ಉಡುಪಿ ವಿಡಿಯೋ ಕೇಸ್‌: ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ, ಮೂವರ ಮೇಲೆ ಕೇಸ್‌

ಪ್ರಚೋದನಾಕಾರಿ ಭಾಷಣ ಮಾಡಿದ ಮೂವರ ಮೇಲೆ ಪ್ರಕರಣ ದಾಖಲಿಸಿದ ಉಡುಪಿ ಪೊಲೀಸರು 

Case on three For Provocative Speech During Protest in Udupi grg

ಉಡುಪಿ(ಆ.05):  ಇಲ್ಲಿನ ಪ್ಯಾರಾಮೆಡಿಕಲ್‌ ಕಾಲೇಜು ವಿಡಿಯೋ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಮೂವರ ಮೇಲೆ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಜು.28ರಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಎಸ್ಪಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ಅವರು ‘ಮುಸ್ಲಿಂ ಹುಡುಗಿಯರನ್ನು ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲು ಮಾಡಬೇಡಿ, ಬೇಕಿದ್ದರೆ ಅವರನ್ನು ಮದರಸಗಳಿಗೆ ಸೇರಿಸಲಿ’ ಎಂದು ಹೇಳಿದ್ದರು. 

ಕರಾವಳಿಯಲ್ಲಿ ಹಿಂದೂ ಯುವತಿಯರ ವಿಡಿಯೋ ಕಿಚ್ಚು: SIT ತನಿಖೆಗೆ ಪಟ್ಟು.. ಸಂಘಟನೆಗಳಿಂದ ಪ್ರೊಟೆಸ್ಟ್..!

ಆ.3ರಂದು ಬಜರಂಗದಳ ಮತ್ತು ವಿಹಿಂಪ ಪರಿಷತ್‌ನಿಂದ ಕೃಷ್ಣಮಠದ ಪಾರ್ಕಿಂಗ್‌ ಏರಿಯಾದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಹಿಂಪ ನಾಯಕ ಶರಣ್‌ ಪಂಪ್‌ವೆಲ್‌ ಅವರು, ‘ಮಹಿಳೆಯರು ತಮ್ಮ ರಕ್ಷಣೆಗೆ ಸೌಟು, ಪೊರಕೆಗಳನ್ನು ಬಿಟ್ಟು ಕೈಗೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಬೇಕು, ಅಗತ್ಯವಾದರೆ ತಲವಾರುಗಳನ್ನೂ ಹಿಡಿದುಕೊಳ್ಳಿ’ ಎಂದು ಕರೆ ನೀಡಿದ್ದರು. ಇನ್ನೊಬ್ಬ ಮುಖಂಡ ದಿನೇಶ್‌ ಮೆಂಡನ್‌ ಕೂಡ ಮುಸ್ಲಿಮರ ವಿರುದ್ಧ ಆಕ್ರೋಶದಿಂದ ಮಾತನಾಡಿದ್ದರು. ಈ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Latest Videos
Follow Us:
Download App:
  • android
  • ios