Asianet Suvarna News Asianet Suvarna News

ಚಾರ್ಮಾಡಿ ಘಾಟ್‌ ರಸ್ತೆಗಳಲ್ಲಿ ವಾಹನ ನಿಲ್ಲಿಸಿದ್ರೆ ಬೀಳುತ್ತೆ ಕೇಸ್

ಪ್ರತಿ ಮಳೆಗಾಲದಲ್ಲಿಯೂ ರಸ್ತೆ ಬದಿ ಗುಡ್ಡ ಜರಿಯುವುದು, ವಾಹನಗಳು ಬ್ಲಾಕ್‌ ಆಗುವಂತಹ ಸಮಸ್ಯೆಗಳು ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಆಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ.

Case to be filed on those who stops vehicle in Charmadi ghat road
Author
Bangalore, First Published Jul 4, 2020, 12:39 PM IST

ಚಿಕ್ಕಮಗಳೂರು(ಜು.04): ಪ್ರತಿ ಮಳೆಗಾಲದಲ್ಲಿಯೂ ರಸ್ತೆ ಬದಿ ಗುಡ್ಡ ಜರಿಯುವುದು, ವಾಹನಗಳು ಬ್ಲಾಕ್‌ ಆಗುವಂತಹ ಸಮಸ್ಯೆಗಳು ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಆಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ.

ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದ್ದು, ವಾಹನ ನಿಲ್ಲಿಸಿದರೆ ಪೊಲೀಸರು ಕೇಸು ದಾಖಲಿಸಿಕೊಳ್ಳಲಿದ್ದಾರೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಪ್ರಯಾಣಿಕರಿಗೆ ಈ ಬಗ್ಗೆ ಸೂಚನೆ ನೀಡುತ್ತಿದ್ದಾರೆ.

ಮನೆಯಂಗಳದಲ್ಲಿತ್ತು 13 ಹೆಬ್ಬಾವು ಮರಿಗಳು: ಇಲ್ಲಿವೆ ಫೋಟೋಸ್

ಸೂಚನೆ ನಾಮಫಲಕ ಹಾಕಿರುವ ಜಿಲ್ಲಾಡಳಿತ ಮಳೆಯ ನಡುವೆ ವಾಹನ ನಿಲ್ಲಿಸಿ ಆಪಾಯ ಸ್ಥಳಗಳ ಜನರ ಓಡಾಟವನ್ನು ಸಂಪೂರ್ಣ ನಿಷೇಧಿಸಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ ವಿಭಾಗದಲ್ಲಿರುವ ಚಾರ್ಮಾಡಿ ಘಾಟ್‌ನಲ್ಲಿ ಮಳೆಗಾಲದಲ್ಲಿ ಅಪಾಯ ಸಂಭವಿಸುತ್ತದೆ.

Case to be filed on those who stops vehicle in Charmadi ghat road

ಗುಡ್ಡಗಳ ಮಧ್ಯೆ ರಸ್ತೆ ಹಾದು ಹೋಗುವುದರಿಂದ ರಸ್ತೆಯ ಬದಿಯಲ್ಲಿ ದೊಡ್ಡ ಜಲಪಾತಗಳನ್ನು ಇಲ್ಲಿ ಕಾಣಬಹುದಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಬಹಳಷ್ಟು ಜನ ಇದನ್ನು ನೋಡಲೆಂದೇ ಪ್ರಯಾಣಿಸುತ್ತಾರೆ. ರಸ್ತೆ ಮಧ್ಯೆ ಇಳಿದು ವಿಡಿಯೋ, ಪೋಟೋ ತೆಗೆಯುವುದನ್ನು ಮಾಡುತ್ತಾರೆ.

 

Follow Us:
Download App:
  • android
  • ios