ಬೆಂಗಳೂರು(ಜ.19): ಪಂಪಿಂಗ್ ಸ್ಟೇಶನ್‌ಗಳಲ್ಲಿ ತುರ್ತು ಕಾಮಗಾರಿ ಕಾರಣದಿಂದ ಬೆಂಗಳೂರಿನಲ್ಲಿ 2 ದಿನ ಕಾವೇರಿ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲ ಮಂಡಳಿ ಹೇಳಿದೆ. ಜನವರಿ 22 ಹಾಗೂ 23 ರಂದು ಕಾವೇರಿ1,2,3 ನೇ ಹಂತ ಯೋಜನೆಯಲ್ಲಿ ದುರಸ್ಥಿ ಕಾಮಗಾರಿ ನಡೆಯಲಿದೆ. ಹೀಗಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದಿದೆ.

ಇದನ್ನೂ ಓದಿ: ಬೆಂಗಳೂರು ಪೊಲೀಸ್ ಸೂಪರ್ ಚೇಸಿಂಗ್: ತಾಯಿ ಮಡಿಲು ಸೇರಿದ ಕಂದಮ್ಮ

ಜನವರಿ 22 ರಾತ್ರಿ 10 ಗಂಟೆಯಿಂದ ಜ 23 ಸಂಜೆ 4 ಗಂಟೆಯವರೆಗೆ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಹೇಳಿದೆ. ಇಡೀ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡೋ ಟಿಕೆ ಹಳ್ಳಿ, ಹಾರೋಹಳ್ಳಿ, ಮತ್ತು ತಾತ ಗುಣಿ ಯಲ್ಲಿನ ಪಂಪಿಂಗ್ ಸ್ಟೇಶನ್ ಗಳಲ್ಲಿ ದುರಸ್ಥಿ ಕಾಮಗಾರಿ ನಡೆಯಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮದ್ಯ ನಿಷೇಧವಾಗುತ್ತಾ..?

ತುರ್ತು ಕಾಮಗಾರಿಯಿಂದ ಯಶವಂತಪುರ, ಮಲ್ಲೇಶ್ವರಂ,ಮತ್ತಿಕೆರೆ,ಜಯಮಹಲ್ ವಸಂತನಗರ.ಆರ್ ಟಿ ನಗರ, ಮೆಜೆಸ್ಟಿಕ್,ಶಿವಾಜಿನಗರ,ಗವಿಪುರ,ಕೆ ಆರ್ ಮಾರುಕಟ್ಟೆ, ಮಡಿವಾಳ, ಸಂಪಂಗಿರಾಮನಗರ,ಚಾಮರಾಜಪೇಟೆ,ಕುಮಾರಸ್ವಾಮಿಲೇಔಟ್,ಭೈರಸಂದ್ರ,ಆಡುಗೋಡಿ ,ದೊಮ್ಮಲೂರು,  ಇಂದಿರಾನಗರ, ವಿಜಯನಗರ, ಚಿಕ್ಕಪೇಟೆ, ಹಲಸೂರು,ಕೋರಮಂಗಲ ಸೇರಿದಂತೆ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.  ಹೀಗಾಗಿ ಬೆಂಗಳೂರಿಗರು ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ.