ಜಾತೀಯತೆ ಜಾತ್ಯತೀತತೆ ಒಟ್ಟಿಗೆ ಇರಲು ಸಾಧ್ಯವಿಲ್ಲ

ಎಲ್ಲ ಕಾಲಕ್ಕೂ ಲಾಟರಿ ಹೊಡೆಯುತ್ತದೆ ಎಂದು ಎಚ್‌ಡಿಕೆ ಭಾವಿಸಬಾರದು. ಅವರ ಪಕ್ಷಕ್ಕೆ ಜಾತ್ಯತೀತ ಜನತಾದಳ ಹೆಸರಿನ ಬದಲು ಜಾತೀಯವಾದಿ ಜನತಾದಳ ಎಂದಿಟ್ಟುಕೊಳ್ಳಲಿ. ಜಾತಿಯ ದ್ವೇಷ ಮತ್ತು ಜಾತ್ಯತೀತತೆ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೆಚ್‌.ಡಿ.ಕುಮಾರಸ್ವಾಮಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.

Casteism and secularism cannot coexist snr

 ಕೋಲಾರ :  ಎಲ್ಲ ಕಾಲಕ್ಕೂ ಲಾಟರಿ ಹೊಡೆಯುತ್ತದೆ ಎಂದು ಎಚ್‌ಡಿಕೆ ಭಾವಿಸಬಾರದು. ಅವರ ಪಕ್ಷಕ್ಕೆ ಜಾತ್ಯತೀತ ಜನತಾದಳ ಹೆಸರಿನ ಬದಲು ಜಾತೀಯವಾದಿ ಜನತಾದಳ ಎಂದಿಟ್ಟುಕೊಳ್ಳಲಿ. ಜಾತಿಯ ದ್ವೇಷ ಮತ್ತು ಜಾತ್ಯತೀತತೆ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೆಚ್‌.ಡಿ.ಕುಮಾರಸ್ವಾಮಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಏನೇ ತಿಪ್ಪರಲಾಗ ಹಾಕಿದ್ರು ಪ್ರತಿಸಲ ಲಾಟರಿ ಹೊಡೆಯೊಲ್ಲ. ಕೆಲವೊಮ್ಮೆ ಅವರಿಗೆ ಲಾಟರಿ ಹೊಡೆದಿದೆ. 2006ರಲ್ಲಿ ಮತ್ತು 2018ರಲ್ಲಿ ಲಾಟರಿ ಹೊಡೆದಿದೆ. ಪ್ರತಿಸಲ ಲಾಟರಿ ಹೊಡೆದರೆ ಪ್ರಜಾಪ್ರಭುತ್ವ ದುರ್ಬಲ ಆಗುತ್ತದೆ ಎಂದರು.

ಎಲ್ಲ ಕಾಲಕ್ಕೂ ಲಾಟರಿ ಹೊಡೆಯೋಲ್ಲ

ಪ್ರತಿ ಚುನಾವಣಾ ಸಮೀಕ್ಷೆಗಳು ಮತ್ತು ಕೋಡಿಮಠದ ಶ್ರೀಗಳ ಭವಿಷ್ಯದವರೆಗೂ ಎಲ್ಲರೂ ಸಂಪೂರ್ಣ ಬಹುಮತ ಎಂತಲೇ ಹೇಳಿದ್ದಾರೆ. ಎಲ್ಲಾ ಕಾಲಕ್ಕೂ ಲಾಟರಿ ಹೊಡೆಯುತ್ತದೆ ಎಂದು ಕುಮಾರಸ್ವಾಮಿ ಭಾವಿಸಬಾರದು ಎಂದು ವ್ಯಂಗ್ಯವಾಡಿದರು.

ನಮ್ಮ ಪಕ್ಷದಲ್ಲಿ ಜಾತಿ ಹೆಸರು ಹೇಳಿಕೊಂಡು ರಾಜಕಾರಣ ಮಾಡಲ್ಲ. ನರೇಂದ್ರ ಮೋದಿ ನಾಲ್ಕು ಬಾರಿ ಸಿಎಂ ಮತ್ತು ಎರಡು ಬಾರಿ ಪಿಎಂ ಆಗಿದ್ದು ಜಾತಿ ಹೆಸರು ಹೇಳಿಕೊಂಡು ಅಲ್ಲ. ಅವರೆಲ್ಲಾದರೂ ಜಾತಿ ಹೆಸರು ಹೇಳಿ ರಾಜಕಾರಣ ಮಾಡಿದ್ದನ್ನು ಕೇಳಿದ್ದೀರಾ, ಇಷ್ಟಕ್ಕೂ ಅವರ ಜಾತಿ ಹುಡುಕುವುದಾದರೆ ಅವರು ಅತೀ ಸಣ್ಣಸಂಖ್ಯೆಯ ಜಾತಿಯಿಂದ ಬಂದವರು. ಬಿಜೆಪಿಯ ಪ್ರತಿ ಕಾರ್ಯಕರ್ತನೂ ಸಿದ್ದಾಂತದಂತೆ ರಾಜಕಾರಣ ಮಾಡಬೇಕು. ಸೋ ಕಾಲ್ಡ್‌ ಜಾತ್ಯತೀತ ವಾದಿಗಳಿಗೆ ಜಾತಿ ಏಕೆ ನೆನಪು ಆಗುತ್ತಿದೆ ಎಂದು ಪ್ರಶ್ನಿಸಿದರು.

ಜನರ ಕಷ್ಟಕ್ಕೆ ಬಾರದ ಸಿದ್ದು ಈಗ ಓಟಿಗೆ

ದೇಶಾದ್ಯಂತ ಕೊರೋನಾ ಆವರಿಸಿದ್ದಾಗ ಕೋಲಾರ ಜನರೂ ಸಂಕಷ್ಟದಲ್ಲಿ ಇದ್ದರು. ಆಗ ಜನರ ಸಂಕಷ್ಟಕೇಳಲು ಬಾರದ ಸಿದ್ದರಾಮಯ್ಯ ಈಗ ಮತ ಕೇಳಲು ಕೋಲಾರಕ್ಕೆ ಬಂದಿದ್ದಾರೆ. ದಿವಾಳಿಯಾದವರು, ಹುಚ್ಚರು ಸರ್ಟಿಫಿಕೆಟ್‌ ಇಲ್ಲವಾದಲ್ಲಿ ಸ್ಪರ್ಧಿಸಬಹುದು. ಆದ್ದರಿಂದ ಸಿದ್ದು ಅವರು ಕೋಲಾರದಿಂದ ಸ್ಪರ್ಧೆ ಮಾಡಬಹುದು ಎಂದು ವ್ಯಂಗ್ಯವಾಡಿದರು.

ಚಾಮುಂಡಿ ಕ್ಷೇತ್ರದಲ್ಲಿ ಒಬ್ಬ ಸಿಎಂ 30-38 ಸಾವಿರಕ್ಕೂ ಹೆಚ್ಚು ಲೀಡ್‌ನಲ್ಲಿ ಸೋಲುತ್ತಿರಲಿಲ್ಲ,ಬಾದಾಮಿಯಲ್ಲಿ ಗೆದ್ದ ಲೀಡ್‌ ಎಷ್ಟು, ಒಬ್ಬ ಮುಖ್ಯಮಂತ್ರಿ ಸೋಲುವ ಸ್ಥಿತಿ ಬರುತ್ತಿರಲಿಲ್ಲ, ಏನಾದ್ರು ಒಂದು ದಿನ ಶ್ರೀರಾಮುಲು ಮನಸ್ಸಿಟ್ಟು ಪ್ರಚಾರ ಮಾಡಿದ್ರೆ ಅಲ್ಲೂ ಸಿದ್ದರಾಮಯ್ಯ ಹೀನಾಯವಾಗಿ ಸೋಲುತ್ತಿದ್ದರು ಎಂದರು.

ಸಿದ್ದರಾಮಯ್ಯ ದಲಿತ ವಿರೋಧಿ

ಸಿದ್ದರಾಮಯ್ಯ ದಲಿತ ವಿರೋಧಿ ಅಂತ ಹೇಳೋದಕ್ಕೆ ಅಂಗೈ ಹುಣ್ಣಿಗೆ ಕನ್ನಡಿ ಹಿಡಿಬೇಕಾ, ಪರಮೇಶ್ವರ್‌ ಅವರನ್ನು ಸೋಲಿಸಿದ್ದು ಯಾರು ಅಂತ ಪರಮೇಶ್ವರ್‌ ಅವರೇ ಹೇಳಿದ್ದಾರೆ. ಕೋಲಾರದಲ್ಲಿ ಸಂಸದ ಮುನಿಸ್ವಾಮಿ ಗೆದ್ದಿರಬಹುದು. ಆದರೆ ಮುನಿಯಪ್ಪ ಸೋಲೊದಕ್ಕೆ ಬಹಳಷ್ಟುಜನ ಕಾಂಗ್ರೆಸಿಗರು ನಮಗೆ ಸಹಾಯ ಮಾಡಿದ್ದಾರೆ ಎಂದರು.

ಕಾಂಗ್ರೆಸ್ಸಿನದ್ದು ಟಿಪ್ಪು ಸಿದ್ಧಾಂತ

ಟಿಪ್ಪು ರಾಜನಲ್ಲ, ಮೈಸೂರು ಒಡೆಯರ ಸೇನಾಧಿಪತಿ ಅಷ್ಟೇ, ಪಾರ್ಶಿ ಭಾಷೆ ಜಾರಿಮಾಡಿದ್ದು ಟಿಪ್ಪು, ರಾಜಮ್ಮಣಿ, ರಾಜ ಪರಿವಾರದವರನ್ನು ಸೆರೆಮನೆವಾಸಕ್ಕೆ ದೂಡಿದ್ದು ಟಿಪ್ಪು, ಕೊಡಗಿನಲ್ಲಿ ನರಮೇಧ, ಕನ್ನಡ ಭಾಷೆಯ ಬದಲಿ ಪಾರ್ಶಿ ಭಾಷೆ ಹೇರಿಕೆ ಮಾಡಿದ್ದನು ಎಂದು ವಿವರಿಸಿದರು.

ಟಿಪ್ಪು ್ಪವಿನ ಕೂಡುಗೆ ಏನು ಎಂಬುದಕ್ಕೆ ಸಾಕ್ಷಿ ಇದೆಯೇ, ಟಿಪ್ಪು ಕೊಡುಗೆ ಶೂನ್ಯ. ಸಿದ್ಧಾಂತದ ವಿರುದ್ಧ ಹೋರಾಟ ಮಾಡಿದ್ದಾರೆ. ಒಡೆಯರ್‌ ಮತ್ತು ಟಿಪ್ಪು್ಪ ನಡುವಿನ ಸಂಘರ್ಷ, ಒಡೆಯರ ಸಿದ್ಧಾಂತವೇ ಸಾವರ್ಕರ್‌ ಸಿದ್ಧಾಂತ. ಎರಡೂ ಒಂದೇ. ಟಿಪ್ಪು ಸಿದ್ಧಾಂತ ಕಾಂಗ್ರೆಸ್‌ ಬೆಂಬಲಿಸುತ್ತದೆ, ಒಡೆಯರ್‌ ಸಿದ್ಧಾಂತ ಬಿಜೆಪಿ ಬೆಂಬಲಿಸುತ್ತದೆ ಎಂದರು.

ಆಲೂಗಡ್ಡೆ ನಾಟಿ ಮಾಡಿ ಚಿನ್ನ ಬೆಳೆಯೋದು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಗಳಿಗೆ ಇಡಿ ನೋಟಿಸ್‌ ಜಾರಿ ಕುರಿತು ಪ್ರತಿಕ್ರಿಯಿಸಿದ ಸಿ.ಟಿ.ರವಿ, ಪ್ರಾಮಾಣಿಕರಿಗೆ ಇಡಿ ಭಯ ಅಗತ್ಯವಿಲ್ಲ. ಅವರ ನಾಯಕ ರಾಹುಲ್‌ ಗಾಂಧಿಗೆ ಅಲೂಗಡ್ಡೆ ಹಾಕಿ ಚಿನ್ನ ತೆಗೆಯಲು ಗೊತ್ತಿದೆ. ಅದಕ್ಕೆ ಇಡಿಯವರು ನೋಟಿಸ್‌ ನೀಡಿದ್ದಾರೆ, ಆಲೂಗಡ್ಡೆ ನಾಟಿ ಚಿನ್ನ ಬೆಳೆಯುವುದನ್ನು ರಾಹುಲ್‌ಗಾಂಧಿಯವರು ಡಿ.ಕೆ.ಶಿವಕುಮಾರ್‌ ಮತ್ತು ರಾಬರ್ಚ್‌ ವಾದ್ರಾರಿಗೆ ಮಾತ್ರ ಹೇಳಿಕೊಟ್ಟಿದ್ದಾರೆ, ಈ ವಿದ್ಯೆ ರೈತರಿಗೂ ಹೇಳಿಕೊಟ್ಟಿದ್ದರೆ ಇದರಿಂದ ರೈತರು ಚಿನ್ನ ಬೆಳೆದಿದ್ದರೆ ಇಂದು ಡಿ.ಕೆ.ಶಿವಕುಮಾರ್‌ಗೆ ಇಡಿ ಸಮಸ್ಯೆ ಎದುರಾಗುತ್ತಲೇ ಇರಲಿಲ್ಲ ಎಂದು ಲೇವಡಿ ಮಾಡಿದರು.

ಮೋದಿ ಹೆಸರೇಳಿದ್ರೆ ಓಟು ಬೀಳುತ್ತೆ, ಮೋದಿ ಹೆಸರೇಳಿದ್ರೆ ಜನರು ಹುಚ್ಚೆದ್ದು ಬರ್ತಾರೆ, ಆದರೆ ಅವರು ರಾಹುಲ್‌ ಗಾಂಧಿ ಹೆಸರೇಳಿದ್ರೆ ಇರೋ ಓಟು ಹೋಗುತ್ತೆ. ಅವರು ಪ್ಯಾಕೇಜ್‌ ಕೊಟ್ಟು ಜನರನ್ನು ಸಭೆಗಳಿಗೆ ಕರೆದುಕೊಂಡು ಬಂದರೂ ಜನ ಹೆಚ್ಚು ಹೊತ್ತು ನಿಲ್ಲೋದಿಲ್ಲ, ಇದು ನಮ್ಮ ಅದೃಷ್ಟಅದು ಕಾಂಗ್ರೆಸ್‌ನವರ ದುರಾದೃಷ್ಟಎಂದರು.

ನಳೀನ್‌ ಕುಮಾರ್‌ ಕಟೀಲ್‌ರನ್ನು ಬಿಜೆಪಿಯವರೇ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಳಿನ್‌ ಕುಮಾರ್‌ ಕಟೀಲ್‌ ಬಗ್ಗೆ ಟೀಕೆ ಮಾಡ್ತಾರೆ ಎಂದ್ರೆ ಕಾಂಗ್ರೆಸ್‌ ನವರಿಗೆ ಅವರ ಸಾಮರ್ಥ್ಯ ಗೊತ್ತಿದೆ ಅದಕ್ಕಾಗಿ ಟೀಕೆ ಮಾಡ್ತಾರೆ.

ಸುಳ್ಳು ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳು, ರಾಜಸ್ಥಾನ ಮತ್ತು ಛತ್ತೀಸ್‌ಗಢ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ, ಅಲ್ಲಿ ಕಾಂಗ್ರೆಸ್‌ ಉಚಿತವಾಗಿ ವಿದ್ಯುತ್‌ ಕೊಡುತ್ತಿದ್ದೀಯಾ, ಅಧಿಕಾರವಿರುವ ಕಡೆ ಕೊಡುತ್ತಿಲ್ಲ, ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಪೆಟ್ರೋಲ್‌ ಮತ್ರು ಡಿಸೇಲ್‌ ಬೆಲೆ ಏರಿಕೆ ಮಾಡಿದೆ. ತಾವು ಸೋಲುತ್ತೇವೆ ಅನ್ನೋದು ಗೊತ್ತಿರುವ ಕಾರಣಕ್ಕೆ, ಸುಳ್ಳು ಹೇಳಿಯಾದರೂ, ಎಟಿಎಂ ಚಾಲೂ ಇಡಲು ಹೇಳುತ್ತಿದ್ದಾರೆ ಎಂದರು.

ಅರಸು ರಾಜಕೀಯವಾಗಿ ಸಫಲತೆ ಕಂಡಿಲ್ಲ

ಜನಾರ್ದನ ರೆಡ್ಡಿ ಹೊಸ ಪಕ್ಷ ವಿಚಾರಕ್ಕೆ ಸಂಬಂಧಿಸಿದ್ದಂತೆ ಮಾತನಾಡಿದ ಅವರು, ದೇವರಾಜ ಅರಸು ಸಹ ಹೊಸ ರಾಜಕೀಯ ಪಕ್ಷ ಕಟ್ಟಿಸಫಲತೆ ಕಂಡಿಲ್ಲ. ಜನಾರ್ದನ ರೆಡ್ಡಿ ಅವರನ್ನು ದೇವರಾಜ ಅರಸುಗಿಂತ ಹೆಚ್ಚಿನ ಸ್ಥಾನದಲ್ಲಿ ನೋಡ್ತಿದ್ರೆ ನನ್ನದೇನೂ ಆಕ್ಷೇಪ ಇಲ್ಲ, ಬಿಜೆಪಿ ಸದಾ ಸಕಾರಾತ್ಮಕವಾಗಿ ಕಾದು ನೋಡುತ್ತೆ ಎಂದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಸಂಬಂಧಿಸಿದ್ದಂತೆ ಭಾರತ ರತ್ನವನ್ನು ಸ್ವಯಂ ಘೋಷಣೆ ಮಾಡಿಕೊಂಡವರು, ಟಿಕೆಟ್‌ ಘೋಷಣೆ ಮಾಡಿಕೊಳ್ಳೋದ್ರಲ್ಲಿ ಏನಿದೆ, ಕೆಲವರದ್ದು ಹೈಕಮಾಂಡ್‌ ಮನೆಯಲ್ಲಿದೆ, ಜನರ ಅಭಿಪ್ರಾಯ ಪಡೆದು ಬಿಜೆಪಿ ಪಕ್ಷದಿಂದ ಅಭ್ಯರ್ಥಿ ಘೋಷಣೆ ಮಾಡುತ್ತೇವೆ, ಪ್ರತಿ ಕ್ಷೇತ್ರದಲ್ಲೂ ಶೇ.80ರಷ್ಟುಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳಿದ್ದಾರೆ. ಅವರೆಲ್ಲಾ ಓಟು ಹಾಕಿದ್ರೆ ಉಳಿದ ಪಕ್ಷಗಳಿಗೆ ಠೇವಣಿ ಸಿಗೋದಿಲ್ಲ ಎಂದು ಹೇಳಿದರು.

ಕಪ್ಪು ಹಣ ಅಕೌಂಟಿಗೆ ಅಂತ ನಾವು ಹೇಳಲಿಲ್ಲ:

ಕಪ್ಪು ಹಣ ತಂದು ನಿಮ್ಮ ಅಕೌಂಟ್‌ಗೆ ಹಾಕ್ತಿವಿ ಅಂತ ನಾವು ಎಲ್ಲೂ ಹೇಳಿಲ್ಲ. ಸಾರ್ವಜನಿಕ ಸೆಕ್ಟರ್‌ಗಳನ್ನು ದುರುಪಯೋಗ ಪಡೆಸಿಕೊಂಡವರು ಈಗ ಜೈಲು, ಬೇಲು ಅಂತಿದ್ದಾರೆ. ಮೋದಿ ಬರ್ಲಿಲ್ಲ ಅಂದಿದ್ರೆ ಭ್ರಷ್ಟರು ಮಹಾರಾಜರ ರೀತಿ ಮೆರಿತ್ತಿದ್ರು. 44 ಕೋಟಿ ಬಡವರಿಗೆ ಕಟ್ಟಿಸಿರುವ ಶೌಚಾಲಯದಲ್ಲಿ ಅದಾನಿ, ಅಂಬಾನಿ ಇದ್ದಾರೆ ಎಂದರು.

Latest Videos
Follow Us:
Download App:
  • android
  • ios