ಜೋಗ ಜಲಪಾತ ವೀಕ್ಷಿಸಲು ಅಕ್ರಮವಾಗಿ ಪ್ರವಾಸಿಗರಿಗೆ ಅವಕಾಶ ಸೆಕ್ಯುರಿಟಿ ಗಾರ್ಡ್ ಗಳ ಮೇಲೆ ಕ್ರಮ ಕೈಗೊಂಡು ಪ್ರಕರಣ 19 ನಿಯಮಾವಳಿ ಉಲ್ಲಂಘನೆಯ ಪ್ರಕರಣ ದಾಖಲು ಮಾಡಲಾಗಿದೆ

ಶಿವಮೊಗ್ಗ (ಆ.21): ಜೋಗ ಜಲಪಾತ ವೀಕ್ಷಿಸಲು ಅಕ್ರಮವಾಗಿ ಪ್ರವಾಸಿಗರಿಗೆ ಅವಕಾಶ ನೀಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಗಳ ಮೇಲೆ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗಿದೆ. 

Add Asianetnews Kannada as a Preferred SourcegooglePreferred

ಡಿಸಿ ಸೂಚನೆ ಮೇರೆಗೆ ಜೋಗ ಜಲಪಾತ ಪೊಲೀಸ್ ಠಾಣೆಯ ಪಿಎಸ್‌ಐ ನಿರ್ಮಲ ಪ್ರಕರಣ ದಾಖಲು ಮಾಡಿದ್ದಾರೆ. 

ಇಲ್ಲಿನ ಸೆಕ್ಯೂರಿಟಿ ಗಾರ್ಡ್ಗಳಾದ ಚಂದ್ರಶೇಖರ, ಮಂಜುನಾಥ, ಕೃಷ್ಣಪ್ಪ, ಮಂಜುನಾಥ, ರಾಕೇಶ್ , ಪ್ರಭುದಾಸ್ , ಸಂಜು ವಿರುದ್ಧ ಕೋವಿಡ್ -19 ನಿಯಮಾವಳಿ ಉಲ್ಲಂಘನೆಯ ಪ್ರಕರಣ ದಾಖಲು ಮಾಡಲಾಗಿದೆ.

2 ಡೋಸ್‌ ಲಸಿಕೆ ಪಡೆದ 87 ಸಾವಿರ ಜನರಿಗೆ ಕೊರೋನಾ

ಜೋಗ ಜಲಪಾತ ವೀಕ್ಷಣೆಗೆ RTPCR ನೆಗೆಟಿವ್ ಅಥವಾ RAT ಅಥವ ಲಸಿಕೆ ಎರಡು ಡೋಸ್ ನ ವರದಿ ಈ ಮೂರರಲ್ಲಿ ಒಂದು ವರದಿ ನೀಡುವ ಪ್ರಯಾಣಿರಿಗೆ ಮಾತ್ರ ಜೋಗ ವೀಕ್ಷಣೆಗೆ ಅವಕಾಶವಿತ್ತು. 

 ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಅಲ್ಲಿನ ಸೆಕ್ಯೂರಿಟಿಗಳು ಹಣದ ಆಸೆಗೆ ಸಾರ್ವಜನಿಕರನ್ನ ವೀಕ್ಷಿಸಲು ಬಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಸೆಕ್ಯೂರಿಟಿ ಲಂಚದ ಆಸೆಗೆ ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಾರೆ ಎಂದು ಆರೋಪಿಸಿ ಡಿಸಿಗೆ ಸ್ಥಳೀಯರು ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಡಿಸಿ ಸ್ಕ್ವಾಡ್ ನಿನ್ನೆ ಜೋಗಕ್ಕೆ ಭೇಟಿ ನೀಡಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ.