ಸಹೋದರಿಗೆ ಒತ್ತಡ ಹಾಕಿ ಇಟ್ಟಿದ್ದಾರೆ. 28 ದಿನಗಳಿಂದ ನಮ್ಮಿಂದ ದೂರ ಇದ್ದಾಳೆ ಅಂದ್ರೆ ನಮ್ಮ ಮರೆತು ಬಿಟ್ಟಿರುತ್ತಾಳಾ?, ತಂದೆ ತಾಯಿ ಜೊತೆಗೆ ಮಾತನಾಡ್ತಿಲ್ಲ ಎಂದರೇ ಎಷ್ಟು ಕಷ್ಟದಲ್ಲಿ ಇರಬೇಕು ನೋಡಿ ಎಂದ ಸಹೋದರ ತನ್ನ ಅಳಲು ತೋಡಿಕೊಂಡಿದ್ದಾನೆ. 

ಹೆದರಿಸಿ ನಮ್ಮ ಸಹೋದರಿಯನ್ನ ಇಟ್ಟಿದ್ದಾರೆ. ಎಸ್‌ಐಟಿ ಅಧಿಕಾರಿಗಳಿಗೆ ಸಹೋದರಿಯನ್ನ ಭೇಟಿ ಮಾಡಿಸಲು ಮನವಿ ಮಾಡಿದ್ದೇವೆ. ಆಕೆಗೆ ಫೋನ್ ಮಾಡಿಯೂ ಮಾತನಾಡಲು ಬಿಡುತ್ತಿಲ್ಲ. ಆಕೆಯೇ ಮಾತನಾಡ್ತಿಲ್ಲ ಎನ್ನುತ್ತಿದ್ದಾರೆ ಹೇಗೆ ನಂಬಬೇಕು ಸಂತ್ರಸ್ತ ಯುವತಿಯ ಸಹೋದರ ಹೇಳಿದ್ದಾನೆ.