Asianet Suvarna News Asianet Suvarna News

ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಸಾಮೂಹಿಕ ನಮಾಜ್‌: 35 ಜನರ ಮೇಲೆ ಕೇಸ್‌

ಜುಮ್ಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ; ಪ್ರಕರಣ ದಾಖಲು| ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಜುಮ್ಮಾ ಮಸೀದಿಯಲ್ಲಿ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಪ್ರಾರ್ಥನೆ|

Case Register Against 35 People Violation of India LockDown Order in Savanur in Haveri district
Author
Bengaluru, First Published Apr 19, 2020, 8:58 AM IST

ಹಾವೇರಿ(ಏ.19): ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವತೈದು ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. '

ಶುಕ್ರವಾರ ಜಿಲ್ಲೆಯ ಸವಣೂರು ಪಟ್ಟಣದ ಶುಕ್ರವಾರ ಪೇಟೆಯ ಜುಮ್ಮಾ ಮಸೀದಿಯಲ್ಲಿ 30ಕ್ಕೂ ಹೆಚ್ಚು ಜನರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದ ಜನರನ್ನು ಲಾಠಿಯಿಂದ ಬೆಂಡೆತ್ತಿದ್ದರು. 

ಮನವಿಗೆ ಡೋಂಟ್ ಕೇರ್, ಲಾಕ್‌ಡೌನ್ ಉಲ್ಲಂಘಿಸಿ ಪ್ರಾರ್ಥನೆ, ಪೊಲೀಸರಿಂದ ಲಾಠಿ ಚಾರ್ಜ್!

ಪಟ್ಟಣದ ರಾಜ್‌ ಅಹ್ಮದ್‌ ಪಠಾಣ, ಫಜಲ್‌ ಅಹದಖಾನ್‌ ಪಠಾಣ, ಜಾಕೀರಅಹ್ಮದ ಪರಾಶ್‌ ಸೇರಿದಂತೆ ಹಲವರ ಮೇಲೆ ಕಲಂ 143, 323, 188, 269, 353 ಸ/ಕ 149 ಐ.ಪಿ.ಸಿ ಮತ್ತು 2005 ಮತ್ತು ಎಪಿಡಮಿಕ್‌ ಡಿಸಿಜ್‌ ಯಾಕ್ಟ್ 1897 ಕಲಂ 3 ಪ್ರಕರಣ ದಾಖಲಿಸಲಾಗಿದೆ.
 

Follow Us:
Download App:
  • android
  • ios