Asianet Suvarna News Asianet Suvarna News

ಹಸಿರು ವಲಯ ಕೋಲಾರದಲ್ಲಿ ಸಾಮಾನ್ಯ ವಹಿವಾಟಿಗೆ ಅನುಮತಿ

ಕೊರೊನಾ ಸೋಂಕು ಇಲ್ಲದೆ ಹಸಿರು ವಲಯದಲ್ಲಿರುವ ಕೋಲಾರದಲ್ಲಿ ದಿನಸಿ ಅಂಗಡಿಗಳು, ಹಣ್ಣು, ಹೂ ಹಾಗು ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ವ್ಯಾಪಾರಕ್ಕೆ ಸಮಯ ನಿಗದಿ ಮಾಡಲಾಗಿದೆ.

 

Casual activities are allowed in green zone kolar
Author
Bangalore, First Published Apr 26, 2020, 2:36 PM IST

ಕೋಲಾರ(ಏ.26): ಕೊರೊನಾ ಸೋಂಕು ಇಲ್ಲದೆ ಹಸಿರು ವಲಯದಲ್ಲಿರುವ ಕೋಲಾರದಲ್ಲಿ ದಿನಸಿ ಅಂಗಡಿಗಳು, ಹಣ್ಣು, ಹೂ ಹಾಗು ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ವ್ಯಾಪಾರಕ್ಕೆ ಸಮಯ ನಿಗದಿ ಮಾಡಲಾಗಿದೆ.

ಹಾರ್ಡ್‌ ವೇರ್‌ ಶಾಪ್‌ಗಳು, ಪೈಂಟ್‌ ಅಂಗಡಿಗಳು, ಆಟೋಮೊಬೈಲ್ಸ್‌ ಹಾಗು ಗ್ಯಾರೇಜ್‌ಗಳೂ ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೆ ಸ್ವಲ್ಪ ರಿಲ್ಯಾಕ್ಸ್‌ ನೀಡಲಾಗಿದೆ. ಹೋಟೆಲ್‌ಗಳು ತೆರೆದಿದ್ದವಾದರೂ ಕುಳಿತು ತಿನ್ನಲು ಅವಕಾಶ ಇರಲಿಲ್ಲ, ಪಾರ್ಸಲ್‌ ಕಟ್ಟಿಕೊಡುತ್ತಿದ್ದುದು ಕಂಡು ಬಂತು. ಸಿಮೆಂಟ್‌ ಅಂಗಡಿಗಳು, ಕಬ್ಬಿಣದ ಅಂಗಡಿಗಳು ಹಾಗು ಮರದ ಅಂಗಡಿಗಳನ್ನು ತೆರೆಯಲಾಗಿತ್ತು.

ತಾಲೂಕು ಕೇಂದ್ರಗಳಲ್ಲೂ ಸಡಿಲ

ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಹಾರ್ಡ್‌ ವೇರ್‌, ಪೈಂಟ್‌ ಅಂಗಡಿ, ಆಟೋಮೊಬೈಲ್ಸ್‌ ಸೇರಿದಂತ್ತೆ ಇನ್ನಿತರ ಕ್ಷೇತ್ರಗಳಿಗೆ ಅನುಮತಿ ನೀಡಲಾಗಿತ್ತು. ಬಂಗಾರಪೇಟೆಯಲ್ಲಿಯೂ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ 12 ರವರೆಗೆ ತೆರೆಯಲಾಗಿತ್ತು, ತರಕಾರಿ ಮತ್ತು ದಿನಸಿ ಅಂಗಡಿಗಳು ತೆರೆದಿದ್ದವು.ಹೂವು, ಹಣ್ಣು ಅಂಗಡಿಗಳಿಗೂ ಸಡಿಲಿಕೆ ಇತ್ತು.

ದಂಪತಿಗಳನ್ನು ಒಂದು ಮಾಡಲು ಬಂದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಮುಳಬಾಗಿಲು ಹಾಗು ಶ್ರೀನಿವಾಸಪುರ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಅಂಗಡಿಗಳಿಗೂ ಮಧ್ಯಾಹ್ನದವರೆಗೆ ರಿಯಾಯಿತಿ ನೀಡಲಾಗಿತ್ತು. ಆದರೆ ಕೊರೊನಾ ಭೀತಿಯಿಂದ ಗ್ರಾಹಕರೆ ಅಂಗಡಿಗಳಿಗೆ ಬರುತ್ತಿಲ್ಲ.ಅಂಗಡಿಗಳಲ್ಲಿ ಕೊಳ್ಳುವವರ ಸಂಖ್ಯೆ ವಿರಳವಾಗಿತ್ತು.ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರು ಬರುತ್ತಿಲ್ಲ. ಕೋಲಾರ ತಾಲೂಕಿನ ನರಸಾಪುರ ಮತ್ತು ವೇಮಗಲ್‌ ಬಳಿ ಇರುವ ಕೈಗಾರಿಕೆಗಳಲ್ಲಿ ಕೆಲವು ತೆರೆಯಲಾಗಿತ್ತು, ಶೇ.50 ರಷ್ಟುಸಿಬ್ಬಂದಿ ಮತ್ತು ಕಾರ್ಮಿಕರು ಕೆಲಸ ಮಾಡಲು ಅವಕಾಶ ನೀಡಲಾಗಿತ್ತು.

ಕಾರ್ಖಾನೆ ತೆರೆಯಲು ಸಿಎಸ್‌ಆರ್‌ ಸಭೆ

ಕೋಲಾರ ಜಿಲ್ಲೆಯು ಕೊರೊನಾ ಸೋಂಕಿತದಿಂದ ದೂರ ಉಳಿದು ಹಸಿರು ವಲಯದಲ್ಲಿರುವುದರಿಂದ ತಾಲೂಕಿನ ನರಸಾಪುರ ಮತ್ತು ವೇಮಗಲ್‌ ಭಾಗದಲ್ಲಿ ಕಾರ್ಖಾನೆಗಳನ್ನು ತೆರೆಯುವ ಬಗ್ಗೆ ಸೋಮವಾರ ಸಿಎಸ್‌ಆರ್‌ ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಇಲ್ಲದೆ ಇದ್ದರೂ ಸೋಂಕು ಬಾರದಂತೆ ಎಚ್ಚರ ವಹಿಸಲಾಗಿದೆ, ತಮಿಳುನಾಡು, ಆಂಧ್ರ ಪ್ರದೇಶ, ಬೆಂಗಳೂರು, ಹಾಗು ಚಿಕ್ಕಬಳ್ಳಾಪುರ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಾಲ್ಕು ದಿಕ್ಕುಗಳಲ್ಲಿ ಸೋಂಕು ಇರುವುದರಿಂದ ಈ ಭಾಗಕ್ಕೆ ಬಾರದಂತೆ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ, ಇದರಿಂದಾಗಿ ಗಡಿಗಳಲ್ಲಿ ಎಲ್ಲ 12 ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಲಾಗಿದೆ ಎಂದರು.

ಸೋಂಕು ಹರಡದಂತೆ ಎಚ್ಚರಿಕೆ

ಅಂಗಡಿ ಮತ್ತು ಕೆಲವು ಕ್ಷೇತ್ರಗಳನ್ನು ಸಡಿಲಗೊಳಿಸಲು ಸರ್ಕಾರ ಆದೇಶ ನೀಡಿದೆ. ಆದರೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮುಕ್ತವಾಗಿಲ್ಲದಿರುವುದರಿಂದ ಸೋಂಕು ಹರಡದಂತೆ ಎಚ್ಚರವಹಿಸುವುದು ಜವಾಬ್ದಾರಿಯಾಗಿದೆ. ಇದರ ಮಧ್ಯ ಜನ ಮತ್ತು ರೈತರ ದೃಷ್ಟಿಯಿಂದ ಕೆಲವು ಸಡಿಕೆಗಳನ್ನು ಮಾಡಬೇಕಾದ ಅಗತ್ಯವೂ ಇದೆ. ಈ ಎರಡನ್ನೂ ಸರಿದೂಗಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಬಸವ ತತ್ವ ಪಾಲನೆ ಅಗತ್ಯ: ಸಚಿವ ಸೋಮಶೇಖರ್

ಕೃಷಿ ಜಿಲ್ಲೆಯಾಗಿರುವ ಕೋಲಾರದಲ್ಲಿ ರೈತರು ಹೆಚ್ಚಾಗಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ, ಕೊರೊನಾ ಸೋಂಕಿನಿಂದಾಗಿ ತರಕಾರಿಗಳ ವ್ಯಾಪಾರ ಕುಗ್ಗಿರುವುದರಿಂದ ತರಕಾರಿಗಳಿಗೆ ಬೆಲೆ ಇಲ್ಲದಂತಾಗಿತ್ತು, ಆದರೆ ಕಳೆದ ಕೆಲವು ದಿವಸಗಳಿಂದ ತರಕಾರಿ ಸಾಗಣೆ ವಾಹನಗಳು ಮತ್ತು ಲಾರಿಗಳಿಗೆ ರಸ್ತೆ ಮೇಲೆ ಓಡಾಡಲು ಅವಕಾಶ ನೀಡಿರುವುದರಿಂದ ತರಕಾರಿ ಖರೀದಿ ನಡೆಯುತ್ತಿದೆ ಹೊರ ರಾಜ್ಯಗಳಿಗೂ ತರಕಾರಿ ವಾಹನಗಳ ಓಡಾಟ ಆರಂಭವಾಗಿದೆ ಇದರಿಂದ ರೈತರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಜನತೆಯ ಸಹಕಾರಕ್ಕೆ ಮನವಿ

ಸಾರ್ವಜನಿಕರು ಜಿಲ್ಲೆಗೆ ಕೊರೊನಾ ಸೋಂಕು ಹರಡದಂತೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದೀರಿ ಮುಂದೆಯೂ ಲಾಕ್‌ಡೌನ್‌ ತೆರವಾಗುವ ವರೆಗೆ ಸಹಕಾರ ನೀಡಿ ಜಿಲ್ಲೆಯ ಆರೋಗ್ಯ ರಕ್ಷಣೆಗೆ ಸಹಕಾರ ನೀಡಬೇಕು ಕೋರಿದರು.

Follow Us:
Download App:
  • android
  • ios