ವೀರೇಂದ್ರಹೆಗ್ಗಡೆರವರ ಸಹಕಾರದ ಮೇರೆಗೆ ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ ಅತ್ಯುತ್ತಮ ಸೇವೆಯಲ್ಲಿ ನಿರತವಾಗಿದ್ದು, ಗ್ರಾಮೀಣ ಪ್ರದೇಶಗಳ ಜನತೆ ಮತ್ತು ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ವದನಕಲ್ಲು ಗ್ರಾಪಂ ಅಧ್ಯಕ್ಷ ಲಿಂಗದಹಳ್ಳಿ ಜಯರಾಮರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು

 ಪಾವಗಡ (ಅ .18): ವೀರೇಂದ್ರಹೆಗ್ಗಡೆರವರ ಸಹಕಾರದ ಮೇರೆಗೆ ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ ಅತ್ಯುತ್ತಮ ಸೇವೆಯಲ್ಲಿ ನಿರತವಾಗಿದ್ದು, ಗ್ರಾಮೀಣ ಪ್ರದೇಶಗಳ ಜನತೆ ಮತ್ತು ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ವದನಕಲ್ಲು ಗ್ರಾಪಂ ಅಧ್ಯಕ್ಷ ಲಿಂಗದಹಳ್ಳಿ ಜಯರಾಮರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala) ಗ್ರಾಮಾಭಿವೃದ್ಧಿ ಯೋಜನೆ ನವನೀತ ನರ್ಸರಿ ಹದ್ರೆ ಮೂಡಬಿದರೆ ತಾಲೂಕು ವತಿಯಿಂದ ಭಾನುವಾರ ತಾಲೂಕಿನ ವದನಕಲ್ಲು ಗ್ರಾಮದ ಶ್ರೀ ತಿಪ್ಪೇರುದ್ರಸ್ವಾಮಿ ದೇವಸ್ಥಾನ (Temple) ಅವರಣದಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ಉಚಿತ ಗೋಡಂಬಿ ಸಸಿ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ನಂಜುಂಡಿ ಸಂಸ್ಥೆಯ ಕಾರ್ಯಕ್ರಮಗಳ ಮಾಹಿತಿ ನೀಡಿ, ಸದುಪಯೋಗಕ್ಕೆ ಕರೆ ನೀಡಿದರು.

ಧರ್ಮಸ್ಥಳ ಯೋಜನೆ ಕೃಷಿ ಮೇಲ್ವಿಚಾರಕ ಬೋರಣ್ಣ ಮಾತನಾಡಿ, ರೈತರ ಪ್ರಗತಿಗೆ ಉತ್ತೇಜಿಸಲು ಹೊಸ ರೀತಿಯ ಸಸಿ ಪರಿಚಯಿಸಲಾಗಿದೆ. ತಾಲೂಕಿನ ರೈತರಿಗೆ ಉಚಿತವಾಗಿ ವಿತರಿಸಲು 8 ಸಾವಿರ ಗೋಡಂಬಿ ಸಸಿ ತರಿಸಲಾಗಿದೆ. ಜಮೀನು ವಿಸ್ತೀರ್‍ಣ ಅನ್ವಯ ಸಸಿಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ತಾಲೂಕಿನ 60 ರೈತರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿ, ಗೋಡಂಬಿ ಸಸಿ ನಾಟಿ ಮತ್ತು ಬೆಳೆ ಸಂರಕ್ಷಣೆ ಕೃಷಿ ವಿಧಾನದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಗೊಡಂಬಿ ನಾಟಿ ಮಾಡಲು ಇಚ್ಚಿಸುವ ರೈತರು 9972401235ಗೆ ಸಂಪರ್ಕಿಸಲು ಮನವಿ ಮಾಡಿದರು.

ಇದೇ ವೇಳೆ ಶ್ರೀ ವದನಕಲ್ಲು ಶ್ರೀ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಸಮಿತಿಯ ಮಂಜುನಾಥ್‌, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಲಿಂಗದಹಳ್ಳಿ ವಲಯ ಮೇಲ್ವಿಚಾರಕ ಹಾಲೇಶ್‌, ಮಂಗಳವಾಡ ಮೂರ್ತಿ, ಜನಜಾಗೃತಿ ವೇದಿಕೆ ಸಂಚಾಲಕರಾದ ರತ್ನಮ್ಮ, ಮಂಜುಳ, ಗ್ರಾಮೀಣ ಮಟ್ಟದ ಸಂಯೋಜಕರಾದ ರವಿ ಇತರೆ ಸ್ವಸಾಹಾಯಕ ಸಂಘದ ಮಹಿಳಾ ಸದಸ್ಯರಿದ್ದರು.

ಗೋಡಂಬಿ ಆರೋಗ್ಯದ ಗುಟ್ಟು : 

ಕಾಜು ಅಥವಾ ಗೋಡಂಬಿ ನಟ್ಸ್ ಗಳಲ್ಲಿ ಅತ್ಯಂತ ಬೇಡಿಕೆಯುಳ್ಳ ನಟ್ಸ್ ಆಗಿದೆ. ಈ ಸಣ್ಣ ಆಕಾರದ ಕಾಯಿ ಪೋಷಕಾಂಶಗಳಿಂದ ತುಂಬಿದೆ. ಗೋಡಂಬಿ ಬೀಜಗಳನ್ನು ಹೆಚ್ಚಾಗಿ ಭಾರತೀಯ ಸಿಹಿತಿಂಡಿ ಮತ್ತು ಸಾಂಪ್ರದಾಯಿಕ ಸಿದ್ಧತೆಗಳಲ್ಲಿ ಅವುಗಳ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ವಿಶಿಷ್ಟವಾದ ಪರಿಮಳವನ್ನು ಹೊಂದಿರುವ ದಪ್ಪ ಮತ್ತು ಕೆನೆಭರಿತ ಗ್ರೇವಿಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆಯಾದರೂ, ಕಾಜು ಅನ್ನು ವಿವಿಧ ರೀತಿಯ ಭಕ್ಷ್ಯಗಳನ್ನು ಅಲಂಕರಿಸಲು ಸಹ ಬಳಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ, ಕಾಜು ವಿಶ್ವದ ಇತರ ಭಾಗಗಳಲ್ಲಿಯೂ ಬಹಳ ಪ್ರಸಿದ್ಧವಾಗಿದೆ.

ಗೋಡಂಬಿ ನಿಮ್ಮ ತೂಕವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿದಿನವೂ ಸೇವಿಸುವ ಆರೋಗ್ಯಕರ ಆಹಾರ ಅಲ್ಲ ಎನ್ನಲಾಗುತ್ತದೆ. ಆದರೂ ಗೋಡಂಬಿಯಿಂದ ಹಲವು ಪ್ರಯೋಜನಗಳಂತೂ ಇದ್ದೆ ಇದೆ. ಅವುಗಳು ಯಾವುವು ಅನ್ನೋದರ ಬಗ್ಗೆ ನೀವು ತಿಳಿದುಕೊಂಡರೆ ಮತ್ತೆ ನಿಮಗೆ ಆರೋಗ್ಯ ಸಮಸ್ಯೆಗಳ ಕುರಿತು ಚಿಂತೆ ಇರೋದಿಲ್ಲ. 

ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ
ಗೋಡಂಬಿ ಆರೋಗ್ಯಕರ ಕೊಬ್ಬನ್ನು ಹೊಂದಿರುವುದರಿಂದ, ಇದು ಆರೋಗ್ಯಕರ ಹೃದಯದೊಂದಿಗೆ ಸಂಬಂಧ ಹೊಂದಿದೆ. ಇದು ಕೊಲೆಸ್ಟ್ರಾಲ್ ನಿಂದ ಮುಕ್ತವಾಗಿದೆ ಮತ್ತು ಹೃದಯದ ಕಾರ್ಯವನ್ನು ಹೆಚ್ಚಿಸಲು ಅಗತ್ಯವಾದ ಪೋಷಕಾಂಶಗಳನ್ನು ಸಹ ನೀಡುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ
ಗೋಡಂಬಿ ಬೀಜಗಳನ್ನು ತಿನ್ನುವುದರಿಂದ ಒಂದು ಪ್ರಮುಖ ಪ್ರಯೋಜನವೆಂದರೆ ಅದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರೋಂಥೋಸಯಾನಿಡಿನ್ಸ್ ಒಂದು ರೀತಿಯ ಫ್ಲೇವನಾಲ್ ಆಗಿದ್ದು ಅದು ಗೆಡ್ಡೆಯ ಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಗೋಡಂಬಿ ತಾಮ್ರ ಮತ್ತು ಪ್ರೋಂಥೋಸಯಾನಿಡಿನ್‌ಗಳಿಂದ ಕೂಡಿದ್ದು ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಹೊಂದಿದೆ.

ತೂಕ ಇಳಿಕೆಗೆ ಸಹಾಯ
ಗೋಡಂಬಿ ಉತ್ತಮ ಕೊಬ್ಬನ್ನು ಹೊಂದಿದ್ದು, ಆರೋಗ್ಯಕರ ದೇಹಕ್ಕೆ ಇದನ್ನು ಶಿಫಾರಸು ಮಾಡಲಾಗುತ್ತದೆ. ಗೋಡಂಬಿ ಬೀಜಗಳಲ್ಲಿರುವ ಕೊಬ್ಬು ಉತ್ತಮ ಕೊಲೆಸ್ಟ್ರಾಲ್ ಬೆಳವಣಿಗೆಗಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕಾರಣವಾಗಿದೆ. ಗೋಡಂಬಿ ಸಾಕಷ್ಟು ಶಕ್ತಿಯನ್ನು ನೀಡುತ್ತದೆ ಮತ್ತು ನಿಮ್ಮನ್ನು ದೀರ್ಘಕಾಲ ತೃಪ್ತಿಪಡಿಸುತ್ತದೆ. ಆದ್ದರಿಂದ, ಸರಿಯಾದ ತೂಕ ನಿರ್ವಹಣೆಗಾಗಿ ನೀವು ಪ್ರತಿದಿನ 3-4 ಗೋಡಂಬಿ ಬೀಜಗಳನ್ನು ಸೇವಿಸಬಹುದು.

ಹೊಳೆಯುವ ಚರ್ಮ
ಗೋಡಂಬಿ ತಾಮ್ರ ಮತ್ತು ಉತ್ಕರ್ಷಣ ನಿರೋಧಕಗಳ ಗುಣ ಹೊಂದಿದೆ. ಇದು ನಿಮ್ಮ ಚರ್ಮವನ್ನು ಕಾಂತಿಯುಕ್ತವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ವಯಸ್ಸಾಗುವಿಕೆಯ ಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ. ಮತ್ತು ತಾಮ್ರವು ಇತರ ಕಿಣ್ವಗಳೊಂದಿಗೆ ಕಾಲಜನ್ ಅನ್ನು ಉತ್ಪಾದಿಸುತ್ತದೆ, ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಕಾರಣವಾಗಿದೆ.

ಕರುಳಿಗೆ ಒಳ್ಳೆಯದು
ಪ್ರತಿದಿನ ಗೋಡಂಬಿ ತಿನ್ನುವುದರಿಂದ ಹೊಟ್ಟೆಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಬಹುದು ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಹೊಟ್ಟೆ ಆರಾಮವಾಗಿ ಆರೋಗ್ಯದಿಂದಿದರಲು ಪ್ರತಿದಿನ ಎರಡು ಗೋಡಂಬಿ ಸೇವಿಸಿ. 

ಕಣ್ಣುಗಳ ಆರೋಗ್ಯ 
ಗೋಡಂಬಿ ಹೆಚ್ಚಿನ ಪ್ರಮಾಣದ ಲುಟೀನ್ ಮತ್ತು ಇತರ ಪ್ರಮುಖ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಅದು ನಮ್ಮ ಕಣ್ಣುಗಳು ಹಾನಿಯಾಗದಂತೆ ರಕ್ಷಿಸುತ್ತದೆ. ಇದು ಆರೋಗ್ಯಕರ ದೃಷ್ಟಿ ನೀಡುತ್ತದೆ.

ನರಗಳ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ
ಮೆಗ್ನೀಸಿಯಮ್ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ನಮ್ಮ ನರಗಳು ಮತ್ತು ಮೂಳೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದಲ್ಲದೆ ನಮ್ಮ ರಕ್ತದೊತ್ತಡವನ್ನೂ ಹೆಚ್ಚಿಸುತ್ತದೆ. ಕಾಜು ನಿಯಮಿತವಾಗಿ ತಿನ್ನುವುದರಿಂದ ನೀವು ಮೆಗ್ನೀಸಿಯಮ್ ಸರಿಯಾದ ಸಮತೋಲನವನ್ನು ಹೊಂದಿರುವಿರಿ ಮತ್ತು ಆದ್ದರಿಂದ ಮೈಗ್ರೇನ್ ಮತ್ತು ದೇಹದ ನೋವುಗಳಿಂದ ಆರಾಮ ಹೊಂದುವಿರಿ.